Hockey : lock down ನಲ್ಲಿ online ನಲ್ಲಿ ಅನುಭವ ಹಂಚಿಕೊಳ್ಳುತ್ತಿರುವ ವಂದನಾ ಕಟಾರಿಯಾ

ಭಾರತ ಮಹಿಳಾ ಹಾಕಿ ತಂಡದ ಅನುಭವಿ ಸ್ಟ್ರೈಕರ್ ವಂದನಾ ಕಟಾರಿಯಾ ಅವರು ತಮ್ಮ ಅನುಭವವನ್ನು ತಂಡದ ಯುವ ಆಟಗಾರೊಣದಿಗೆ ಹಂಚಿಕೊಳ್ಳಲಿದ್ದು, ಇದು ಭರವಸೆಯ ಆಟಗಾರರಿಗೆ ಉಪಯುಕ್ತವಾಗಲಿದೆ ಎಂದು ವಂದನಾ ನಂಬಿದ್ದಾರೆ.

2007 ರಲ್ಲಿ ಹಿರಿಯ ತಂಡದಲ್ಲಿ ಆಡಿದ್ದ ವಂದನಾ, ಯುವ ಆಟಗಾರರಿಗೆ ತನ್ನ ಅನುಭವದಿಂದ ಸಹಾಯ ಆಗುತ್ತದೆ. ಈ ಆಟಗಾರರಿಗೆ ಮಾರ್ಗದರ್ಶಿಯಾಗಿ ವಂದನಾ ಸಹಾಯ ಮಾಡುತ್ತಾರೆ.

“ನನ್ನ ಅನುಭವದಿಂದ, ನಾನು ತಂಡದಲ್ಲಿ ಅನೇಕ ಯುವ ಆಟಗಾರರನ್ನು ಬೆಳಸಬಹುದು. ವಿಶೇಷವಾಗಿ ಮಿಡ್‌ಫೀಲ್ಡ್ ಮತ್ತು ಫಾರ್ವರ್ಡ್ ಲೈನ್‌ನಲ್ಲಿ ನಾನು ಮೆಂಟರ್ ಕೆಲಸ ಮಾಡಲು ನಿಜವಾಗಿಯೂ ಆನಂದಿಸುತ್ತೇನೆ. ನನ್ನ ಅನುಭವವು ಯುವ ಆಟಗಾರರಿಗೆ ಸಹಾಯ ಮಾಡುತ್ತದೆ ಎಂದು ನನಗೆ ನಂಬಿಕೆ ಇದೇ ಎಂದು ತಿಳಿಸಿದ್ದಾರೆ.

“ನಾನು 15 ನೇ ವಯಸ್ಸಿನಲ್ಲಿ ಆಟವಾಡಲು ಪ್ರಾರಂಭಿಸಿದಾಗ, ನಾನು ತುಂಬಾ ನಿರ್ಭಯವಾಗಿ ಆಡುತ್ತಿದ್ದೆ. ನನ್ನ ಕೌಶಲ್ಯ ದಿಂದ ಗೋಲುಗಳನ್ನು ಬಾರಿಸಲು ನಾನು ಪ್ರಯತ್ನಿಸಿದೆ. ನನ್ನ ಆಟವೂ ವಿಕಸನಗೊಂಡಿದೆ ಮತ್ತು ಭಾರತ ಮತ್ತು ತಂಡದ ಆಟಗಾರರಿಗಾಗಿ ಆಡುವುದನ್ನು ನಾನು ಆನಂದಿಸುತ್ತೇನೆ” ಎಂದಿದ್ದಾರೆ.

 

“ನಿಸ್ಸಂಶಯವಾಗಿ, ತಂಡದ ಎಲ್ಲ ಆಟಗಾರರು ನಾವು ಮೈದಾನದಲ್ಲಿ ಹಾಕಿ ಆಡಬೇಕೆಂದು ಬಯಸುತ್ತೇವೆ. ಆದರೆ ಇದೀಗ ನಮ್ಮ ಇತರ ಅಂಶಗಳನ್ನು ಸುಧಾರಿಸಲು ನಮಗೆ ಅವಕಾಶ ಸಿಕ್ಕಿದೆ ಇದರಿಂದ ಮುಂಬರುವ ಸಮಯದಲ್ಲಿ ನಮ್ಮ ತಂಡವು ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು” ಎಂದು ವಂದನಾ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights