ವೃದ್ಧಾಪ್ಯ ವೇತನಕ್ಕಾಗಿ ಅಜ್ಜಿ ಪರದಾಟ; ಎರಡು ಕಿ.ಮೀ ನಡೆದು ಬಂದರು ಸಿಗಲಿಲ್ಲ ಹಣ!

ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದಾಗಿ ಹಲವಾರು ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಲವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ನಡುವೆ, ಅಜ್ಜಿಯೊಬ್ಬರು ತಮ್ಮ ವೃದ್ಧಾಪ್ಯ ವೇತನವನ್ನು ಪಡೆಯುವುದಕ್ಕಾಗಿ ಪರದಾಡಿ, ಕೊನೆಗೆ ಹಣವೂ ಸಿಗದೇ ವಾಪಸ್ಸಾಗಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ಬಳಿಯ ಭಜಂತ್ರಿ ನಗರದ ನಿವಾಸಿ ಯಲ್ಲವ್ವ ಭಜಂತ್ರಿ ಎಂಬ ಅಜ್ಜಿಗೆ ತಮ್ಮ ವೃದ್ಧಪ್ಯ ವೇತನವನ್ನು ಪಡೆಯಲು ಅಂಚೆ ಕಚೇರಿಗೆ ಬರಲು ಹೇಳಲಾಗಿತ್ತು. ಹಾಗಾಗಿ ಬಸ್‌ಗಳಿಲ್ಲ ಈ ಸಂದರ್ಭದಲ್ಲಿಯೂ, ಬಿಸಿಲಿನ ನಡುವೆಯೂ ಅಜ್ಜಿ ಪೋಸ್ಟ್‌ ಆಫೀಸ್‌ಗೆ ಹೋಗಲು ಎರಡು ಕಿ.ಮೀ ನಡೆದುಕೊಂಡೆ ಬಂದಿದ್ದಾರೆ. ಈ ವೇಳೆ ಅವರನ್ನು ಪೊಲೀಸರು ತಡೆದು ವಿಚಾರಿಸಿದ್ದಾರೆ.

ತಾವು ತಮ್ಮ ವೃದ್ಧಪ್ಯ ವೇತನವನ್ನು ಪಡೆಯಲು ಅಂಚೆ ಕಚೇರಿಗೆ ತೆರಳುತ್ತಿರುವುದಾಗಿ ಅಜ್ಜಿ ವಿವರಿಸಿದ್ದಾರೆ. ಅದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪೋಸ್ಟ್‌ ಆಫೀಸ್‌ಗಳು ಮುಚ್ಚಿವೆ ಎಂದು ಹೇಳಿ ಪೊಲೀಸರು ಅಜ್ಜಿಯನ್ನು ವಾಪಸ್‌ ಕಳಿಸಿದ್ದಾರೆ.

ಲಾಕ್‌ಡೌನ್‌ನಿಂದಾಗಿ ಪೋಸ್ಟ್‌ಮನ್‌ಗಳು ಹಳ್ಳಿಗಳತ್ತ ಮುಖ ಮಾಡದ ಹಿನ್ನೆಲೆಯಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹಳ್ಳಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನನ್ನನ್ನು ಡೇ ಒನ್‌ ಇಂದಲೂ ಟಾರ್ಗೆಟ್‌ ಮಾಡಲಾಗಿದೆ; ಸಂಸದ ಪ್ರತಾಪ್‌ ಸಿಂಹ ವಿರುದ್ಧ ರೋಹಿಣಿ ಸಿಂಧೂರಿ ಕಿಡಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights