ಲಾಕ್‌ಡೌನ್ ಸಮಯದಲ್ಲಿ ಉತ್ತಮ ಕೆಲಸ; ಬಿಹಾರ ಸರ್ಕಾರಕ್ಕೆ ಡಿಜಿಟಲ್ ಇಂಡಿಯಾ ಅವಾರ್ಡ್‌ 2020

ಕೊರೊನಾ ಮತ್ತು ಲಾಕ್‌ಡೌನ್‌ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಹಾರ ಸರ್ಕಾರವು ಉತ್ತರ ರೀತಿಯಲ್ಲಿ ಸೇವೆ ನೀಡಿದೆ. ಹೊರ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರನ್ನು ರಾಜ್ಯಕ್ಕೆ ವಾಪಸ್‌ ಕರೆತಂದಿದೆ ಎಂದು ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು ನಿತೀಶ್ ಕುಮಾರ್ ಸರ್ಕಾರಕ್ಕೆ “ಡಿಜಿಟಲ್ ಇಂಡಿಯಾ ಅವಾರ್ಡ್‌ 2020″ ಪ್ರಶಸ್ತಿ ನೀಡಿದ್ದಾರೆ.

ಬಿಹಾರ ಸರ್ಕಾರದ ಪರವಾಗಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಚಂಚಲ್ ಕುಮಾರ್ (ಐಎಎಸ್) ಅವರು ಪ್ರತಿಷ್ಠಿತ “ಡಿಜಿಟಲ್ ಇಂಡಿಯಾ ಅವಾರ್ಡ್ಸ್-2020” ಅನ್ನು ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪಡೆದುಕೊಂಡಿದ್ದಾರೆ.

ಇಲ್ಲಿನ ಅಧಿಕೃತ ಹೇಳಿಕೆಯ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ಬಡ ಜನರಿಗೆ ಸಮಯೋಚಿತ ಪರಿಹಾರವನ್ನು ನೀಡಿದ್ದಕ್ಕಾಗಿ ನಿತೀಶ್ ಕುಮಾರ್ ಸರ್ಕಾರದ ಅತ್ಯುತ್ತಮ ಪ್ರಯತ್ನಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಅದಕ್ಕಾಗಿ ಬಿಹಾರ ಸರ್ಕಾರಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಬಿಹಾರ ನಿತೀಶ್‌ ಸರ್ಕಾರಕ್ಕೆ ಸಂಕಷ್ಟ: 17 JDU ಶಾಸಕರು ಸಂಪರ್ಕದಲ್ಲಿದ್ದಾರೆ RJD ನಾಯಕ!

ಅಧಿಕೃತ ಹೇಳಿಕೆಯ ಪ್ರಕಾರ, ಸಿಎಂ ಪ್ರಧಾನ ಕಾರ್ಯದರ್ಶಿ, ವಿಪತ್ತು ನಿರ್ವಹಣಾ ವಿಭಾಗ ಮತ್ತು ಬಿಹಾರ ಎನ್ಐಸಿ ಅವರ ಅತ್ಯುತ್ತಮ ಸೇವೆಗಳಿಗಾಗಿ ಡಿಜಿಟಲ್ ಇಂಡಿಯಾ ಪ್ರಶಸ್ತಿ 2020 ನೀಡಲಾಗಿದೆ.

ಬಿಹಾರದಲ್ಲಿ, ಲಾಕ್ ಡೌನ್ ಸಮಯದಲ್ಲಿ ರಾಜ್ಯ ಸರ್ಕಾರವು “ಪರ್ವಶಿ ಸಹೈತಾ ಆ್ಯಪ್” ಮೂಲಕ ಹೊರರಾಜ್ಯಗಳಲ್ಲಿ ಸಿಲುಕಿದ್ದ 21 ಲಕ್ಷಕ್ಕೂ ಹೆಚ್ಚು ಜನರಿಗೆ ಆರ್ಥಿಕ ನೆರವು ನೀಡಿದೆ. ಸಿಎಂ ಪ್ರಧಾನ ಕಾರ್ಯದರ್ಶಿಯಾಗಿ ಚಂಚಲ್ ಕುಮಾರ್ ಅವರ ನೇತೃತ್ವದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಜನರಿಗೆ ಅಗತ್ಯ ನೆರವು ನೀಡಲಾಗಿತ್ತು ಎಂದು ಹೇಳಲಾಗಿದೆ.

ಆ ಮೂಲಕ 1.64 ಕೋಟಿ ಪಡಿತರ ಚೀಟಿ ಹೊಂದಿರುವವರಿಗೆ ಉಚಿತ ಪಡಿತರ ಮತ್ತು ಅವರ ಖಾತೆಗಳಿಗೆ 1000 ರೂ. ಜಮೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.


ಇದನ್ನೂ ಓದಿ: ವಾಜಪೇಯಿ ಭಾರತದಲ್ಲಿ ಮೊದಲ ಮೆಟ್ರೋ ಪ್ರಾರಂಭಿಸಿದರು ಎಂದು ಮೋದಿ ಹೇಳಿದ್ರಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights