ಕ್ರೀಡಾ ಸಂಖ್ಯಾ ಶಾಸ್ತ್ರವನ್ನೇ ನೆಚ್ಚಿಕೊಂಡು ಹೆಸರು ಮಾಡಿದ ಎಚ್.ಆರ್.ಗೋಪಾಲಕೃಷ್ಣ!

ಅಂಕಿ ಅಂಶಗಳು ಕ್ರೀಡಾ ಸಾಧಕರ ಸಾಧನೆಗೆ ಹಿಡಿದ ಕೈಗನ್ನಡಿ. ಕಂಪ್ಯೂಟರ್ ಯುಗದಲ್ಲಿ ಬೆರಳ ತುದಿಯಲ್ಲಿ ಇರುವ ಅಂಕಿ ಅಂಶಗಳನ್ನು ಹಿಂದೆ ಕಲೆ ಹಾಕಲು ಕಷ್ಟ ಪಡಬೇಕಿತ್ತು. ಆದರೆ, ಈ ಕಷ್ಟದ ವಿಷಯವನ್ನೇ ನೆಚ್ಚಿಕೊಂಡು ಹೆಸರು ಮಾಡಿದವರು ಕರ್ನಾಟಕದ ಖ್ಯಾತ ಸಂಖ್ಯಾ ಶಾಸ್ತ್ರಜ್ಞ ಎಚ್.ಆರ್.ಗೋಪಾಲಕೃಷ್ಣ.

ಇವರ ಹೆಸರು ಕೇಳಿದರೆ, ಈ ವ್ಯಕ್ತಿ ನಮಗೆ ತಿಳಿದೇ ಇಲ್ಲ ಎಂಬ ಭಾವನೆ ಬರುತ್ತದೆ. ಆದರೆ ನಿಮ್ಮ ನೆಚ್ಚಿನ ಆಟಗಾರನ ಸಾಧನೆಯ ಬಗ್ಗೆ ಇವರಲ್ಲಿ ನೀವು ಕೇಳಿದಾಗ, ನೀವು ಊಹಿಸದಷ್ಟು ಅಂಕಿ ಅಂಶಗಳನ್ನು ನೀಡುತ್ತಾರೆ. ಇವರ ಈ ಸಾಧನೆಯನ್ನು ನೋಡಿದಾಗ ಬಾಯಿಯ ಮೇಲೆ ಬೆರಳು ಇಟ್ಟುಕೊಳ್ಳುವುದು ಗ್ಯಾರಂಟಿ. ಸುಮಾರು ಐದು ಶತಮಾನ ಗೋಪಾಲಕೃಷ್ಣ ಈ ಕ್ಷೇತ್ರದಲ್ಲೇ ಕೃಷಿ ಮಾಡಿದ್ದಾರೆ. ಇದೇ ಗುರುವಾರ (12-8-2021)ಕ್ಕೆ 75 ವಸಂತಗಳನ್ನು ಪೂರ್ತಿಗೊಳಿಸಿದ ಇವರು ಇನ್ನು ಉತ್ಸಾಹದ ಚಿಲುಮೆ.

Rahul Dravid Birthday Special: The Wall In Numbers - A Statistical Tribute  To Former India Captain

ಸಂಖ್ಯಾ ಶಾಸ್ತ್ರಜ್ಞರಾಗಿ ಶತಕಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಿದ ಇವರು, ಹಿರಿಯ ಹಾಗೂ ಕಿರಿಯ ಆಟಗಾರರು ಚಿರಪರಿಚಿತ. ಇವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಹಲವು ಕ್ರೀಡಾ ಸಾಧಕರು, ಅಭಿಮಾನಿಗಳು ಶುಭ ಕೋರಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಎಂ.ಎಸ್.ಧೋನಿಯ ‘ಡ್ಯಾಶಿಂಗ್ ಲುಕ್’!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights