Hotels open : ಹೋಟೆಲ್ ಉದ್ಯಮ ಸೋಮವಾರದಿಂದ ಪುನಾರಂಭ ಸಾಧ್ಯತೆ..?

ಕಳೆದ ಎರಡು ತಿಂಳ ವನವಾಸದಿಂದ ತತ್ತರಿಸಿ ಹೋಗಿರುವ ಹೋಟೆಲ್ ಉದ್ಯಮ ಸೋಮವಾರದಿಂದ ಪುನಾರಂಭಗೊಳ್ಳುವ ಸಾಧ್ಯತೆಗಳಿವೆ. ಪಾರ್ಸಲ್ ಸೇವೆಯಿಂದ ಏನೂ ಗಿಟ್ಟದು. ಪೂರ್ಣ ಪ್ರಮಾಣದಲ್ಲಿ ಸೇವೆ ನೀಡಲು ಅವಕಾಶ ಕೊಡಿ ಎಂಬ ಹೋಟೆಲು ಮಾಲಿಕರ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರಕುವ ವಿಶ್ವಾಸವಿದೆ.

ಹೋಟೆಲುಗಳ ಮರು ಆರಂಭಕ್ಕೆ ಅನುಮತಿ ನೀಡುಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಹ ಗೃಹ ಸಚಿವಾಲಯಕ್ಕೆ ಮನವಿ ಮಾಡಿದೆ.  ಈ ಸಂಬಂಧ ಗೃಹ ಇಲಾಖೆಯು ಮಾರ್ಗಸೂಚಿ ಹೊರಡಿಸುವ ನಿರೀಕ್ಷೆ ಇದ್ದು, ಅದಾದರೇ ಸೋಮವಾರದಿಂದಲೇ ಹೋಟೆಲುಗಳಲ್ಲಿ ಸೇವೆ ಲಭ್ಯವಾಗಲಿದೆ.

ಈ ಮಧ್ಯೆ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅವಕಾಶ ನೀಡದಿದ್ದರೇ ಸೋಮವಾರದಿಂದಲೇ ಪಾರ್ಸಲ್ ಸೇವೆಯನ್ನು ಸಹ ಸ್ಥಗಿತಗೊಳಿಸುವುದಾಗಿ ಹೋಟೆಲು ಮಾಲಿಕರು ಎಚ್ಚರಿಕೆ ನೀಡಿದ್ದಾರೆ. ಇದೇ 25ರಿಂದ ದೇಶೀಯ ವಿಮಾನಯಾನ ಮತ್ತು ರೈಲು ಸೇವೆಗಳು ಪುನಾರಂಭಗೊಳ್ಳಲಿದ್ದು ಪ್ರಯಾಣಿಕರ ಆಗಮನವೂ ಗಣನೀಯವಾಗಿ ಹೆಚ್ಚಲಿದೆ.

ಇಂತಹ ಸಂದರ್ಭದಲ್ಲಿ ಹೋಟೆಲುಗಳು ಬಂದಾ ಆದರೆ ಅವರು ಊಟೋಪಚಾರಕ್ಕೆ ಎಲ್ಲಿಗೆ ಹೋಗಬೇಕು ಎಂಬುದು ಚರ್ಚೆಯ ವಿಷಯವಾಗಿದೆ. ಹೋಟೆಲುಗಳ ಪುನಾರಂಭಕ್ಕೆ ಅವಕಾಶ ನೀಡಬೇಕೆಂದು ರಾಜ್ಯ ಸರಕಾರ ಸಹ ಗೃಹ ಇಲಾಖೆಗೆ ಒತ್ತಾಐ ಪೂರ್ವಕವಾಗಿ ಮನವಿ ಮಾಡಿದೆ.

ಮಾರ್ಚ್ ಕೊನೆಯ ವಾರದಲ್ಲಿ ಜಾರಿಯಾದ ಲಾಕ್‌ಡೌನ್ ನಂತರದಲ್ಲಿ ಹೋಟೆಲುಗಳು ಮುಚ್ಚಿ ಉದ್ಯಮ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಒಂದು ಅಂದಾಜಿನ ಪ್ರಕಾರ ಲಾಕ್‌ಡೌನ್ ತೆರವಾದರೂ ಪೂರ್ಣ ಪ್ರಮಾಣದ ಚೇತರಿಕೆಗೆ ಹೋಟೆಲುಗಳಿಗೆ ಆರರಿಂದ ಎಂಟು ತಿಂಗಳ ಬೇಕಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights