ಗಗನ ಮುಟ್ಟಿದ ಪೆಟ್ರೋಲ್‌ ಬೆಲೆ; ಇಂಧನಕ್ಕಿಂತ ತೆರಿಗೆಯೇ ಅಧಿಕ!

ನವೆಂಬರ್ 20 ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಹಲವು ಬಾರಿ ಇಂಧನ ಬೆಲೆಯನ್ನು ಹೆಚ್ಚಿಸಿದೆ. ಕಳೆದ 18 ದಿನಗಳಲ್ಲಿ ಪೆಟ್ರೋಲ್‌ ಬೆಲೆ 2.65 ರೂ ಮತ್ತು ಡೀಸೆಲ್‌ ಬೆಲೆ 3.41 ರೂಗಳನ್ನು ಏರಿಕೆಯಾಗಿದೆ. ಹೀಗಾಗಿ ಪೆಟ್ರೋಲ್‌ ಬೆಲೆ ದೆಹಲಿಯಲ್ಲಿ 83.71 ರೂ, ಡೀಸೆಲ್‌ ಬೆಲೆ 73.87 ರೂ ಇದ್ದರೆ, ಮುಂಬೈನಲ್ಲಿ ಪೆಟ್ರೋಲ್‌ 90.34 ರೂ ಮತ್ತು ಡೀಸೆಲ್‌ 90.51 ರೂಪಾಯಿಯ ಗಡಿ ಮುಟ್ಟಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 48.61 ಡಾಲರ್‌ ಇದ್ದರೂ ಕೇಂದ್ರ ಸರ್ಕಾರ ಪ್ರೆಟ್ರೋಲ್‌-ಡೀಸೆಲ್‌ ಬೆಲೆಯನ್ನು ದಿನೇ-ದಿನೇ ಗಣನೀಯವಾಗಿ ಏರಿಸುತ್ತಲೇ ಇದೆ. ಅಸಲಿ ಇಂಧನ ಬೆಲೆಗಿಂತ ಅದಕ್ಕೆ ವಿಧಿಸುತ್ತಿರುವ ತೆರಿಗೆಯೇ ಹೆಚ್ಚಗಿರುವುದರಿಂದಾಗಿ ಭಾರತದಲ್ಲಿ ಇಂಧನ ಬೆಲೆ ಗಗನ ಮುಟ್ಟಿದೆ.

ಕೇಂದ್ರ ಸರ್ಕಾರ ಇಂಧನ ಮೇಲೆ ವಿಧಿಸುವ ಅಧಿಕ ಅಬಕಾರಿ ಸುಂಕ ಮತ್ತು ವ್ಯಾಟ್ ದರ ಸೇರಿ ಪೆಟ್ರೋಲ್ ಬೆಲೆಯ ಶೇಕಡಾ 63 ಮತ್ತು ಡೀಸೆಲ್‌ಗೆ ಶೇಕಡಾ 60ರಷ್ಟು ತೆರಿಗೆ ವಿಧಿಸಲಾಗುತ್ತದೆ. ನವೆಂಬರ್ 19ರಂದು ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 81.06 ರೂಪಾಯಿಯಿದ್ದು, ಗ್ರಾಹಕರು 51.69 ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಅದೇ ರೀತಿ ಡೀಸೆಲ್ ದರ 71.46 ರೂಪಾಯಿ ಇದ್ದು, 42.59 ರೂಪಾಯಿ ತೆರಿಗೆ ಪಾವತಿಸಿದ್ದಾರೆ.

ಮಾರ್ಚ್ 16 ಮತ್ತು ಮೇ 5ರಂದು ಎರಡು ಬಾರಿ ಕೇಂದ್ರ ಸರಕಾರ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, ಪೆಟ್ರೋಲ್‌ಗೆ 13 ರೂಪಾಯಿ ಹಾಗೂ ಡೀಸೆಲ್‌ಗೆ 16 ರೂಪಾಯಿ ಹೆಚ್ಚಿಸಿದೆ.


ಇದನ್ನೂ ಓದಿ: BJP ಸರ್ಕಾರದ ಭೂಸುಧಾರಣಾ ಮಸೂದೆಗೆ JDS‌ ಬೆಂಬಲ; ಪರಿಷತ್‌ನಲ್ಲಿ ಅಂಗೀಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights