ರಾಜ್ಯಗಳ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತ; 8.7 ಲಕ್ಷ ಕೋಟಿ ರೂ. ಆರ್ಥಿಕ ಕೊರತೆ ಸಾಧ್ಯತೆ!

ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಹಳ್ಳಕ್ಕೆ ಕುಸಿದಿದೆ. ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಚಟುವಟಿಕೆಗಳ ಮೇಲೆ ಭಾರೀ ಹೊಡೆತ ಕಂಡಿದ್ದು, ರಾಜ್ಯಗಳ ಬೊಕ್ಕಸಕ್ಕೆ ಸೇರಬೇಕಾದ ತೆರಿಗೆ ಸಂಗ್ರಹದಲ್ಲಿಯೂ ಭಾರೀ ಕುಸಿತು ಕಂಡಿದೆ.

ಇದರಿಂದಾಗಿ ಈ ವರ್ಷದ ತೆರಿಗೆ ಸಂಗ್ರಹ ಕಳೆದ ವರ್ಷಕ್ಕಿಂತ 04 ಪಟ್ಟು ಕೊರತೆ ಕಂಡಿದೆ ಎಂದು ರೇಟಿಂಗ್ ಏಜೆನ್ಸಿ ಕ್ರಿಸಿಲ್ ತನ್ನ ವರದಿಯಲ್ಲಿ ತಿಳಿಸಿದೆ.

ಹೀಗಾಗಿ, ರಾಜ್ಯಗಳ ಜಿಎಫ್ ಡಿ (gross fiscal deficit) 8.7 ಲಕ್ಷ ಕೋಟಿ ಅಥವಾ ಜಿಎಸ್ ಡಿಪಿಯ ಶೇ.4.7 ರಷ್ಟು ಕೊರತೆ ಉಂಟಾಗಲಿದೆ ಎಂದು ಕ್ರಿಸಿಲ್ ವರದಿಯಲ್ಲಿ ತಿಳಿಸಿದೆ.

ತೆರಿಗೆ ಸಂಗ್ರಹ ಕ್ರಮೇಣವಾಗಿ ಸುಧಾರಣೆ ಕಾಣುವ ಸಾಧ್ಯತೆ ಇದ್ದರೂ, ರಾಜ್ಯಗಳಿಗೆ ಆದಾಯ ಕೊರತೆಯ ಸಮಸ್ಯೆಯನ್ನು ತಂದೊಡ್ಡಲಿದ್ದು ದೀರ್ಘಾವಧಿಯಲ್ಲಿ ಸಾಲದ ಅಪಾಯಗಳಿಗೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಈಗಾಗಲೇ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಖರ್ಚು ಹಾಗೂ ಅಗತ್ಯತೆಗಳನ್ನು ಪೂರೈಸುವುದಕ್ಕಾಗಿ ಸಾಲ ಮಾಡಲು ಹೆಚ್ಚುವರಿ ಅವಕಾಶ ಒದಗಿಸಿದ್ದು, ಸಾಲದ ಮಿತಿಯನ್ನು ಈ ಹಿಂದಿದ್ದ ಜಿಎಸ್ ಡಿಪಿಯ ಶೇ.2 ರಿಂದ ಶೇ.3 ಕ್ಕಿಂತ ಹೆಚ್ಚು ಪಟ್ಟು ಸಾಲ ಮಾಡಲು ಅವಕಾಶ ನೀಡಲಾಗಿದೆ. ಇದು ರಾಜ್ಯಗಳಿಗೆ ಸಾಲದ ಹೊರೆಯನ್ನು ಹೆಚ್ಚಿಸುತ್ತದೆ. 18 ರಾಜ್ಯಗಳಲ್ಲಿ ನಡೆದ ಅಧ್ಯಯನದಿಂದ ಕ್ರಿಸಿಲ್ ಈ ವರದಿಯನ್ನು ಪ್ರಕಟಿಸಿದೆ.

Read Also: ಕೊರೊನಾದಿಂದ ದೇಶದ ಆರ್ಥಿಕತೆಯೇ ಹಳ್ಳ ಹಿಡಿದರೂ ಅದಾನಿ ಆಸ್ತಿ ಹೆಚ್ಚಾಗಿದ್ದು ಹೇಗೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights