ಅರೆಬೆತ್ತಲೆಯಾಗಿ ಓಡಾಡಿದ ಶಾಸಕ; ಆಕ್ಷೇಪಿಸಿದಕ್ಕೆ ಸಹ ಪ್ರಯಾಣಿಕನ ಚಿನ್ನವನ್ನೇ ಕಿತ್ತುಕೊಂಡ ಗೋಪಾಲ್‌ ಮಂಡಲ್‌!

ಬಿಹಾರದ ಜೆಡಿಯು ಶಾಸಕ ಗೋಪಾಲ್‌ ಮಂಡಲ್‌ ಎಂಬುವವರು ರೈಲಿನಲ್ಲಿ ಅರೆಬೆತ್ತಲೆಯಾಗಿ ಓಡಾಡಿದ್ದು, ಅವರ ವರ್ತನೆಯನ್ನು ಆಕ್ಷೇಸಿದಕ್ಕೆ ಸಹ ಪ್ರಯಾಣಿಕನ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಶಾಸಕರ ವಿರುದ್ದ ಸಹ ಪ್ರಯಾಣಿಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುವಾರದಂದು ಬಿಹಾರ ಆಡಳಿತ ಪಕ್ಷವಾಗಿರುವ ಜೆಡಿಯುನ ಶಾಸಕರಾದ ನರೇಂದ್ರ ಕುಮಾರ್ ನೀರಜ್ ಅಲಿಯಾಸ್ ಗೋಪಾಲ್ ಮಂಡಲ್ ಅವರು ರೈಲಿನಲ್ಲಿ ಕೇವಲ ಒಳಉಡುಪಿನಲ್ಲಿ ಓಡಾಡಿರುವ ಘಟನೆ ಸುದ್ದಿಯಾಗಿತ್ತು. ಘಟನೆಯು ಕ್ಯಾಮಾರಾದಲ್ಲಿ ಸೆರೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗುವಂತೆ ನಡೆದುಕೊಂಡ ಬಗ್ಗೆ ಅವರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

ಸಹ-ಪ್ರಯಾಣಿಕ ಪ್ರಹ್ಲಾದ್ ಪಾಸ್ವಾನ್ ಎಂಬವರು ಶಾಸಕನ ವಿರುದ್ದ ದೆಹಲಿಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅವರು, “ಎಂಎಲ್‌ಎ ಅವರು ರೈಲಿನ ಕೋಚ್‌ನಲ್ಲಿ ಒಳ ಉಡುಪಿನಲ್ಲಿ ತಿರುಗಾಡುತ್ತಿದ್ದರು. ಈ ಸಮಯದಲ್ಲಿ ಅವರು ಮದ್ಯಪಾನ ಮಾಡಿದ್ದರು. ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾಗ, ಎಂಎಲ್‌ಎ ನನ್ನ ಚಿನ್ನದ ಉಂಗುರ ಮತ್ತು ಸರವನ್ನು ಕಸಿದುಕೊಂಡು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು” ಎಂದು ತಿಳಿಸಿದ್ದಾರೆ.

ಇದನ್ನೂಓದಿ: ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

ಶಾಸಕರಾಗಿರುವ ಗೋಪಾಲ್‌ ಮಂಡಲ್ ಅವರು ಪಾಟ್ನಾದಿಂದ ದೆಹಲಿಗೆ ತೇಜಸ್ ರಾಜಧಾನಿ ಎಕ್ಸ್‌ಪ್ರೆಸ್‌ನ ಎ -1 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಪಾಟ್ನಾದಿಂದ ಹೊರಟ ತಕ್ಷಣ, ಅವರು ತನ್ನ ಒಳ ಉಡುಪುಗಳಲ್ಲಿ ತಿರುಗಾಡುತ್ತಿರುವುದು ಕಂಡುಬಂದಿದ್ದು, ಇದರ ವಿರುದ್ದ ಸಹ ಪ್ರಯಾಣಿಕರು ಪ್ರತಿಭಟಿಸಿದ ನಂತರವೂ, ಅವರು ಅದೇ ಉಡುಪಿನಲ್ಲಿ ಶೌಚಾಲಯದ ಕಡೆಗೆ ನಡೆಯುತ್ತಿದ್ದರು ಎಂದು ವರದಿಯಾಗಿದೆ.

ಆದರೆ ಶಾಸಕ ತನ್ನ ನಡೆಯನ್ನು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ. ರೈಲು ಹತ್ತಿದ ಕೆಲವೇ ನಿಮಿಷಗಳಲ್ಲಿ ತಾನು ಅನಾರೋಗ್ಯಕ್ಕೆ ಒಳಗಾದ ಕಾರಣ ತನಗೆ ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.

“ನಾನು ರೈಲು ಹತ್ತಿದ ತಕ್ಷಣ, ಬೇದಿ ಪ್ರಾರಂಭವಾಗಿತ್ತು. ಹಾಗಾಗಿ ನಾನು ನನ್ನ ಕುರ್ತಾ ಪೈಜಾಮಾವನ್ನು ತೆಗೆದು ಟವಲ್ ಅನ್ನು ನನ್ನ ಭುಜದ ಮೇಲೆ ಹಾಕಿಕೊಂಡೆ. ಅದನ್ನು ನನ್ನ ಸೊಂಟಕ್ಕೆ ಸುತ್ತಲು ನನಗೆ ಸಮಯವಿರಲಿಲ್ಲ. ಹಾಗಾಗಿ ನಾನು ಒಳ ಉಡುಪುಗಳನ್ನು ಮಾತ್ರ ಧರಿಸಿ ಓಡಾಡಿದ್ದೆ” ಎಂದು ಮಂಡಲ್ ಹೇಳಿದ್ದಾರೆ.

Read Also: ರಾಜಸ್ಥಾನ ಸ್ಥಳೀಯ ಚುನಾವಣೆ: 231 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ ಮುನ್ನಡೆ; ಬಿಜೆಪಿಗೆ 185 ಸ್ಥಾನಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights