ಕೃಷಿ ಮೇಳ: ಜನರ ಚಿತ್ತ ತನ್ನತ್ತ ಸೆಳೆದ 7 ಲಕ್ಷ ರೂ ಬೆಲೆ ಬಾಳುವ ಮೇಕೆ!

ಬೆಂಗಳೂರು ಕೃಷಿ ವಿದ್ಯಾಲಯ (ಜಿಕೆವಿಕೆ) ಆವರಣದಲ್ಲಿ ಕೃಷಿ ಮೇಳ ನಡೆಯುತ್ತಿದೆ. ಈ ಮೇಳದಲ್ಲಿ ಹಲವು ರೀತಿಯ ದವಸ-ಧಾನ್ಯಗಳನ್ನು ಹಾಗೂ ಕೃಷಿ ಸಾಕು ಪ್ರಾಣಿಗಳನ್ನು ಮಾರಟಕ್ಕೆ ಇಡಲಾಗಿದೆ. ಈ ಪೈಕಿ ಮೇಕೆಯೊಂದು ಎಲ್ಲರ ಗಮನ ಸೆಳೆಯುತ್ತಿದ್ದು, ಅದರ ಬೆಲೆಯು ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.

ಗುರುವಾರದಿಂದ ಆರಂಭವಾಗಿರುವ ಕೃಷಿ ಮೇಳದಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು ಲಭ್ಯವಿರುವ ಹೊಸ ತಾಂತ್ರಿಕತೆ ಬಳಕೆ, ನವ ತಳಿಯ ಭತ್ತ, ರಾಗಿ, ಹಲಸು, ನವನೆಣೆ, ಮೇವಿನ ತೋಕೆ ಗೋಧಿ, ಬರಗು ಪರಿಚಯಿಸಲಾಗುತ್ತಿದೆ.

ಮೇಳಕ್ಕೆ ಕರೆತರಲಾಗಿರುವ ವಿಶೇಷ ತಳಿಯ ಮೇಕೆ ಎಲ್ಲರ ಚಿತ್ತವನ್ನ ತನ್ನತ್ತ ಸೆಳೆದುಕೊಂಡಿತ್ತು. ಆ ಮೇಕೆಯೊಂದರ ಬೆಲೆ 7 ಲಕ್ಷ ರೂ. ಎಂಬುದನ್ನು ಕೇಳಿ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಶೇಷ ತಳಿಯ ಮಾಹಿತಿ ಪಡೆದುಕೊಂಡಿದ್ದಾರೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಬಳಿಯ ತರಬೇನಹಳ್ಳಿ ಗ್ರಾಮದ ರೈತ ಉಮೇಶ್f ಎಂಬುವವರು ಬೋಯರ್ ಎಂಬ ವಿಶೇಷ ತಳಿಯ ಮೇಕೆಗಳನ್ನು ಕೃಷಿ ಮೇಳಕ್ಕೆ ತಂದಿದ್ದಾರೆ. ಈ ತಳಿಯ ಮೇಕೆಗಳು ಅತ್ಯಂತ ವೇಗವಾಗಿ ಬೆಳವಣಿಗೆ ಆಗುತ್ತವೆ ಮತ್ತು ಅಷ್ಟೇ ಬೇಗ ಸಂತಾನೋತ್ಪತ್ತಿಗೆ ಸಜ್ಜಾಗುತ್ತವೆ. ಕೇರಳ ರಾಜ್ಯದ ತಲಶ್ಯೇರಿಯ ತಳಿಯ ಮೇಕೆಗಳಿಗೆ ಬೋಯರ್ ಮೇಕೆಯಿಂದಲೇ ಸಂಕರ ಮಾಡಿಸಲಾಗತ್ತದೆ.

ಬೋಯರ್ ತಳಿ ಮೇಕೆ ವಿಶೇಷತೆ:

ಹುಟ್ಟುವ ಮೇಕೆ ಆರು ತಿಂಗಳಲ್ಲಿಯೇ 18 ರಿಂದ 20 ಕೆಜಿ ತೂಕ ಹೊಂದುತ್ತವೆ.

ಈ ತಳಿಯ ಮೇಕೆಗೆ ವಿಶೇಷವಾದ ಆಹಾರ ನೀಡಬೇಕಿಲ್ಲ ಮತ್ತು ಹೆಚ್ಚಿನ ಪೌಷ್ಠಿಕಾಂಶ ಬೇಕಿಲ್ಲ. ಎಲ್ಲ ಮೇಕೆಗಳಂತೆ ಹುಲ್ಲು, ಕಾಳು, ಹಸಿರು ಮೇವು ತಿನ್ನುತ್ತವೆ.

ರಾಜ್ಯದ ಹವಾಮಾನಕ್ಕೆ ಬೋಯರ್ ತಳಿಯ ಮೇಕೆಗಳು ಹೊಂದಿಕೊಳ್ಳುತ್ತವೆ.

ಮೂಲ ತಳಿಯ ಒಂಭತ್ತು ತಿಂಗಳ ಮೇಕೆ 65 ಕೆಜಿವರೆಗೆ ತೂಕಕ್ಕೆ ಬರುತ್ತದೆ.

ಈ ತಳಿಯ ಮೇಕೆಗಳನ್ನು ಮಾಂಸಕ್ಕಿಂತಲೂ ಹೆಚ್ಚಾಗಿ ಸಂತಾನೋತ್ಪತ್ತಿಗಾಗಿ ಬಳಸಲಾಗುತ್ತದೆ.

ಈ ವಿಶೇಷ ತಳಿಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಕೃಷಿ ಮೇಳಕ್ಕೆ ತರಲಾಯ್ತು. ಆದ್ರೆ ನಮಗೆ ಮಳಿಗೆಯನ್ನು ನೀಡಲಿಲ್ಲ. ಹಾಗಾಗಿ ತುಂಬಾ ಸಮಯದವರೆಗೆ ವಾಹನದಲ್ಲಿಯೇ ಮೇಕೆಗಳನ್ನು ಇರಿಸಬೇಕಾಯಿತು. ಜನರು ಮಾತ್ರ ವಾಹನದ ಬಳಿಯೇ ಬಂದು ಮೇಕೆಗಳನ್ನುಕಂಡು ಮಾಹಿತಿ ಪಡೆದುಕೊಂಡರು ಎಂದು ಉಮೇಶ್ ತಿಳಿಸಿದ್ದಾರೆ.

Read Also: ಚಳಿಗಾಲದಲ್ಲೂ ಮಳೆಯ ಅಬ್ಬರ; ತುಂಬಿ ತುಳುಕುತ್ತಿವೆ ಡ್ಯಾಂಗಳು; ಜಲಾಶಯಗಳ ಇಂದಿನ‌‌ ನೀರಿನ ಮಟ್ಟ ಹೀಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights