ನಾಳೆ ಮತ್ತೆ ಸಾರಿಗೆ ಸಿಬ್ಬಂದಿಯಿಂದ ಧರಣಿ : ಬಂದ್ ಆಗುತ್ತಾ ಬಿಎಂಟಿಸಿ..?

ಬಿಎಂಟಿಸಿಯಲ್ಲಿ ಸಮಸ್ಯೆಗಳ ಸಾಗರವೇ ತುಂಬಿಕೊಂಡಿದೆ. ಹೀಗಾಗಿ ಮತ್ತೆ ಸಾರಿಗೆ ಸಿಬ್ಬಂದಿ ಸಿಡಿದೇಳುತ್ತಾರಾ ಅನ್ನೋ ಅನುಮಾನ ಶುರುವಾಗಿದೆ.

ಹೌದು… ನಾಳೆ ಮಧ್ಯಹ್ನಾ 1 ಗಂಟೆ ಸುಮಾರಿಗೆ ಬೆಂಗಳೂರಿನ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಬಿಎಂಟಿಸಿ ಸಿಬ್ಬಂದಿ ಧರಣಿ ಮಾಡಲು ನಿರ್ಧರಿಸಿದ್ದಾರೆ. ಆದರೆ ನಾಳೆ ಬಸ್ ಬಂದ್ ಮಾಡಲಾಗುವುದಿಲ್ಲ. ಶಾಂತಿಯುತ ಪ್ರತಿಭಟನೆ ಗೆ ಕರೆ ಕೊಡಲಾಗಿದೆ.

ಬಿಎಂಟಿಸಿ ಸಿಬ್ಬಂದಿಗೆ ಅರ್ಧ ಸಬಂಳ, ಹಿರಿಯ ಅಧಿಕಾರಿಗಳು ಕಿರುಕುಳ, ರಜೆ ವಿಚಾರಕ್ಕೆ ಸಂಘರ್ಷ ನಡೆಯುತ್ತಿದ್ದು ಇದರಿಂದ ಅಭದ್ರತೆ ಕಾಡುತ್ತಿದೆ ಎಂದು ಆರೋಪಿಸಿ ಸಿಬ್ಬಂದಿಗಳು ಧರಿಣಿ ನಡೆಸುತ್ತಿದ್ದಾರೆ. ಈ ಹಿಂದೆ ಸಾರಿಗೆ ಸಿಬ್ಬಂದಿಗಳು ಪ್ರತಿಭಟನೆ ಮಾಡಿ 9 ಬೇಡಿಕೆಗಳನ್ನು ಈಡೇರಿಕೆಗೆ ಸಚಿವರಿಂದ ಭರವಸೆ ಪಡೆದುಕೊಂಡಿದ್ದರು. ಆದರೆ ಆ ವೇಳೆ ಹೋರಾಟ ಮಾಡಲು ಮುಂದಾಳತ್ವ ವಹಿಸಿದವರನ್ನು ಟಾರ್ಗೇಟ್ ಮಾಡಲಾಗಿದೆ. ಸಂಬಳ ಸರಿಯಾಗಿ ಕೊಡುತ್ತಿಲ್ಲ. ರಜೆ ಕೊಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮಾತ್ರವಲ್ಲದೇ ಎರಡು ತಿಂಗಳಿಂದ ಸಂಬಳ ಕೊಡುತ್ತಿಲ್ಲ. ಜೊತೆಗೆ ಎಲ್ಲರಿಗೂ ಕೆಲಸ ಕೊಡುತ್ತಿಲ್ಲ. ಮಾತ್ರವಲ್ಲ ಕೆಲವರಿಗೆ ಮಾತ್ರ ಕೆಲಸ ಹೆಚ್ಚಿಗೆ ಕೊಡಲಾಗುತ್ತಿದೆ. ಹೀಗಾಗಿ ಸಿಬ್ಬಂದಿಗಳು ರೋಸಿ ಹೋಗಿದ್ದಾರೆ.

ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ “ಸಂಬಳ ಪೆಂಡಿಂಗ್ ಇಡಲು ಸಾಧ್ಯವಿಲ್ಲ. ಧರಣಿಯಿಂದ ಜನಸಾಮಾನ್ಯರಿಗೆ ತೊಂದರೆ ಆಗಲ್ಲ. ಕೊಟ್ಟ ಮಾತು ನಾವು ಉಳಿಸಿಕೊಂಡೇ ಕೊಡುತ್ತವೆ” ಎಂದು ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights