ಸಾರ್ವಜನಿಕ ಗಣೇಶೋತ್ಸವ: ಸರ್ಕಾರದಿಂದ 17 ಅಂಶಗಳ ಮಾರ್ಗಸೂಚಿ ಬಿಡುಗಡೆ!

ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೆಲವು ನಿರ್ಬಂಧಗಳ ಜೊತೆಗೆ ಅವಕಾಶ ನೀಡಿದೆ. ಗಣೇಶೋತ್ಸವಕ್ಕಾಗಿ ಸರ್ಕಾರವು 17 ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರದ ಮಾರ್ಗಸೂಚಿಯನ್ವಯ ಗಣೇಶೋತ್ಸವನ್ನು ಸರಳವಾಗಿ ಭಕ್ತಿಪೂರ್ವಕವಾಗಿ ಆಚರಿಸಬೇಕು. ಮಾರ್ಗಸೂಚಿಗಳು ಹೀಗಿವೆ:

  • ದೇಗಲ ಕಚೇರಿಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಬಹುದಾಗಿದೆ.
  • ನಗರ ಪ್ರದೇಶಗಳಲ್ಲಿ ವಾರ್ಡ್ ಗೆ ಒಂದು ಮೂರ್ತಿ, ಗ್ರಾಮಗಳಲ್ಲಿ ಒಂದು ಮೂರ್ತಿ ಪ್ರತಿಷ್ಠಾಪಿಸಬಹುದು.
  • ಆಯಾ ಸ್ಥಳೀಯ ಆಡಳಿತದಿಂದ ಅನುಮತಿ ಪಡೆದಿರಬೇಕು.
  • ಮನೆಗಳಲ್ಲಿ ಎರಡು ಅಡಿ ಹಾಗೂ ಸಾರ್ವಜನಿಕವಾಗಿ ನಾಲ್ಕು ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು.
  • ಮೂರ್ತಿ ತರುವಾಗ ಅಥವಾ ಮೂರ್ತಿ ವಿಸರ್ಜನೆ ವೇಳೆ ಮೆರವಣಿಗೆ ನಿಷಿದ್ಧ.
  • ಗರಿಷ್ಟ ಐದು ದಿನಗಳವರೆಗೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಬೇಕು,.
  • ನಿಗದಿತ ಜಾಗದಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜಿಸಬೇಕು.
  • ಗಣೇಶೋತ್ಸವದ ವೇಳೆ ಸಂಗೀತ, ನೃತ್ಯ ಡಿಜೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ.
  • ಅಪಾರ್ಟ್ ಮೆಂಟ್ ಗಳಲ್ಲೂ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದೆ.
  • ಗಣೇಶ ವಿಸರ್ಜನೆ ವೇಳೆ ಸಾರ್ವಜನಿಕರು, ವಾಹನ ಓಡಾಟಕ್ಕೆ ತೊಂದರೆಯಾಗುವಂತಿಲ್ಲ.
  • ವಿಸರ್ಜನೆ ವೇಳೆ, ಕನಿಷ್ಟ ಜನ ಇರಬೇಕು.
  • ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಕೋವಿಡ್ ಲಸಿಕೆ ಕಡ್ಡಾಯವಾಗಿರಬೇಕು.
  • ಲಸಿಕಾಕರಣದ ಪ್ರಮಾಣ ಪತ್ರ ಸಲ್ಲಿಸಬೇಕು.
  • ಜಿಲ್ಲಾ ಕೇಂದ್ರಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಆಯಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ…

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಕಾಂಗ್ರೆಸ್‌ ಭರ್ಜರಿ ಜಯ; ಎರಡನೇ ಸ್ಥಾನಕ್ಕೆ ಕುಸಿದ ಬಿಜೆಪಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights