ಮಂಜಿನ ಗುಡಿಸಲಿನಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಕಾಫಿ…!

ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಪ್ರವಾಸೋದ್ಯಮ ಕೊಂಚ ಚೇತರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ವಿಭಿನ್ನ ರೀತಿಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಜಮ್ಮು-ಕಾಶ್ಮೀರದಲ್ಲಿ ಗುಲ್ಮಾರ್ಗ್ ರೆಸಾರ್ಟ್ವೊಂದು ದೇಶದ ಮೊಟ್ಟಮೊದಲ ಮಂಜಿನ ಕೆಫೆಯನ್ನು ತೆರೆಯುವ ಮೂಲಕ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ.

ಹೌದು… ನೋಡಲು ಬಲ್ಫ್ ಆಕಾರದಲ್ಲಿ ಕಾಣುವ  ಈ ಮಂಜಿನ ರೆಸ್ಟೋರೆಂಟ್ ಈ ಇಗ್ಲೋ ಕೆಫೆ ಸಂಪೂರ್ಣವಾಗಿ ಹಿಮಗಡ್ಡೆಯಿಂದಲೇ ನಿರ್ಮಾಣವಾಗಿದ್ದು, ಕೂರುವ ಟೇಬಲ್ ಗಳನ್ನೂ ಮಂಜಿನಿಂದಲೇ ನಿರ್ಮಿಸಲಾಗಿದೆ. 15 ಅಡಿ ಎತ್ತರ, 26 ಅಡಿ ಅಗಲವಿರುವ ಈ ಪುಟ್ಟ ಗುಡಿಸಲಿನಂತಿರುವ ಕೆಫೆಯಲ್ಲಿ ನಾಲ್ಕು ಟೇಬಲ್ ಗಳನ್ನು ಅಳವಡಿಸಲಾಗಿದ್ದು, ಗರಿಷ್ಠ 16 ಜನರು ಒಟ್ಟಿಗೆ ಕೂರಬಹುದಾಗಿದೆ.

ಚುಮುಚುಮು ಚಳಿಯಲ್ಲಿ ಕೆಫೆಗೆ ವರುವ ಗ್ರಾಹಕರಿಕೆ ಬಿಸಿ ಬಿಸಿ ಆಹಾರ ನೀಡಿ ಆಕರ್ಷಿಕಸಲಾಗುತ್ತಿದೆ. ಸೋಷಿಯಲ್ ಮೀಡಿಯಾ ಪೋಸ್ಟ್ ನೋಡಿ ಧಾವಿಸುತ್ತಿರುವ ಪ್ರವಾಸಿಗರು ವಿಭಿನ್ನ ಕೆಫೆ ಕಂಡು ಖುಷಿಯಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights