ಅಜಯ್ ಸಿಂಗ್ ಬಿಷ್ಠ್ ಎಂಬಾತ ಯೋಗಿ ಆದಿತ್ಯನಾಥ್ ಆದದ್ದು ಹೇಗೆ ಗೊತ್ತೇ?

ಉತ್ರರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯಾನಾಥ್‌ ಅವರ ಮೊದಲ ಹೆಸರು ಅಜಯ್ ಸಿಂಗ್ ಬಿಷ್ಠ್. ರಾಜಕೀಯ ಪ್ರವೇಶಕ್ಕೂ ಮುನ್ನ ಅಜಯ್ ಸಿಂಗ್ ಬಿಷ್ಠ್ ಆಗಿದ್ದ ಯೋಗಿ ಆಧಿತ್ಯಾನಾಥ್‌, ತಮ್ಮ 21ನೇ ವಯಸ್ಸಿನಲ್ಲಿ ಗೋರಖನಾಥ ಮಠದ ಪ್ರಧಾನ ಅರ್ಚಕ ಮಹಂತ್ ಅವಿದ್ಯಾನಾಥ್ ಅವರ ಶಿಷ್ಯರಾಗಿ ಸೇರಿದ್ದರು.

ರಾಜಕಾರಣಿಯೂ ಅರ್ಚರೂ ಆಗಿದ್ದ ಮಹಂತ್‌ ಅವಿದ್ಯಾನಾಥ್‌ ಗೋರಕ್‌ಪುರ್‌ ಲೋಕಸಭಾ ಕ್ಷೇತ್ರದ ಸಂಸದರೂ ಆಗಿದ್ದರು. 1996ರಲ್ಲಿ ನಡೆದ ಚುನಾವಣೆಯಲ್ಲಿ ಅಜಯ್ ಸಿಂಗ್ ಬಿಷ್ಠ್ ಅವರು ಮಹಂತ್ ಅವಿದ್ಯಾನಾಥ್ ಅವರ ಚುನಾವಣಾ ಪ್ರಚಾರವನ್ನು ನಿರ್ವಹಿಸುವ ಉಸ್ತುವಾರಿ ವಹಿಸಿಕೊಂಡು ರಾಜಕೀಯ ಪ್ರವೇಶಿದರು.

ನಂತರದಲ್ಲಿ, 1998 ರಲ್ಲಿ, ಮಹಂತ್‌ ಅವಿದ್ಯಾನಾಥ್ ಸಕ್ರಿಯ ರಾಜಕಾರಣದಿಂದ ನಿವೃತ್ತರಾದರು. ತಮ್ಮ ನಿವೃತ್ತಿಯ ಸಂದರ್ಭದಲ್ಲಿ ಅಜಯ್ ಸಿಂಗ್ ಬಿಷ್ಠ್ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು. ನಂತರ, 1988ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ ಅಜಯ್ ಸಿಂಗ್ ಬಿಷ್ಠ್, ತಮ್ಮ ಹೆಸರನ್ನು ಯೋಗಿ ಆಧಿತ್ಯಾನಾಥ್‌ ಎಂದು ಮರು ನಾಮಕರಣ ಮಾಡಿಕೊಂಡರು.


ಇದನ್ನೂ ಓದಿ: ಬಿಎಸ್‌ವೈ ಪುತ್ರ ವಿಜಯೇಂದ್ರ ವಿರುದ್ಧ FIR ದಾಖಲಿಸದ DCP ವಿರುದ್ಧ ದೂರು ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights