ಓಟ ಮುಗಿಸಿದ ಫ್ಲೈಯಿಂಗ್ ಸ್ಟಾರ್‌ ಮಿಲ್ಖಾ ಸಿಂಗ್; ಮರೆಯಾಯಿತು ಅದ್ಭುತ ಪ್ರತಿಭೆ!

ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತಿ ಪಡೆದದ್ದ ಭಾರತ ಮಾಜಿ ಅಥ್ಲಿಟ್ ಓಟಗಾರ ಮಿಲ್ಖಾ ಸಿಂಗ್ ಅವರು ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾರೆ.

ಐದು ದಿನಗಳ ಹಿಂದೆಯಷ್ಟೇ ಅವರ ಪತ್ನಿ ಕೂಡ ನಿಧನರಾಗಿದ್ದರು. ಅವರ ಸಾವಿನಿಂದ ಮನನೊಂದಿದ್ದ ಮಿಲ್ಖಾ ಸಿಂಗ್‌ ಕೂಡ ನಿಧನರಾಗಿದ್ದಾರೆ.

1956, 1960, 1964ರ ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1960ರಲ್ಲಿ ರೋಮ್‌ನಲ್ಲಿ ನಡೆದ​ ಒಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಿಲ್ಖಾ ಸಿಂಗ್‌ 400 ಮೀಟರ್ಸ್​ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. 1958ರ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್​ ಗೇಮ್ಸ್​ನಲ್ಲಿ 4 ಬಾರಿ ಚಿನ್ನದ ಪದಕಗಳನ್ನು ಗೆದ್ದು, ಪ್ಲೈಯಿಂಗ್‌ ಸಿಂಗ್‌ ಎಂದು ಖ್ಯಾತಿ ಪಡೆದುಕೊಂಡಿದ್ದರು.

1960 Rome Olympics: Milkha Singh comes within a whisker of history

‘ಕೆಲವು ದಿನಗಳ ಹಿಂದಷ್ಟೇ ಮಿಲ್ಖಾ ಸಿಂಗ್‌ ಜೀ ಅವರ ಬಳಿ ಮಾತನಾಡಿದ್ದೆ. ಅದು ನಮ್ಮ ಕೊನೆಯ ಸಂಭಾಷಣೆಯಾಗುತ್ತದೆ ಎಂದು ಭಾವಿಸಿರಲಿಲ್ಲ. ಹಲವಾರು ಉದಯೋನ್ಮುಖ ಕ್ರೀಡಾಪಟುಗಳು ಅವರ ಜೀವನ ಯಾನದಿಂದ ಸ್ಫೂರ್ತಿ ಪಡೆಯಲಿದ್ದಾರೆ. ಅವರ ಅಗಲುವಿಕೆಗೆ ಸಂತಾಪಗಳು’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮಿಲ್ಖಾ ಸಿಂಗ್‌ ನಿಧನವು ನನ್ನನ್ನು ದುಃಖತಪ್ತನನ್ನಾಗಿ ಮಾಡಿದೆ. ಅವರ ಹೋರಾಟಗಳ ಕಥೆ ಮತ್ತು ವ್ಯಕ್ತಿತ್ವದ ಶಕ್ತಿಯು ತಲೆಮಾರುಗಳ ಕಾಲ ಭಾರತೀಯರಿಗೆ ಸ್ಫೂರ್ತಿ ನೀಡಲಿದೆ. ಸಂತಾಪಗಳು’ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

‘ಮಿಲ್ಖಾ ಸಿಂಗ್ ಜೀ ನಮ್ಮನ್ನಗಲಿದ್ದಾರೆ. ಆದರೆ, ಮಿಲ್ಖಾ ಎಂಬ ಹೆಸರು ಧೈರ್ಯ ಮತ್ತು ಇಚ್ಛಾಶಕ್ತಿಯ ಪರ್ಯಾಯವಾಗಿ ನಮ್ಮಲ್ಲುಳಿಯಲಿದೆ. ಎಂಥಾ ಅದ್ಭುತ ಮನುಷ್ಯ. ಓಂ ಶಾಂತಿ’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ. ಜತೆಗೆ, ಮಿಲ್ಖಾ ಸಿಂಗ್ ಅವರ ವಿಡಿಯೊ ತುಣುಕೊಂದನ್ನೂ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿ ಗಲೆಭೆ ಪ್ರಕರಣ: ವಿದ್ಯಾರ್ಥಿಗಳಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನು ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights