ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಪೋಟ : 6 ಜನರ ದೇಹ ಛಿದ್ರ ಛಿದ್ರ!

ಕಣ್ಣಾಯಿಸಿದಲೆಲ್ಲಾ ದೇಹದ ಭಾಗಗಳು. ಮುಗಿಲು ಮುಟ್ಟಿದ ಆಕ್ರಂದನ. ಕಣ್ಣಿದ್ದು ಕುರುಡಾದ ಅಧಿಕಾರಿಗಳ ಹಣದ ದಾಹಕ್ಕೆ ಇನ್ನೇಷ್ಟು ಜನ ಬಲಿಯಾಗಬೇಕೋ ಗೊತ್ತಿಲ್ಲ. ಜಿಲೆಟಿನ್ ಸ್ಪೋಟಗೊಂಡು 6 ಜನರ ದೇಹ ಛಿದ್ರ ಛಿದ್ರವಾದ ಘಟನೆ ಚಿಕ್ಕಬಳ್ಳಾಪುರದ ಹಿರೇನಾಗವೇರಿ ಎಂಬ ಗ್ರಾಮದಲ್ಲಿ ಕಲ್ಲು ಕ್ವಾರಿಯೊಂದರ ಬಳಿ ನಡೆದಿದೆ.

ಶಿವಮೊಗ್ಗದಲ್ಲಿ ಜಿಲೆಟಿನ್ ಸ್ಪೋಟ ಮಾಸವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಅಂಥದ್ದೇ ದುರಂತ ಸಂಭವಿಸಿದೆ.ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರ ಸ್ವಗ್ರಾಮದಿಂದ ಕೊಂಚ ದೂರದಲ್ಲಿರುವ ಹಿರೇನಾಗವೇರಿ ಎಂಬ ಗ್ರಾಮದಲ್ಲಿ ಕಲ್ಲು ಕ್ವಾರಿಯೊಂದರ ಬಳಿ ಭಾರೀ ಸ್ಪೋಟವಾಗಿ ಆರು ಮಂದಿ ಬಲಿಯಾಗಿದ್ದಾರೆ.

ನಿನ್ನೆ ರಾತ್ರಿ 12.30ಕ್ಕೆ  ಸಂಭವಿಸಿದ ಘಟನೆಯಲ್ಲಿ ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಈ ದುರಂತಕ್ಕೆ ಜಿಲೆಟಿನ್ ಕಡ್ಡಿಗಳ ಸ್ಪೋಟವೇ ಕಾರಣ ಎನ್ನಲಾಗುತ್ತಿದೆ.

ಘಟನೆಯಲ್ಲಿ ಸ್ಥಳೀಯ ನಿವಾಸಿ ರಾಮು, ವಾಚ್ ಮ್ಯಾನ್ ಮಹೇಶ್, ಗಂಗಾಧರ್, ಕಂಪ್ಯೂಟರ್ ಅಪರೇಟರ್ ಮುರಳಿ, ಎಂಜಿನಿಯರ್ ಉಮಾಕಾಂತ್ ಮೃತಪಟ್ಟಿದ್ದಾರೆ.

ಈ ಜಲ್ಲಿ ಕ್ರಶರ್ ಭ್ರಮರಾವಾಸಿನಿ ಸಂಸ್ಥಗೆ ಸೇರಿದ್ದು, ಅದು ರಾಘವೇಂದ್ರ ರೆಡ್ಡಿ, ನಾಗರಾಜರೆಡ್ಡಿ ಮತ್ತು ಶಿವಾ ರೆಡ್ಡಿ ಅವರು ಮಾಲೀಕರಾಗಿದ್ದಾರೆ. ಇಲ್ಲಿ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಶೇಖರಿಸಿಕೊಳ್ಳಲಾಗಿದೆ. ಈ ಹಿಂದೆ ಪೊಲೀಸರು ಈ ಸ್ಥಳದಲ್ಲಿ ದಾಳಿ ಕೂಡ ಮಾಡಿದ್ದರು. ಆದರೆ ಜಿಲೆಟಿನ್ ಕಡ್ಡಿ ಸಿಕ್ಕಿರಲಿಲ್ಲ. ನಿನ್ನೆ ಕೂಡ ಪೊಲೀಸರು ರೇಡ್ ಮಾಡಿದ್ದಾರೆ ಆದರೂ ಸಿಕ್ಕಿರಲಿಲ್ಲ. ಅರಣ್ಯ ಪ್ರದೇಶದಲ್ಲಿ ಈ ಕಡ್ಡಿಗಳನ್ನು ಬಚ್ಚಿಡಲಾಗಿತ್ತು. ಬಳಿಕ ಆ ಕಡ್ಡಿಗಳನ್ನು ಸಾಗಿಸಲು ಮುಂದಾದಾಗ ಮಾರ್ಗಮಧ್ಯೆ ಸ್ಪೋಟಗೊಂಡಿದೆ ಎನ್ನಲಾಗಿದೆ.

ಮೃತರಕುಟುಂಬದವರಿಗೆ 5 ಲಕ್ಷ ಪರಿಹಾರ ಕೂಡ ಘೋಷಿಸಿದ್ದಾರೆ. ಸ್ಪೋಟದ ತೀವ್ರತೆಗೆ ಜಿಲೆಟಿನ್ ಕಡ್ಡಿಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಐವರ ವ್ಯಕ್ತಿಗಳ ಮೃತ ದೇಹಗಳು ಛಿದ್ರ ಛಿದ್ರಗೊಂಡು ನೂರಕ್ಕೂ ಹೆಚ್ಚು ಮೀಟರ್ ದೂರದಲ್ಲಿ ಬಿದ್ದಿವೆ. ಗುರುತು ಕೂಡ ಮೃತದೇಹಗಳು ಸಿಗುತ್ತಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಸ್ಥಳಪರಿಶೀಲನೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights