ಇಂಧನ ಬೆಲೆ ಏರಿಕೆ ವಿರೋಧಿಸಿ ಎಲೆಕ್ಟ್ರಿಕ್ ಸ್ಕೂಟರ್‌ ಸವಾರಿ ಮಾಡಿದ ಮಮತಾ ಬ್ಯಾನರ್ಜಿ!

ಹೆಲ್ಮೆಟ್ ಮತ್ತು ಪ್ಲ್ಯಾಕಾರ್ಡ್ ನೇತುಹಾಕಿಕೊಂಡು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಇಂಧನ ಬೆಲೆಗಳನ್ನು ಗಗನಕ್ಕೇರಿಸುವುದನ್ನು ವಿರೋಧಿಸಿ ರಾಜ್ಯ ಸಚಿವಾಲಯದ ನಬಣ್ಣಾಗೆ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪ್ರಯಣಿಸಿದರು.

ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಸ್ಕೂಟರ್ ಸವಾರಿ ಮಾಡಿದ ಬಂಗಾಳ ಸಚಿವ ಫಿರ್ಹಾದ್ ಹಕೀಮ್ ಅವರ ಹಿಂದೆ ಮಮತಾ ಬ್ಯಾನರ್ಜಿ ಕುಳಿತಿದ್ದರು.

ಹೆಲ್ಮೆಟ್ ಧರಿಸಿ ಸ್ಕೂಟರ್ ಮೇಲೆ ಕುಳಿತ ಮಮತಾ ಬ್ಯಾನರ್ಜಿ ಕುತ್ತಿಗೆಗೆ ಹಾಕಿಕೊಂಡ ದೆವ್ವದ ಮುಖವನ್ನು ಹೊಂದಿರುವ ಪ್ಲ್ಯಾಕಾರ್ಡ್ನಲ್ಲಿ “ನಿಮ್ಮ ಬಾಯಿಯಲ್ಲಿ ಏನಿದೆ? ಪೆಟ್ರೋಲ್ ಬೆಲೆ ಏರಿಕೆ. ಡೀಸೆಲ್ ಬೆಲೆ ಏರಿಕೆ. ಅಡುಗೆ ಅನಿಲ ಬೆಲೆ ಏರಿಕೆ” ಎಂದು ಬರೆಯಲಾಗಿತ್ತು.

ಐದು ಕಿ.ಮೀ ಪ್ರಯಾಣ ಮಾಡಿ ನಬಣ್ಣ ತಲುಪಿದ ನಂತರ, ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ಸರ್ಕಾರವನ್ನು ದೂಷಿಸಿದರು. “ನಾವು ಇಂಧನ ಬೆಲೆ ಏರಿಕೆಯನ್ನು ವಿರೋಧಿಸುತ್ತಿದ್ದೇವೆ. ಮೋದಿ ಸರ್ಕಾರ ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತದೆ ” ಎಂದು ಕಿಡಿ ಕಾರಿದರು.

” ಮೋದಿ ಮತ್ತು ಅಮಿತ್ ಷಾ ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಇದು ಜನ ವಿರೋಧಿ ಸರ್ಕಾರ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮತ್ತು ಈಗ ಪೆಟ್ರೋಲ್ ಬೆಲೆಯಲ್ಲಿನ ವ್ಯತ್ಯಾಸವನ್ನು ನೀವು ನೋಡಬಹುದು” ಎಂದರು.

ಪ್ರಮುಖ ತೈಲ ಉತ್ಪಾದಕ ರಾಷ್ಟ್ರಗಳ ಉತ್ಪಾದನಾ ಕಡಿತದಿಂದ ಪ್ರಚೋದಿಸಲ್ಪಟ್ಟ ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಹೆಚ್ಚಳವು ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತೀವ್ರ ಏರಿಕೆಗೆ ಕಾರಣವಾಗಿದೆ.

ಎರಡು ದಿನಗಳ ವಿರಾಮದ ನಂತರ, ಮಂಗಳವಾರ ದೇಶದಲ್ಲಿ ಮತ್ತೆ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಇಂಧನ ಬೆಲೆಗಳನ್ನು ಹೆಚ್ಚಿಸಿವೆ.

ಇತ್ತೀಚೆಗೆ, ಹಲವಾರು ನಗರಗಳಲ್ಲಿ ಪೆಟ್ರೋಲ್ ದರ 90 ರೂ. ಅವುಗಳೆಂದರೆ ಕೋಲ್ಕತಾ (ರೂ. 91.12), ಚೆನ್ನೈ (ರೂ. 92.90), ಬೆಂಗಳೂರು (ರೂ. 93.98), ಭುವನೇಶ್ವರ (92 ರೂ.), ಹೈದರಾಬಾದ್ (ರೂ. 94.54), ಜೈಪುರ (97.34 ರೂ.), ಪಾಟ್ನಾ (93.56 ರೂ.) ಮತ್ತು ತಿರುವನಂತಪುರಂ (ರೂ. 92.81).

ಮತ್ತೊಂದು ಸುತ್ತಿನ ಹಣದುಬ್ಬರವನ್ನು ತಡೆಗಟ್ಟಲು ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸುವ ತೆರಿಗೆಯನ್ನು ತರ್ಕಬದ್ಧಗೊಳಿಸಲು ಒಂದು ಮಾರ್ಗವನ್ನು ಕಂಡುಹಿಡಿಯಬೇಕು ಎಂದು ತಜ್ಞರು ಹೇಳುತ್ತಾರೆ. ಇಂಧನ ವೆಚ್ಚಗಳ ಏರಿಕೆಯಿಂದಾಗಿ ಹಣದುಬ್ಬರ ಪರಿಣಾಮವನ್ನು ಈಗಾಗಲೇ ದೇಶದ ಲಕ್ಷಾಂತರ ಗ್ರಾಹಕರು, ಹಲವಾರು ಕ್ಷೇತ್ರಗಳು ಮತ್ತು ವ್ಯವಹಾರಗಳು ಅನುಭವಿಸುತ್ತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights