ರಾಮನಗರದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟ : 9 ಜನರಿಗೆ ಗಂಭೀರ ಗಾಯ!

ಅಡಿಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 9 ಜನರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ರಾಮನಗರದಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ 7 ಜನರಿಗೆ ಗಂಭೀರ ಗಾಯವಾಗಿದ್ದು ಅಕ್ಕಪಕ್ಕದ ಮನೆಯಲ್ಲಿ ಮತ್ತಿಬ್ಬರಿಗೂ ಸಣ್ಣಪುಟ್ಟ ಗಾಯಗಾಲಾಗಿವೆ. ಇಂದು ಬೆಳಿಗ್ಗೆ ಆಡುಗೆ ಮಾಡಲು ಗ್ಯಾಸ್ ಸ್ಟವ್ ಆನ್ ಮಾಡಿದಾಗ ಘಟನೆ ಸಂಭವಿಸಿದೆ.

ಉತ್ತರ ಪ್ರದೇಶದಿಂದ ಹೊಸೂರಿಗೆ ಬಂದು ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ ಕುಟುಂದ ಭೀಮಸಿಂಗ್, ಅರವಿಂದ್, ರೂಬಿ, ಚಂದ್ರಾದೇವಿ, ಭೀಮ್ಸಿಂಗ್, ಹೃತಿಕ್, ಸಬೀರ್ ಮತ್ತು ಸಾಧಿಕ್ ಗೆ ಗಂಭೀರ ಗಾಯಗಳಾಗಿವೆ.

ಸಿಲಿಂಡರ್ ಸ್ಪೋಟಕ್ಕೆ ಇಡೀ ಮನೆಯಲ್ಲಿನ ವಸ್ತುಗಳು ಛಿದ್ರ ಛಿದ್ರವಾಗಿವೆ. ಮನೆಯ ಮೇಲ್ಛಾವಣಿಯ ಶೀಟ್ ಸಿಲಿಂಡರ್ ಸ್ಪೋಟಕ್ಕೆ ಪೀಸ್ ಪೀಸ್ ಆಗಿದೆ. ಮನೆಯಲ್ಲಿನ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಗಾಯಾಳುಗಳನ್ನ ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಪ್ರಕರಣ ಸಂಬಂಧ ಹೊಸೂರು ಟೌನ್ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights