ಮದುವೆ ಸಮಾರಂಭದಲ್ಲಿದ್ದ ವರನಿಗೆ ಚಪ್ಪಲಿಯಲ್ಲಿ ಹೊಡೆದ ತಾಯಿ : ವೀಡಿಯೋ ವೈರಲ್!

ಮದುವೆ ಸಮಾರಂಭದಲ್ಲಿದ್ದ ವರನಿಗೆ ಹೆತ್ತ ತಾಯಿಯೇ ಚಪ್ಪಲಿಯಿಂದ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ನೂರಾರು ಜನರು ನೆರೆದಿದ್ದ ಮದುವೆ ಸಮಾರಂಭದಲ್ಲಿ ವರನಿಗೆ ತಾಯಿಯೇ ಚಪ್ಪಲಿಯಿಂದ ಹೊಡೆದಿದ್ದು ನೆರೆದವರು ಆಶ್ವರ್ಯಗೊಂಡಿದ್ದಾರೆ.

ಹೌದು…  ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಭರೂವಾ ಸುಮೇರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುಬಾರಿ ವಿವಾಹದ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷಳಾದ ತಾಯಿ ಮೆಟ್ಟಿಲು ಹತ್ತಿ ವೇದಿಕೆಗೆ ಹೋಗಿ ತನ್ನ ಚಪ್ಪಲಿಗಳನ್ನು ತೆಗೆದು ಮದುವೆಯ ಅತಿಥಿಗಳ ಮುಂದೆಯೇ ವರನನ್ನು ಹೊಡೆಯಲು ಪ್ರಾರಂಭಿಸುತ್ತಾಳೆ. ಈ ಘಟನೆ ಮದುವೆಯಲ್ಲಿ ಗೊಂದಲವೇ ಸೃಷ್ಟಿಸಿತು. ಉಳಿದ ಆಚರಣೆಗಳು ತರಾತುರಿಯಲ್ಲಿ ಪೂರ್ಣಗೊಂಡಿವೆ.

ಮಹಿಳೆಯ ಹಿಂಸಾತ್ಮಕ ಪ್ರತಿಕ್ರಿಯೆಯ ಹಿಂದಿನ ಕಾರಣವೇನು ಎಂದು ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಮತ್ತೊಂದು ಜಾತಿಯ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಕ್ಕಾಗಿ ಆಕೆ ತನ್ನ ಮಗ ಉಮೇಶಚಂದ್ರನ ಬಗ್ಗೆ ಅಸಮಾಧಾನ ಹೊಂದಿದ್ದಳು ಎಂದು ವರದಿಯಾಗಿದೆ. ಅವನು ತನ್ನ ಕುಟುಂಬದ ಇಚ್ಚೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಅಂಕಿತಾಳನ್ನು ಮದುವೆಯಾದ್ದಾನೆಂದು ತಾಯಿ ಆರೋಪಿಸಿದ್ದಾರೆ.

ನ್ಯಾಯಾಲಯದ ವಿವಾಹದ ನಂತರ ವಧುವಿನ ತಂದೆ ಜುಲೈ 3 ರಂದು ಜಿಲ್ಲಾ ಸಭಾಂಗಣದಲ್ಲಿ ವಿವಾಹವನ್ನು ಆಚರಿಸಲು ನಿರ್ಧರಿಸಿದರು. ಆದರೆ ಅವರು ವರನ ಕುಟುಂಬ ಮತ್ತು ಸಹೋದರರನ್ನು ಆಹ್ವಾನಿಸಲಿಲ್ಲ. ಮದುವೆಯ ಬಗ್ಗೆ ತಿಳಿದ ನಂತರ, ವರನ ತಾಯಿ ಮದುವೆ ಸ್ಥಳವನ್ನು ತಲುಪಿ ತನ್ನ ಮಗನನ್ನು ವೇದಿಕೆಯಲ್ಲಿ ಹೊಡೆದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights