ಹೃದಯ ಸ್ತಂಭನದಿಂದಾಗಿ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ ತಂದೆ ನಿಧನ!

ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಅವರ ತಂದೆ ಹಿಮಾಂಶು ಪಾಂಡ್ಯ ಹೃದಯ ಸ್ತಂಭನದಿಂದ ಇಂದು ನಿಧನರಾದರು.

ಹಿಮಾಂಶು ಶನಿವಾರ ಬೆಳಿಗ್ಗೆ ಹೃದಯ ಸ್ತಂಭನದಿಂದ ಬಳಲುತ್ತಿದ್ದು, ಪುನಶ್ಚೇತನಗೊಳ್ಳಲು ಸಾಧ್ಯವಾಗಲಿಲ್ಲ. ಕ್ರಿಕೆಟ್ ಬೆಂಬಲಿಸುವಲ್ಲಿ ಪೋಷಕರ ಕೊಡುಗೆಯ ಬಗ್ಗೆ ಹಾರ್ದಿಕ್ ಮತ್ತು ಕೃನಾಲ್ ಆಗಾಗ್ಗೆ ಮಾತನಾಡಿದ್ದಾರೆ. ಹಾರ್ದಿಕ್ ಪ್ರಕಾರ, ಹಿಮಾಂಶು ಸೂರತ್‌ನಲ್ಲಿ ಸಣ್ಣ ಕಾರು ಹಣಕಾಸು ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ ಅವರು ಅದನ್ನು ಮುಚ್ಚಿ ವಡೋದರಾಕ್ಕೆ ತೆರಳಿ ತನ್ನ ಮಕ್ಕಳಿಗೆ ತರಬೇತಿ ಸೌಲಭ್ಯಗಳನ್ನು ಉತ್ತಮವಾಗಿ ಪಡೆಯಲು ಸಹಾಯ ಮಾಡಿದರು. ಹಾರ್ದಿಕ್ ಮತ್ತು ಕ್ರುನಾಲ್ ಇಬ್ಬರನ್ನೂ ಭಾರತದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರ್ ಅವರ ವಡೋದರಾದ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅಲ್ಲಿಂದ ಇಬ್ಬರು ಸಹೋದರರು ಭಾರತದಲ್ಲಿ ಕ್ರಿಕೆಟಿಗರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಸದ್ಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಕೃನಾಲ್ ಬಯೋಬಬಲ್ ಅನ್ನು ತೊರೆದಿದ್ದಾರೆ. ಆಸ್ಟ್ರೇಲಿಯಾ ಮಾಧ್ಯಮಗಳ ಅಸಲಿಯತ್ತು ಬಿಚ್ಚಿಟ್ಟ ಕೆವಿನ್ ಪೀಟರ್ಸನ್! ತಂದೆ ಕೊನೆಯುಸಿರೆಳೆದಿರುವುದರಿಂದಾಗಿ ಬರೋಡಾ ತಂಡದ ನಾಯಕರಾಗಿರುವ ಹಾರ್ದಿಕ್ ಹಿರಿಯ ಸಹೋದರ ಕೃನಾಲ್ ಪಾಂಡ್ಯ ಬಯೋಬಬಲ್ ತೊರೆದು ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ.

ಸಯ್ಯದ್ ಮುಷ್ತಾಕ್ ಟ್ರೋಫಿ ಇನ್ನುಳಿದ ಪಂದ್ಯಗಳಲ್ಲಿ ಕೃನಾಲ್ ಆಡುತ್ತಿಲ್ಲ. ‘ಹೌದು, ಕೃನಾಲ್ ಪಾಂಡ್ಯ ಅವರು ಬಯೋಬಬಲ್ ಅನ್ನು ತೊರೆದಿದ್ದಾರೆ. ಅವರ ವೈಯಕ್ತಿಕ ದುರಂತದಿಂದಾಗಿ ಅವರಿಗೆ ಇನ್ನುಳಿದ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ. ಹಾರ್ದಿಕ್ ಮತ್ತು ಕೃನಾಲ್ ನಷ್ಟಕ್ಕೆ ಬರೋಡಾ ಕ್ರಿಕೆಟ್ ಅಸೋಸಿಯೇಶನ್ (ಬಿಸಿಎ) ಮರುಗುತ್ತದೆ,’ ಎಂದು ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ನ ಸಿಇಒ ಶಿಶಿರ್ ಹತ್ತಾಂಗಡಿ ಹೇಳಿದ್ದಾರೆ. ಬಹಳಷ್ಟು ಆಟಗಾರರ ಗಾಯಕ್ಕೆ ಭಾರತ ಕಾರಣ ಹುಡುಕಬೇಕು: ಗಿಲ್‌ಕ್ರಿಸ್ಟ್ ಬರೋಡಾ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಎಲೈಟ್ ಗ್ರೂಪ್‌ ‘ಸಿ’ಯಲ್ಲಿದೆ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೊಫಿಯಲ್ಲಿ ಆಡುತ್ತಿಲ್ಲ. ಆದರೆ ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ನಿಯಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಹಾರ್ದಿಕ್ ಶೀಘ್ರ ಅಭ್ಯಾಸ ಆರಂಭಿಸಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights