ಉತ್ತರ ಕೊರಿಯಾದಲ್ಲಿ ತಾಂಡವವಾಡುತ್ತಿದೆ ಹಸಿವು; ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಜನರು!

ಕೋವಿಡ್‌-19 ಸೋಂಕು ಕಾಣಿಸಿಕೊಂಡ ನಂತರ ಉತ್ತರ ಕೊರಿಯಾ ಹಲವಾರು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಒಂದಡೆ, ಕೊರೊನಾ ಸೋಂಕು ಕಾಡುತ್ತಿದ್ದರೆ, ಮತ್ತೊಂದೆಡೆ ಭೀಕರ ಮಳೆ, ಚಂಡಮಾರುತ, ಚೀನಾ ಜೊತೆಗಿನ ಗಡಿ ನಿರ್ಬಂಧ, ವಿಶ್ವಸಂಸ್ಥೆಯ ಭದ್ರತಾ ನಿರ್ಬಂಧಗಳು ಉತ್ತರ ಕೊರಿಯಾವನ್ನು ಬಿಕ್ಕಟ್ಟಿಗೆ ಸಿಲುಕಿಸಿದೆ. ಹೀಗಾಗಿ ಆಹಾರದ ಸಮಸ್ಯೆ ಎದುರಾಗಿದ್ದು, ಜನರು ಹಸಿವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗುತ್ತಿದೆ.

ಉತ್ತರ ಕೊರಿಯದಲ್ಲಿ 2020ರಲ್ಲಿ 50.2 ದಶಲಕ್ಷ ಟನ್ ಆಹಾರ ಧಾನ್ಯಗಳ ಅವಶ್ಯಕತೆಯಿತ್ತು. ಆದರೆ, ಅದು ಕೇವಲ ನಾಲ್ಕು ದಶಲಕ್ಷ ಟನ್ಗಳನ್ನು ಉತ್ಪಾದಿಸಿತ್ತು. 10 ಲಕ್ಷ ಟನ್ ಗೂ ಅಧಿಕ ಆಹಾರದ ಕೊರತೆಯುಂಟಾಗಿತ್ತು ಎಂದು ಸಿಯೋಲ್‌ನಿಂದ ಕಾರ್ಯಾಚರಿಸುತ್ತಿರುವ ಕೊರಿಯನ್ ಅಭಿವೃದ್ಧಿ ಸಂಸ್ಥೆ ತಿಳಿಸಿದೆ.

2020-21ರ ಅವಧಿಯಲ್ಲಿ ಉತ್ತರ ಕೊರಿಯ ಆಮದು ಮಾಡಿಕೊಂಡ ಆಹಾರ ಧಾನ್ಯಗಳ ಪ್ರಮಾಣದಲ್ಲಿ 7.80 ಲಕ್ಷ ಟನ್ ಕೊರತೆಯುಂಟಾಗಿದೆಯೆಂದು ಅದು ಹೇಳಿದೆ.

”ಸದ್ಯದ ಪರಿಸ್ಥಿತಿಯಲ್ಲಿ ಏಳು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು, ಗರ್ಭಿಣಿಯರು ಹಾಗೂ ವಯೋವೃದ್ಧರು ತೀವ್ರವಾದ ಹಸಿವಿಗೆ ತುತ್ತಾಗುತ್ತಿದ್ದಾರೆಂದು ಉತ್ತರ ಕೊರಿಯದ ವಿದ್ಯಮಾನಗಳ ವಿಶೇಷ ತಜ್ಜೆಯಾದ ಹಾಝೆಲ್ ಸ್ಮಿತ್ ತಿಳಿಸಿದ್ದಾರೆ. ಹಾಝೆಲ್ ಅವರು 1998ರಿಂದ 2001ರವರೆಗೆ ಉ. ಕೊರಿಯದಲ್ಲಿ ಯುನಿಸೆಫ್ ಹಾಗೂ ವಿಶ್ವ ಆಹಾರ ಕಾರ್ಯಕ್ರಮ ಏಜೆನ್ಸಿಗಳಿಗಾಗಿ ಆ ದೇಶದ ಕೃಷಿ ದತ್ತಾಂಶದ ವಿಶ್ಲೇಷಕಿಯಾಗಿ ಕೆಲಸ ಮಾಡಿದ್ದರು.

ಉತ್ತರ ಕೊರಿಯದಲ್ಲಿ ಆಹಾರದ ಸಮಸ್ಯೆ ಬಿಗಡಾಯಿಸುತ್ತಿರುವುದಾಗಿ ಉತ್ತರ ಕೊರಿಯದ ಸರ್ವೋಚ್ಚ ನಾಯಕ ಕಿಮ್ ಜೊಂಗ್ ಉನ್ ಅವರು ಜೂನ್ನಲ್ಲಿ ನಡೆದ ವರ್ಕರ್ಸ್ ಪಾರ್ಟಿ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದ್ದರು. ಕಳೆದ ವರ್ಷದ ಚಂಡಮಾರುತದ ಕಾರಣದಿಂದಾಗಿ ಕೃಷಿ ವಲಯವು ಆಹಾರ ಧಾನ್ಯಗಳ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಉತ್ಪಾದಿಸಲು ವಿಫಲವಾಗಿತ್ತು ಎಂದವರು ಹೇಳಿದ್ದರು.

ಇದನ್ನೂ ಓದಿ: ದಕ್ಷಿಣ ಕೊರಿಯಾ: ಇಬ್ಬರು ಮಹಿಳೆಯರಿಗೆ ಲೈಂಗಿಕ ಕಿರುಕುಳ; ಮಾಜಿ ಮೇಯರ್‌ಗೆ 3 ವರ್ಷ ಜೈಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights