ಗ್ರಾಮ ಪಂಚಾಯತ್ ತಿದ್ದುಪಡಿ ಕಾಯ್ದೆ ಅಂಗೀಕಾರ: ಸದಸ್ಯರ ಮೀಸಲು ಅವಧಿಗೆ ಕತ್ತರಿ!

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಗೆ ತರಲಾಗಿದ್ದ ತಿದ್ದುಪಡಿ ವಿಧೇಯಕವು ನಿನ್ನೆ ವಿಧಾನಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ.

ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರ ಮೀಸಲಾತಿ ಅವಧಿಯನ್ನು 10.ವರ್ಷಗಳಿಂದ 5 ವರ್ಷಕ್ಕೆ ಇಳಿಸುವ ತಿದ್ದುಪಡಿಯನ್ನು ಕಾಯ್ದೆಗೆ ತರಲಾಗಿದೆ.

ಈ  ತಿದ್ದುಪಡಿಯು ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಗಂಭೀರತೆಯನ್ನು ಕಡಿಮೆ ಮಾಡುತ್ತದೆ. ಪ್ರತಿ ಚುನಾವಣೆಗೂ ಮೀಸಲಾತಿ ಬದಲಾಗುವುದರಿಂದ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಇಲ್ಲವೆಂಬ ಭಾವನೆಯಿಂದ ಪಂಚಾಯತ್‌ ರಾಜ್ ಸದಸ್ಯರು ಬದ್ದತೆಯಿಂದ ಕಾರ್ಯನಿರ್ವಹಿಸುವ ಮನಸ್ಥೈರ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಆದರೆ, ತಿದ್ದುಪಡಿ ವಿದೇಯಕವನ್ನು ಸಮರ್ಥಿಸಿಕೊಂಡ  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿದೇಯವನ್ನು ಮತಕ್ಕೆ ಹಾಕಿದ್ದು, ವಿದೇಯಕವು ಅಂಗೀಕಾರವಾಗಿದೆ.

ಈಗಾಗಲೇ ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೊಳಿಸಲಾಗಿದ್ದ ಮಸೂದೆಯು ಸದನದ ಒಪ್ಪಿಗೆ ಪಡೆದು ಕಾನೂನು ರೂಪ ನೀಡಲು ಅನುಮತಿ ಪಡೆಯಲಾಯಿತು.


ಇದನ್ನೂ ಓದಿ: ಕರ್ನಾಟಕದ ಕಾಫಿಡೇ ಕಂಪನಿಯು ಟಾಟಾ ಸಮೂಹದ ಕೈ ಸೇರುವ ಸಾಧ್ಯತೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights