ಆಸ್ಪತ್ರೆಯ ಆವರಣದಲ್ಲಿ ಐದು ವರ್ಷದ ಬಾಲಕಿ ಡೆಂಗ್ಯೂನಿಂದ ಸಾವು..!
ಐದು ವರ್ಷದ ಬಾಲಕಿ ಡೆಂಗ್ಯೂನಿಂದ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಯ ಆವರಣದಲ್ಲಿ ಐದು ವರ್ಷದ ಬಾಲಕಿ ಡೆಂಗೆಯಿಂದ ಸಾವನ್ನಪ್ಪಿದ್ದಾಳೆ. ಡೆಂಗ್ಯೂನಿಂದ ಬಳಲುತ್ತಿದ್ದ ಐದು ವರ್ಷದ ಬಾಲಕಿಗೆ ಚಿಕಿತ್ಸೆ ಕೊಡಿಸಲೆಂದು ಆಸ್ಪತ್ರೆಯ ಆವರಣದಲ್ಲಿ ಕಾಯುತ್ತಿದ್ದ ಕುಟುಂಬಸ್ಥರು 3-ಗಂಟೆಗಳ ಕಾಲ ಕಾದು ಕೊನೆಗೆ ಮಗುವನ್ನೇ ಕಳೆದುಕೊಂಡಿದ್ದಾರೆ.
ಬೆಳಿಗ್ಗೆ 8 ಗಂಟೆಗೆ ಫಿರೋಜಾಬಾದ್ನ ಆಸ್ಪತ್ರೆಗೆ ಬಾಲಕಿಯನ್ನು ಪೋಷಕರು ಕರೆತಂದಿದ್ದರು. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದ್ದರೂ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಲಕಿ ಸಾವನ್ನಪ್ಪಿದ್ದಾಳೆ.
ಪುಟ್ಟ ಬಾಲಕಿಯನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆಸ್ಪತ್ರೆ ಒಳಪ್ರವೇಶಕ್ಕೆ ತಡವಾಗಿದ್ದರ ಬಗ್ಗೆ ಆರೋಗ್ಯ ಅಧಿಕಾರಿಗಳು ಇನ್ನೂ ಕೂಡ ಸ್ಪಷ್ಟಣೆ ನೀಡಿಲ್ಲ.