ಪತ್ನಿಯನ್ನೇ ಜೂಜಾಟಕ್ಕಿಟ್ಟ ಪತಿ; ಸೋತ ನಂತರ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ, ಆಸಿಡ್ ದಾಳಿ

ಮಹಾಭಾರತದಲ್ಲಿ ಪಾಂಡವರು ದ್ರೌಪದಿಯನ್ನು ಜೂಜಾಟಕ್ಕಿಂಟ್ಟಂತೆ, ಸ್ನೇಹಿತರ ಜೊತೆಗಿನ ಜೂಟಾಟದಲ್ಲಿ ತನ್ನ ಪತ್ನಿಯನ್ನೇ ಪಣಕ್ಕಿಟ್ಟು, ಆತ ಸೋತ ನಂತರ ಮಹಿಳೆ ಮೇಲೆ ಆತನ ಸ್ನೇಹಿತರು ಸಾಮುಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಬಿಹಾರದ ಮೊಜಾಜಿದ್ಪುರ್‌ನಲ್ಲಿ ನಡೆದಿದೆ.

ಜೂಜುಕೋರ ಪತಿ ತನ್ನ ಸ್ನೇಹಿತರೊಂದಿಗೆ ಜೂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡು ತನ್ನ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ. ಸೋತ ನಂತರ ತನ್ನ ಪತ್ನಿಗೆ ಒಂದು ತಿಂಗಳ ಕಾಲ ತನ್ನ ಸ್ನೇಹಿತರೊಂದಿಗೆ ತೆರಳುವಂತೆ ಹೇಳಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಆಕೆಯ ಮೇಲೆ ಅತ್ಯಾಚಾರ ಎಸಗುವಂತೆ ತನ್ನ ಸ್ನೇಹಿತರಿಗೆ ಹೇಳಿದ್ದಾನೆ.

ಈ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವುದಾಗಿ ಸಂತ್ರಸ್ತೆ ಹೇಳಿದ್ದು, ಆಕೆಯ ಮೇಲೆ ಆಸಿಡ್‌ ಸುರಿದು, ಮನೆಯಲ್ಲಿಯೂ ಕೂಡಿಟ್ಟಿದ್ದಾನೆ. ನವೆಂಬರ್ 02 ರಂದು ಈ ಘಟನೆ ನಡೆದಿದ್ದು, ಅಲ್ಲಿಂದ ಆಕೆ ತಪ್ಪಿಸಿಕೊಂಡು ತನ್ನ ತವರು ಮನೆಗೆ ತೆರಳಿದ ನಂತರ ಘಟನೆ ಬೆಳಕಿಗೆ ಬಂದಿದೆ.

ಆಕೆಯ ಸಂಬಂಧಿಕರು ಆಕೆಯನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾರೆ. ಆಕೆಯ ಪತಿ ಮತ್ತು ಐದು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗಂಡನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದಾರೆ.


Read Also: ದೇಶದ ಚಿತ್ತ ತಮಿಳುನಾಡಿನತ್ತ! ಕುತೂಹಲ ಕೆರಳಿಸಿದೆ ದ್ರಾವಿಡ ನಾಡಿನ ಚುನಾವಣೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights