ರಾಬರ್ಟ್‌ ಸಿನಿಮಾ ತೆಲುಗಿನಲ್ಲಿ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌?: ನಟ ದರ್ಶನ್ ಹೇಳಿದ್ದೇನು?

ನಟ ದರ್ಶನ್‌ ಅಭಿನಯದ ‘ರಾಬರ್ಟ್’ ಸಿನಿಮಾವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಮಾರ್ಚ್‌ 11 ರಂದು ಒಂದೇ ದಿನ ರಿಲೀಸ್‌ ಮಾಡಲು ಮುಂದಾಗಿದ್ದ ಚಿತ್ರತಂಡದ ವಿರುದ್ದ ತೆಲುಗು ಚಿತ್ರರಂಗ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಅಂದೇ ರಿಲೀಸ್‌ ಮಾಡಲು ಅವಕಾಶ ಮಾಡಿಕೊಡುವುದಾಗಿ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ವಾಸನೆ ನೀಡಿದೆ. ಹೀಗಾಗಿ ರಾಬರ್ಟ್‌ ಚಿತ್ರ ತೆಲುಗಿನಲ್ಲಿಯೂ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ತೆಲುಗು ಭಾಷೆಗೆ ಡಬ್ಬಿಂಗ್‌ ಕಾರ್ಯ ಮುಗಿಸಿರುವ ಚಿತ್ರತಂಡ, ಫೆಬ್ರವರಿ 03 ರಂದು ತೆಲುಗು ಟೀಸರ್‌ ಬಿಡುಗಡೆ ಮಾಡಲಿದೆ.

ಮಾರ್ಚ್‌ 11ರಂದು ಕನ್ನಡದಲ್ಲಿ ಸಿನಿಮಾ ರಿಲೀಸ್‌ ಮಾಡಲು ನಿರ್ಧರಿಸಲಾಗಿದ್ದು, ಅದೇ ದಿನ ತೆಲುಗು ಭಾಷೆಯಲ್ಲಿ ಸಿನಿಮಾ ರಿಲೀಸ್‌ ಮಾಡಲು ನಿರ್ಧರಿಸಲಾಗಿತ್ತು. ಅದರೆ, ಅದೇ ದಿನ ತೆಲುಗು ಚಿತ್ರರಂಗದ ಹಲವು ಸಿನಿಮಾಗಳು ರಿಲೀಸ್‌ ಆಗುತ್ತಿದ್ದು, ರಾಬರ್ಟ್‌ ಚಿತ್ರದ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ತೆಲುಗು ಚಲನಚಿತ್ರ ಮಂಡಳಿ ಹೇಳಿತ್ತು. ಇದಕ್ಕೆ ದರ್ಶನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ತೆಲುಗು ಚಿತ್ರರಂಗದ ಈ ನಿರ್ಧಾರದ ವಿರುದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ನಟ ದರ್ಶನ್‌ ಮತ್ತು ಚಿತ್ರತಂಡ ದೂರು ನೀಡಿದ್ದರು. ಈ ಬಗ್ಗೆ ಕರ್ನಾಟಕ ಚಿತ್ರ ಮಂಡಳಿಯ ಪದಾಧಿಕಾರಿಗಳು ಚೆನ್ನೈನಲ್ಲಿ ದಕ್ಷಿಣ ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಸಿನಿಮಾದ ಬಿಡುಗಡೆಗೆ ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕು.ಮುಂದಿನ ದಿನಗಳಲ್ಲಿಯೂ ಕನ್ನಡದ ಯಾವುದೇ ಚಿತ್ರಗಳ ಬಿಡುಗಡೆಗೆ ಅಡಚಣೆಯಾಗದಂತೆ  ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಇದಕ್ಕೆ ಸ್ಪಂದಿಸಿರುವ ದಕ್ಷಿಣ ಭಾರತೀಯ ಚಿತ್ರ ಮಂಡಳಿ, ದಕ್ಷಿಣ ನಾಲ್ಕು ಭಾಷಿಗರು ಸೋದರರಂತೆ ಜೊತೆಗಿದ್ದೇವೆ. ನಾಲ್ಕು ಭಾಷಿಗರು ಚಿತ್ರರಂಗವನ್ನು ಜೊತೆಯಾಗಿದೆ ಮುನ್ನಡೆಸಬೇಕು. ಆಂಧ್ರ ಮತ್ತು ತೆಲಂಗಾಣದಲ್ಲಿ ಚಿತ್ರ ಬಿಡುಗಡೆಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಚಿತ್ರಮಂದಿರಗಳನ್ನು ಗೊತ್ತುಪಡಿಸಿಕೊಳ್ಳುವುದು ನಿರ್ಮಾಪಕರ ಜವಾಬ್ದಾರಿ ಎಂದು ಆಶ್ವಾಸನೆ ನೀಡಿದ್ದಾರೆ.

ತೆಲುಗು ಚಿತ್ರರಂಗದ ವಿರುದ್ಧ ದೂರು ನೀಡಿದ್ದ ದರ್ಶನ್‌, ನಮ್ಮ ಚಿತ್ರಗಳು ತೆಲುಗಿನಲ್ಲಿ ಬಿಡುಗಡೆಯಾದರೆ ಅಲ್ಲಿನ ಸಿನಿಮಾ ನಾಯಕರಿಗೆ ತೊಂದರೆಯಾಗುತ್ತದೆ ಅಂತ ಹೇಳುತ್ತಿದ್ದಾರೆ. ಅವರೂ ಕೂಡ ಕರ್ನಾಟಕದಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಾರೆ, ಅದು ತೊಂದರೆಯಾಗುವುದಿಲ್ಲವೇ. ನಾನು ಈಗಾಗಲೇ 50 ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದರಿಂದ ನನಗೇನು ತೊಂದರೆಯಾಗುವುದಿಲ್ಲ. ಆದರೆ ನಮ್ಮಲ್ಲೂ ನವ ನಟರು ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡು ಚಿತ್ರರಂಗಕ್ಕೆ ಬರುತ್ತಿದ್ದಾರೆ ಅವರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

Read Also: ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಸಂಜೆ ಕೆಜಿಎಫ್-2 ರಿಲೀಸ್ ಡೇಟ್ ಅನೌನ್ಸ್..!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights