ಇದೇ ಕಾರಣಕ್ಕೆ ನೋಡಿ ಮಂಜುಗೆ ಬಿಗ್ ಬಾಸ್ ಕಿರೀಟ್ ಸಿಕ್ಕಿದ್ದು..!

ಬಿಗ್ ಬಾಸ್ ಸೀಸನ್ 8ರ ವಿನ್ನರ್ ಆಗಿ ಮಂಜು ಪಾವಗಡ ಆಯ್ಕೆಯಾಗಿದ್ದಾರೆ. 45,03,495 ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತಿ ಹೆಚ್ಚು ವೋಟಿಂಗ್ ಪಡೆದ ಸ್ಪರ್ಧಿಯಾಗಿ ಮಂಜು ಹೊರಹೊಮ್ಮಿದ್ದಾರೆ.

ಆರಂಭದಿಂದಲೂ ಮಂಜು ಪಾವಗಡ ಟಾಸ್ಕ್ ಚೆನ್ನಾಗಿ ಆಡುತ್ತ, ಮನರಂಜನೆಯೂ ನೀಡುತ್ತ ಪ್ರತಿ ಎಲಿಮಿನೇಶನ್‌ನಲ್ಲಿಯೂ ಬಚಾವ್ ಆಗುತ್ತಿದ್ದರು. ‘ಮಜಾ ಭಾರತ’ ಶೋನಲ್ಲಿ ಭಾಗವಹಿಸಿದ್ದ ಮಂಜು ಪಾವಗಡ ಅವರು ಬಿಗ್ ಬಾಸ್‌ಗೆ ಬಂದಾಗಲೇ ಸಿಕ್ಕಾಪಟ್ಟೆ ಮನರಂಜನೆ ಇರಲಿದೆ ಎಂದು ಕೆಲವರು ಅಂದುಕೊಂಡಿದ್ದರು, ಆ ನಿರೀಕ್ಷೆ ಸುಳ್ಳಾಗಲಿಲ್ಲ.

ಬಿಗ್ ಬಾಸ್ ಕನ್ನಡ 8ರ ಮೊದಲ ವಾರದಿಂದಲೂ ಮಂಜು ಪಾವಗಡ ಎಲ್ಲರನ್ನು ನಗಿಸುತ್ತ, ಅವರು ನಗುತ್ತ ಸಮಯ ಕಳೆದಿದ್ದರು. ನಿಧಿ ಸುಬ್ಬಯ್ಯ, ಶುಭಾ ಪೂಂಜಾ, ರಾಜೀವ್, ಕೆಪಿ ಅರವಿಂದ್, ವೈಷ್ಣವಿ ಗೌಡ ಕೂಡ ಮಂಜು ಪಾವಗಡ ಅವರ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ್ದರು. ಹಳ್ಳಿ ಪ್ರತಿಭೆ ಮಂಜು ಪಾವಗಡ ಅವರು ವಿಜೇತರಾಗುತ್ತಾರೆ ಎಂದು ಸಾಕಷ್ಟು ಜನರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು. ಮಂಜು ಪಾವಗಡ ಫಿನಾಲೆ ವೇದಿಕೆಯಲ್ಲಿ ಇರುತ್ತಾರೆ ಎಂದು ಕೆಲ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿಯೇ ಹೇಳಿದ್ದುಂಟು.

ಅಡುಗೆ, ಹಾಸ್ಯ, ಆಟ ಎಲ್ಲವೂ ಮಂಜುಗೆ ಬಿಗ್ ಬಾಸ್ ನಲ್ಲಿ ಗೆಲ್ಲಲು ದಾರಿ ಮಾಡಿಕೊಟ್ಟಿವೆ. ಕಠಿಣ ಸ್ಪರ್ಧಿಯಾಗಿದ್ದ ಅರವಿಂದ್ ಕೆಪಿ ಆಟದಲ್ಲಿ ಗೆಲ್ಲಲು ಮಂಜು ವಿರುದ್ಧ ಪೈಪೋಟಿಗಿಳಿಯುತ್ತಿದ್ದರು. ಹಾಗೆ ನೋಡಿದರೆ ಆಟದಲ್ಲಿ ಕಠಿಣ ಪ್ರತಿಸ್ಪರ್ಧಿ ಅಂದರೆ ಮಂಜುಗೆ ಅರವಿಂದ್ ಮಾತ್ರ. ಹೀಗಿದ್ದರು ಮಂಜು ಕೊನೆ ಕೊನೆಗೆ ತಮ್ಮ ವಿರುದ್ಧ ಆಡಲು ಅರವಿಂದ್ ಕೆಪಿ ಅವರನ್ನೇ ಆಯ್ಕೆ ಮಾಡಿಕೊಂಡಿರೋದಿದೆ. ಇದು ಮಂಜು ಗೆಲ್ಲಲು ಪ್ಲಸ್ ಪಾಯಿಂಟ್ ಆಯ್ತು. ಜೊತೆಗೆ ಮಂಜು ಆರಂಭದಿಂದಲೂ ಎಥಾಸ್ಥಿತಿಯಲ್ಲಿ ಗೆಲ್ಲುವ ಛಲದೊಂದಿಗೆ ಆಟ ಆಡಿಕೊಂಡು ಬಂದಿದ್ದಾರೆ. ಆಟದಲ್ಲಿ ಕಠಿಣ ಪೈಪೋಟಿಯಾಗಿದ್ದರು ಅರವಿಂದ್ ಸೋಲು ಕಾಣುವುದಕ್ಕೆ ಮಂಜುಗೆ ಹಾಸ್ಯವೇ ಪ್ಲಸ್ ಪಾಯಿಂಟ್ ಆಯ್ತು.

ಇನ್ನೂ ಬಿಗ್ ಬಾಸ್ ಮನೆಯಲ್ಲಿ ಅಡುಗೆ ವಿಚಾರಕ್ಕೆ ಮಂಜು ಪಾವಗಡ ಚೆನ್ನಾಗಿ ಅಡುಗೆ ಮಾಡುತ್ತಾರೆನ್ನುವ ಮಾತಿದೆ. ಇದೆಲ್ಲದ್ರಿಂದ ಮಂಜು ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಇನ್ನೂ ಈ ಬಾರಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಪಡೆದ ಮತಗಳನ್ನು ಹಂಚಿಕೊಳ್ಳಲಾಗಿದ್ದು, ಬಿಗ್ ಬಾಸ್ ಕನ್ನಡ 8ನೇ ಸೀಸನ್​ನ ಮೊದಲ ರನ್ನರ್ ಅಪ್ ಆಗಿರುವ ಸ್ಪರ್ಧಿ ಅರವಿಂದ್ 43,35,957 ಮತಗಳನ್ನು ಪಡೆದಿದ್ದಾರೆ. ಎರಡನೇ ರನ್ನರ್ ಅಪ್ ಆಗಿರುವ ದಿವ್ಯಾ ಉರುಡುಗ 11,61,205, ಮೂರನೇ ರನ್ನರ್ ಅಪ್ ಆಗಿರುವ ವೈಷ್ಣವಿ ಗೌಡ 10,21,831 ಹಾಗೂ ನಾಲ್ಕನೇ ರನ್ನರ್ ಅಪ್ ಆಗಿರುವ ಪ್ರಶಾಂತ್ ಸಂಬರಗಿ 6,69,020 ಮತಗಳನ್ನು ಪಡೆದಿದ್ದಾರೆ. 5,03,495 ಮತಗಳನ್ನು ಪಡೆಯುವ ಮೂಲಕ ಮಂಜು ಪಾವಗಡ ಬಿಗ್ ಬಾಸ್ ಕನ್ನಡದ ಸೀಸನ್ 8ರ ವಿನ್ನರ್ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights