ಬಂಗಾಳದಲ್ಲಿ BJPಗೆ ಮತ್ತಷ್ಟು ಬಲ; ನಟ ಸ್ಟಾರ್‌ಗುಪ್ತಾ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆ!

ಬಂಗಾಳಿ ಚಲನಚಿತ್ರ ನಟ ಯಶ್ ದಾಸ್‌ಗುಪ್ತಾ ಮತ್ತು ಹಲವು ಸಿನಿಮಾ ನಟರು ಕೊಲ್ಕತ್ತಾದಲ್ಲಿ ಬುಧವಾರ ನಡೆದ ಬಿಜೆಪಿ ರ್ಯಾಲಿಯಲ್ಲಿ ಕೇಸರಿ ಶಿಬಿರಕ್ಕೆ ಸೇರ್ಪಡೆಯಾಗಿದ್ದಾರೆ.

ದಾಸ್‌ಗುಪ್ತಾ ಅವರನ್ನು ಕೇಸರಿ ಶಿಬಿರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಸ್ವಾಗತಿಸಿದರು.

ಬಿಜೆಪಿ ಯಾವಾಗಲೂ ಯುವಜನರಿಗೆ ಅವಕಾಶಗಳನ್ನು ನೀಡಿದೆ. ನಾವೆಲ್ಲರೂ ಉತ್ತಮ ಬದಲಾವಣೆಗಾಗಿ ಕೆಲಸ ಮಾಡಬೇಕಾಗಿದೆ ಎಂದು ದಾಸ್‌ಗುಪ್ತಾ ಹೇಳಿದ್ದಾರೆ.

ದಾಸ್‌ಗುಪ್ತಾ ಅವರು ಟಿಎಂಸಿ ಸಂಸದ ಮತ್ತು ಸಹ ನಟ ನುಸ್ರತ್ ಜಹಾನ್ ಅವರ ಆಪ್ತ ಸ್ನೇಹಿತರಾಗಿದ್ದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಂಜಾಬ್‌ ಸ್ಥಳೀಯ ಸಂಸ್ಥೆಗಳನ್ನು ಬಾಚಿಕೊಂಡ ಕಾಂಗ್ರೆಸ್‌; ನೆಲೆಯಿಲ್ಲದೆ ಧೂಳಿಪಟವಾದ BJP!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights