ದಲಿತ ವಿದ್ಯಾರ್ಥಿನಿಯರ ಮೇಲೆ ಗುಂಪು ಹಲ್ಲೆ ಖಂಡಿಸಿ ಸೋಮವಾರ ‘ಚಲೋ ಶ್ರೀನಿವಾಸ್‌ಪುರ’ ಹೋರಾಟ!

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್‌‌‌ನಲ್ಲಿ ದಲಿತ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಗಳ ಗುಂಪೊಂದು ಎಸಗಿದ್ದ ದೌರ್ಜನ್ಯವನ್ನು ಖಂಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಆಗ್ರಹಿಸಿ ಸೋಮವಾರದ ‘ಚಲೋ ಶ್ರೀನಿವಾಸ್‌ಪುರ’ ಆಂದೋಲನ ನಡೆಸಲು ಹಲವು ಸಂಘಟನೆಗಳು ನಿರ್ಧರಿಸಿವೆ.

ಸೋಮವಾರ  ಬೆಳಿಗ್ಗೆ 11 ಗಂಟೆಗೆ ಆಂದೋಲನ ಪ್ರಾರಂಭವಾಗಲಿದ್ದು, ಭಾರತ ವಿದ್ಯಾರ್ಥಿ ಫೆಡರೇಶನ್ (SFI), ಜನವಾದಿ ಮಹಿಳಾ ಸಂಘಟನೆ (AIDWA), ದಲಿತ ಹಕ್ಕುಗಳ ಸಮಿತಿ (DHS) ಹಾಗೂ ಕೋಲಾರ ಜಿಲ್ಲೆಯ ಇತರ ಜನಪರ ಸಂಘಟನೆಗಳು ಭಾಗವಹಿಸಲಿದೆ.

ಸೆಪ್ಟೆಂಬರ್‌ 4 ರಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಮತ್ತು ನಾಗಿರೆಡ್ಡಿಗಾರಿ ಪಾಳ್ಯದ ಗ್ರಾಮದ ದಲಿತ ವಿದ್ಯಾರ್ಥಿನಿಯರ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿತ್ತು. ಇದರ ವಿಡಿಯೊ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಆಕ್ರೋಶವನ್ನು ಹುಟ್ಟಹಾಕಿತ್ತು. ಬಸ್ಸಿನಲ್ಲಿ ಶಾಲೆ, ಕಾಲೇಜಿಗೆ ಹೋಗುವಾಗ ಕೆಲ ಪುಂಡರು ನಿತ್ಯವೂ ಕಿರುಕುಳ ನೀಡುತ್ತಿದ್ದದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ಮೇಲೆ ಈ ಹಲ್ಲೆ ನಡೆಸಲಾಗಿತ್ತು.

ದಲಿತ ವಿದ್ಯಾರ್ಥಿನಿಯರು ಚಿಂತಾಮಣಿ ಕಾಲೇಜಿಗೆ ಬಸ್ಸಿನಲ್ಲಿ ಹೋಗುವಾಗ ನಾಯಕ ಸಮುದಾಯದಕ್ಕೆ ಸೇರಿದ ಗೌನಿಪಲ್ಲಿಯ ಪವನ್ ಮತ್ತು ಕೊಂಡಾಮುರಿಯ ಬಾಬೂ ನಾಯಕ್ ಎಂಬುವರು ಪ್ರತಿದಿನ ಚುಡಾಯಿಸುವುದು, ಮಾನಸಿಕ ಕಿರುಕುಳ ನೀಡಿವುದು ಮಾಡುತ್ತಿದ್ದರು. ಈ ಕುರಿತು ಆ ಯುವಕರಿಗೆ ಹೆಣ್ಣುಮಕ್ಕಳ ಪೋಷಕರು ಬುದ್ದಿವಾದ ಹೇಳಿದ್ದರು. ಈ ಕುರಿತು ಮಾತಿಗೆ ಮಾತು ಬೆಳೆದಿತ್ತು. ಇದರಿಂದ ಕುಪಿತಗೊಂಡ ಯುವಕರು ಮತ್ತು ಅವರ ಪೋಷಕರು ಸೇರಿ ಸೆಪ್ಟಂಬರ್ 4 ರಂದು ಅಮಾನುಷ ಹಲ್ಲೆ ನಡೆಸಿದ್ದರು.

ದೌರ್ಜನ್ಯವನ್ನು ಪ್ರಶ್ನಿಸಿದ್ದ ಅಭಿಷೇಕ್, ನವೀನ್ ಮತ್ತು ಶ್ರೀನಾಥ್ ಎಂಬುವವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿ ದೂರು ದಾಖಲಾಗಿದ್ದು, ಎರಡೂ ಕಡೆಯವರ ಮೇಲೂ FIR ದಾಖಲಾಗಿದೆ.

ಇದನ್ನೂ ಓದಿ: ಯುಪಿ ಚುನಾವಣೆಗೆ ತಾಲಿಬಾನ್ ವಿಷಯಗಳನ್ನು ಬಿಜೆಪಿ‌ ಬಳಸಿಕೊಳ್ಳುತ್ತದೆ: ಕಪಿಲ್ ಸಿಬಲ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights