ಗೋಕಾಕ್ ನಲ್ಲಿ ಬಲವಂತವಾಗಿ ಮಾರ್ಕೇಟ್ ಬಂದ್ : ಕಲ್ಲು ಹಿಡಿದು ನಿಂತ ರಮೇಶ್ ಬೆಂಬಲಿಗರು!

ಕೋಕಾಕ್ ನಲ್ಲಿ ರಮೇಶ್ ಜಾರಕಿಹೊಳಿಯವರ ಬೆಂಬಲಿಗರು ಕಲ್ಲು ಹಿಡಿದು ಬಲವಂತವಾಗಿ ಮಾರ್ಕೇಟ್ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ರಾಸಲೀಲೆ ಸಿಡಿ ಬಿಡುಗಡೆಯಾಗಿ ಪಕ್ಷ ಮುಜುಗರಕ್ಕೀಡಾಗಬಾರದು ಎಂದು ಸಚಿವ ಸ್ಥಾನಕ್ಕೆ ಖುದ್ದು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೆ ಅವರ ಬೆಂಬಲಿಗರು ಪ್ರತಿಭಟನೆಗಿಳಿದಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಬಾರದು. ಒಂದು ವೇಳೆ ನೀಡಿದರೂ ಸಿಎಂ ಯಡಿಯೂರಪ್ಪ ರಾಜೀನಾಮೆ ಅಂಗೀಕರಿಸಬಾರದು. ಅಂಗೀಕರಿಸಿದ್ದೇ ಆದರೆ ಬೆಳಗಾವಿ ಬಂದ್ ಮಾಡುವುದಾಗಿ ರಮೇಶ್ ಬೆಂಬಲಿಗರು ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ ಇಂದೇ ಗೋಕಾಕ್ ನಲ್ಲಿ ಬಲವಂತವಾಗಿ ಮಾರ್ಕೇಟ್ ಬಂದ್ ಮಾಡಿ ಆಕ್ರೋಶ  ಹೊರಹಾಕಿದ್ದಾರೆ. ಕಲ್ಲು ಹಿಡಿದು ನಿಂತ ಬೆಂಬಲಿಗರು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಮಾತ್ರವಲ್ಲದೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆ. ಇನ್ನೋಂದಿಷ್ಟು ಬೆಂಬಲಿಗರು ರಮೇಶ್ ಕಟೌಟ್ ಗೆ ಹಾಲಿನ ಅಭಿಶೇಕ ಮಾಡತ್ತಿದ್ದರೆ ಇನ್ನೂ ಕೆಲವರು ಟಯರ್ ಗೆ ಬೆಂಕಿ ಹಚ್ಚು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಬಲಿಗರನ್ನು ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈ ರೀತಿ ಜನಸಾಮಾನ್ಯರಿಗೆ ತೊಂದರೆ ಕೊಡುವುದು ಒಪ್ಪುವಂತದಲ್ಲ. ಹೀಗಾಗಿ ಪಕ್ಕದ ತಾಲೂಕುಗಳಿಂದ ಪೊಲೀಸರನ್ನು ಹೆಚ್ಚುವರಿಯಾಗಿ ಕರೆಸಿಕೊಳ್ಳಲಾಗುತ್ತಿದೆ. ಈಗಿರುವ ಬೆಂಬಲಿಗರೊಂದಿಗೆ ಗ್ರಾಮೀಣ ಭಾಗದಿಂದ ರಮೇಶ್ ಬೆಂಬಲಿಗರು ಬಂದಿದ್ದೇ ಆದರೆ ಪ್ರತಿಭಟನೆ ಕಾವು ಹೆಚ್ಚಾಗುವ ಸಾಧ್ಯತೆ ಇದೆ.

ಹೀಗಾಗಿ ಮತ್ತೊಂದು ಕಡೆ ಕಲ್ಲನ್ನು ಕೈಯಲ್ಲಿ ಹಿಡಿದುಕೊಮಡು ಗುಂಡಾ ವರ್ತನೆ ತೋರುತ್ತಿದ್ದಾರೆ. ಇದು ಸದ್ಯ ನಿಯಂತ್ರಣಕ್ಕೆ ಬರುವಂತೆ ಕಾಣಿಸುತ್ತಿಲ್ಲ. ಖುದ್ದು ರಮೇಶ್ ಅವರೇ ಬೆಂಬಲಿಗರಿಗೆ ಮಾತನಾಡಿ ಸಮಾಧಾನ ಮಾಡಿದರೆ ಮಾತ್ರ ಬೆಂಬಲಿಗರು ತಿಳಿಗಿಳ್ಳಬಹುದೆನೋ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights