‘ಹುಡುಗಿಯರ ಕೈ ಹಿಡಿಯುವುದು, ಪ್ಯಾಂಟ್ ಜಿಪ್ ತೆರೆಯುವುದು ಲೈಂಗಿಕ ದೌರ್ಜನ್ಯವಲ್ಲ’: ಬಾಂಬೆ ಹೈಕೋರ್ಟ್

ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು ಮತ್ತು ಅವನ ಪ್ಯಾಂಟ್‌ನ ಜಿಪ್ ತೆರೆಯುವುದು ಲೈಂಗಿಕ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ನ್ಯಾಯಪೀಠ ತೀರ್ಪು ನೀಡಿದೆ.

ಜನವರಿ 15 ರಂದು ಐದು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ್ದಕ್ಕಾಗಿ ಶಿಕ್ಷೆಗೊಳಗಾದ 50 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ಮೇರೆಗೆ ನ್ಯಾಯಮೂರ್ತಿ ಪುಷ್ಪಾ ಗಣದೇವಾಲಾ ಅವರ ಏಕ ಪೀಠ ಈ ತೀರ್ಪು ನೀಡಿದೆ.

ಅಪರಾಧಿ ಲಿಬ್ನಸ್ ಕುಜೂರ್ ಎಂಬಾತ ಅಕ್ಟೋಬರ್ 2020 ರಲ್ಲಿ ಐಪಿಸಿಯ 354-ಎ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ), 10 (ಉಲ್ಬಣಗೊಂಡ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಶಿಕ್ಷೆಗೊಳಗಾಗಿದ್ದನು. ಜೊತಗೆ ಪೋಕ್ಸೊ ಕಾಯಿದೆಯ 12 (ಲೈಂಗಿಕ ಕಿರುಕುಳ)ರಡಿ ಆತನಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ನ್ಯಾಯಪೀಠಕ್ಕೆ ಆರೋಪಿ ಅರ್ಜಿ ಸಲ್ಲಿಸಿದ್ದನು.

ಅರ್ಜಿ ವಿಚಾರಣೆ ವೇಳೆ ಆದರೆ ನ್ಯಾಯಮೂರ್ತಿ ಗಣದೇವಾಲಾ ಅವರು,”ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಲ್ಲಿ ಮನೆಯೊಳಗೆ ನುಗ್ಗುವಿಕೆ ಲೈಂಗಿಕ ದೌರ್ಜನ್ಯವಾಗುವುದಿಲ್ಲ. ದೈಹಿಕ ಸಂಪರ್ಕ ಹೊಂದಲು ಪ್ರಯತ್ನಿಸರಬೇಕು. ಜೊತೆಗೆ ತಾಯಿ ಕೊಟ್ಟ ಹೇಳಿಕೆಯಲ್ಲಿ ಆರೋಪಿ ಅವಳ ಮೇಲೆ ಕೈ ಹಾಕಿದ್ದಾನೆ. ಪ್ಯಾಂಟ್ ಜಿಪ್ ಓಪನ್ ಮಾಡಿದ್ದಾನೆಂದು ಇದೆ. ಆದರೆ ಇವು ಲೈಂಗಿಕ ದೌರ್ಜನ್ಯ ಕೃತ್ಯಗಳಲ್ಲಿ ಹೊಂದಿಕೆಯಾಗುವುದಿಲ್ಲ” ಎಂದು ಹೇಳಿದ್ದಾರೆ.

ಜೊತೆಗೆ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿ (ಕುಜೂರ್) ಮೇಲಿನ ಕ್ರಿಮಿನಲ್ ಕೇಸ್ ಒಪ್ಪಿಕೊಳ್ಳಲು ಪ್ರಸ್ತುತ ಸಾಕ್ಷಿಗಳು ಸಾಕಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣ ಏನು..?

ಆರೋಪಿ ಕುಜೂರ್ ಫೆಬ್ರವರಿ 12, 2018 ರಂದು ತಾಯಿ ಕೆಲಸಕ್ಕೆ ಹೋಗಿದ್ದಾಗ ಸಂತ್ರಸ್ತೆಯ ಮನೆಗೆ ಪ್ರವೇಶಿಸಿದ್ದನು. ತಾಯಿ ಕೆಲಸದಿಂದ ಹಿಂದಿರುಗಿದಾಗ ಆರೋಪಿ ತನ್ನ ಪ್ಯಾಂಟ್ನ ಜಿಪ್ನೊಂದಿಗೆ ಮಗಳ ಕೈಯನ್ನು ಹಿಡಿದಿರುವುದನ್ನು ಅವಳು ಕಂಡಿದ್ದಾಳೆ.

ತಾಯಿ ಕೆಳ ನ್ಯಾಯಾಲಯದಲ್ಲಿ ತನ್ನ ಸಾಕ್ಷ್ಯವನ್ನು ದಾಖಲಿಸುವಾಗ ಆರೋಪಿ ವ್ಯಕ್ತಿಯು ತನ್ನ ಖಾಸಗಿ ಭಾಗವನ್ನು ಪ್ಯಾಂಟ್‌ನಿಂದ ತೆಗೆದಿದ್ದಾನೆ. ಜೊತೆಗೆ ಸಂತ್ರಸ್ತೆಯನ್ನು ಮಲಗಲು ಹೇಳಿದ್ದಾಗಿ ಮಗಳು ತಿಳಿಸಿದ್ದಾಳೆ ಎಂದು ತಾಯಿ ಹೇಳಿದ್ದಳು.

ಆದರೆ ಈ ಪ್ರಕರಣ ವಿಚಾರಣೆಯಲ್ಲಿ  ನ್ಯಾಯಪೂರ್ತಿ ಪುಷ್ಪಾ ಗಣದೇವಾಲಾ ನೀಡಿದ ತೀರ್ಪು ನಿರೀಕ್ಷೆಗೂ ಮೀರಿದ್ದಾಗಿದ್ದು ಆರೋಪಿಯನ್ನು ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಆ ಮೂಲಕ ಹೈಕೋರ್ಟ್ ನಲ್ಲಿ ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು 10 ರ ಅಡಿಯಲ್ಲಿ ದಾಖಲಾಗಿದ್ದ ಕುಜೂರ್ ಅವರ ಶಿಕ್ಷೆಯನ್ನು ಕೊನೆಗೊಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights