ಕೆಲಸದಲ್ಲಿ ಆಭರಣ ಅಂಗಡಿ ನೌಕರನಿಗೆ ಅವಮಾನ : ಪಿಪಿಇ ಕಿಟ್ ಧರಿಸಿ 13 ಕೋಟಿ ದೋಚಿ ಎಸ್ಕೇಪ್!

ದೆಹಲಿಯಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದ್ದ ಪಿಪಿಇ ಕಿಟ್‌ಗಳನ್ನು ಧರಿಸಿದ ವ್ಯಕ್ತಿಯೊಬ್ಬ ಕಲ್ಕಾಜಿಯಲ್ಲಿರುವ ಆಭರಣ ಅಂಗಡಿಯೊಂದಕ್ಕೆ ಪ್ರವೇಶಿಸಿ 13 ಕೋಟಿ ರೂಪಾಯಿ ಕಳ್ಳತನ ಮಾಡಿದ ದೃಶ್ಯ ಸಿಸಿಟಿವಿಯಲ್ಲು ಸೆರೆಯಾಗಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಮೂಲದ 25 ವರ್ಷ ವಯಸ್ಸಿನ ಶೇಖ್ ನೂರ್ ರಹಮಾನ್ ಪಿಪಿಇ ಕಿಟ್ ಧರಿಸಿ ಅಂಗಡಿಯಿಂದ 20 ಕೋಟಿ ರೂಪಾಯಿ ಮೌಲ್ಯದ ಚಿನ್ನ 23,000 ರೂ.ಗಳ ನಗದು ಜೊತೆಗೆ ಎಲ್ಲಾ ಚಿನ್ನದ ವಸ್ತುಗಳೊಂದಿಗೆ ಪರಾರಿಯಾಗಿದ್ದ. 24 ಗಂಟೆಗಳಲ್ಲಿ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಶೇಖ್ ನೂರ್ ರಹಮಾನ್ ಎರಡನೇ ವರ್ಷದಲ್ಲಿ ಪದವಿ ಕೋರ್ಸ್‌ನಿಂದ ಹೊರಗುಳಿದಿದ್ದಾರೆ. ಅವರು ಸುಮಾರು ಎರಡು ವರ್ಷಗಳ ಹಿಂದೆ ಕೋಲ್ಕತ್ತಾದ ಅಂಜಲಿ ಜ್ಯುವೆಲ್ಲರ್ಸ್‌ನಲ್ಲಿ ಕೆಲಸ ಮಾಡಿ ಕಳೆದ ಒಂದು ವರ್ಷದಿಂದ ಕಲ್ಕಾಜಿ ಅಂಗಡಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದನು.

ತನ್ನ ಸಹೋದ್ಯೋಗಿಗಳಿಂದ ಅವಮಾನಿಸಲ್ಪಟ್ಟು ಕಿರುಕುಳಕ್ಕೊಳಗಾದ ಆರೋಪಿ ಸೇಡು ತೀರಿಸಿಕೊಳ್ಳಲು ಬಯಸಿದ್ದರಿಂದ ತಾನು ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆಭರಣ ಅಂಗಡಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಆರೋಪಿ ಜನವರಿ 10 ರಂದು ರಜೆ ಮೇಲೆ ಹೋಗಿದ್ದ ಈ ವೇಳೆ ಕಳ್ಳತನ ಮಾಡಿದ್ದಾನೆ.

ಆರೋಪಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಖಾತೆಗಳನ್ನು ಹೊಂದಿದ್ದಾನೆ. ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಸ್ಕ್ರೂಡ್ರೈವರ್, ಅಲೆನ್ ಕೀ, ಟಾರ್ಚ್ ಮುಂತಾದ ಸಾಧನಗಳನ್ನು ಬಳಸುವ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾನೆ. ಮಾತ್ರವಲ್ಲ ಈತ ಆಭರಣ ಅಂಗಡಿಯನ್ನು ದೋಚಲು ಕಟ್ಟಡಗಳಿಗೆ ನುಗ್ಗುವ ಕೌಶಲ್ಯಗಳನ್ನು ಸಹ ಪಡೆದಿದ್ದನು.

ಸದ್ಯ ದೆಹಲಿ ಪೊಲೀಸರು ಹಲವಾರು ಕೋಟಿ ಮೌಲ್ಯದ ಆಭರಣ ವಸ್ತುಗಳನ್ನು ಮತ್ತು ಪ್ರೆಶರ್ ಐರನ್ ಕಟ್ಟರ್, ಸ್ಕ್ರೂಡ್ರೈವರ್, ಟಾರ್ಚ್, ಹಗ್ಗ ಮತ್ತು ಕಳ್ಳತನದ ಸಮಯದಲ್ಲಿ ಅವರು ಧರಿಸಿದ್ದ ಪಿಪಿಇ ಕಿಟ್ ಅನ್ನು ವಶಪಡಿಸಿಕೊಂಡಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights