ಕಾಬೂಲ್ ನಿಂದ ಟೆಕ್ ಆಫ್ ಆದ ಯುಎಸ್ ವಿಮಾನದಿಂದ ಕೆಳಗೆ ಬಿದ್ದು ಫುಟ್ ಬಾಲ್ ಆಟಗಾರ ಸಾವು!

ಕಾಬೂಲ್ ನಿಂದ ಟೆಕ್ ಆಫ್ ಆದ ಯುಎಸ್ ವಿಮಾನದಿಂದ ಕೆಳಗೆ ಬಿದ್ದ ಇಬ್ಬರಲ್ಲಿ ಒಬ್ಬ ಫುಟ್ ಬಾಲ್ ಆಟಗಾರ ಎಂದು ತಿಳಿದು ಬಂದಿದೆ.

ಮೊನ್ನೆಯಷ್ಟೇ ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಆಫ್ಘನ್ ಇಬ್ಬರು ಪ್ರಜೆಗಳು ಯುಎಸ್ ವಿಮಾನವನ್ನು ಹತ್ತಿ ವಿಮಾನ ಹಾರುವಾಗ ಕೆಳಗೆ ಬಿದ್ದಿದ್ದರು. ಹೀಗೆ ವಿಮಾನದಿಂದ ಬಿದ್ದಿದ್ದ ಇಬ್ಬರಲ್ಲಿ ಓರ್ವ ಫುಟ್ ಬಾಲ್ ಕಿರಿಯರ ತಂಡದ ಆಟಗಾರ ಝಾಕಿ ಅನ್ವಾರಿ ಎಂದು ಗುರುತಿಸಲಾಗಿದೆ.

ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಘ್ಘಾನಿಸ್ತಾನ ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿದೆ. ತಾಲಿಬಾನ್ ಭಯೋತ್ಪಾದಕರ ಅಟ್ಟಹಾಸಕ್ಕೆ ಹೆದರಿಕೊಂಡಿರುವ ಅಫ್ಘಾನ್ ನಾಗರಿಕರು ದೇಶವನ್ನು ತೊರೆಯಲು ಮುಂದಾಗಿದ್ದಾರೆ. ಹೀಗಾಗಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾವಿರಾರು ಜನರು ದಾಂಗುಡಿ ಇಟ್ಟಿದ್ದಾರೆ. ಹೇಗಾದರೂ ಮಾಡಿ ಜೀವ ಊಳಿಸಿಕೊಂಡರೆ ಸಾಕಪ್ಪ ಎಂದು ದಂಡು ದಂಡಾಗಿ ಜನರು ವಿಮಾನ ನಿಲ್ದಾಣದತ್ತ ಮುಖಮಾಡಿದ್ದಾರೆ.

ಅಘ್ಘಾನಿಸ್ತಾನ ತೊರೆದು ಬೇರೆ ದೇಶಗಳಿಗೆ ತೆರಲು ಅಲ್ಲಿ ನ ಪ್ರಜೆಗಳು ಸರ್ವಪ್ರಯತ್ನ ನಡೆಸುತ್ತಿದ್ದಾರೆ. ಯಾವಾಗ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿತೋ ಅಫ್ಘಾನ್ ಜನರು ಹತಾಶರಾಗಿದ್ದಾರೆ. ಇಡೀ ದೇಶವೇ ತಾಲಿಬಾನ್ ನಿಯಂತ್ರಣದಲ್ಲಿರುವುದರಿಂದ ಇನ್ನೂ ನಮಗೆ ಉಳಿಗಾಲವಿಲ್ಲವೆಂದು ದೇಶ ತೊರೆಯಲು ಜನರು ನಿರ್ಧರಿಸಿದ್ದಾರೆ. ಹೀಗಾಗಿ ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೇರಲು ಹರಸಾಹಸಪಡುತ್ತಿದ್ದಾರೆ.

ಇದರ ಮಧ್ಯೆ ತಾಲಿಬಾನಿಗಳು ಪ್ರಜಾಪ್ರಭುತ್ವ ಸ್ಥಾಪನೆ ಇಲ್ಲ ಎಂದು ಘೋಷಣೆ ಮಾಡಿದ್ದು ಆಫ್ಘನ್ನರಲ್ಲಿ ಮತ್ತಷ್ಟು ಭಯ ಹುಟ್ಟಿಸಿದೆ. ಕಾಬೂಲ್ ನಲ್ಲಿ ಹಾಕಿದ ತಡೆಗೋಡೆ ಬೇಲಿತಂತಿಗಳ ಬಳಿ ನಿಂತು ಮಹಿಳೆಯರು ತಮ್ಮ ಮಕ್ಕಳನ್ನು ಮುಳ್ಳು ತಂತಿಯ ಮೇಲೆ ಎಸೆದು ತಮ್ಮ ಮಕ್ಕಳನ್ನು ರಕ್ಷಣೆ ಮಾಡುವಂತೆ ಯುಎಸ್ ಸೈನವನ್ನು ಕೇಳಿಕೊಳ್ಳುತ್ತಿದ್ದಾರೆ. ಇಂಥಹ ಅಮಾನವೀಯ ಸ್ಥಿತಿ ಆಫ್ಘನ್ ನಲ್ಲಿ ನಿರ್ಮಾಣವಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights