ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಹುಂಜಾ : ಬೆಳಗಾವಿಯಲ್ಲಿ ಅಪರೂಪದ ಆಚರಣೆ..!
ಸಾಮಾನ್ಯವಾಗಿ ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ, ಎತ್ತು, ಹಕ್ಕಿಗಳ ಹುಟ್ಟುಹಬ್ಬ ಆಚರಿಸುವುದನ್ನ ನೀವು ನೋಡಿರುತ್ತೀರಿ ಕೇಳಿರುತ್ತೀರಿ. ಇವತ್ತು ನಾವು ಹೇಳ್ತಾಯಿರೋದು ಹುಂಜಗಳ ಹುಟ್ಟುಹಬ್ಬದ ವಿಚಾರ.
ಹೌದು… ಬೆಳಗಾವಿಯ ಕುಟುಂಬ ಸಾಕು ಹುಂಜಗಳಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಮಾತ್ರವಲ್ಲದೇ ಕೇಕ್ ಕಟ್ ಮಾಡಿ ಆಚರಣೆ ಕೂಡ ಮಾಡಿದ್ದಾರೆ. ಮೇಘನಾ ಲಂಗರಖಂಡೆ ಹುಂಜಗಳ ಬರ್ತ್ ಡೇ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿವೆ. ಎರಡು ಹುಂಜಗಳಿಗೆ ಶೇರು ಮತ್ತು ವೀರು ಎಂದು ಹೆಸರಿಡಲಾಗಿದೆ. ಶೇರು ಮತ್ತು ವೀರುವ ಐದನೇ ಹುಟ್ಟುಹಬ್ಬವನ್ನ ಕುಟುಂಬಸ್ಥರು ಆಚರಿಸಿದ್ದಾರೆ.
ಮನೆಯಲ್ಲಿನ ಹುಂಜಗಳ ಫೋಸ್ಟ್ ಗಳನ್ನು ಅಂಟಿಸಿ ಮಕ್ಕಳೊಂದಿಗೆ ಕೇಕ್ ಕತ್ತರಿಸಲಾಗಿದೆ. ಇದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪ್ರಾಣಿ ಪ್ರಿಯರು ಹರ್ಷ ವ್ಯಕ್ತಪಡಿಸಿದ್ದಾರೆ.