ಉದ್ಯೋಗಿಗಳಿಗೆ ಫಿಟ್‌ನೆಸ್‌ ಟಾಸ್ಕ್‌; ಒಂದು ತಿಂಗಳ ಸಂಬಳ ಬೋನಸ್‌; 10 ಲಕ್ಷ ರೂ ಮೌಲ್ಯದ ಲಕ್ಕಿ ಡ್ರಾ ಘೋಷಿಸಿದ ಸಂಸ್ಥೆ!

ದೀರ್ಘ ಕೆಲಸದ ಸಮಯ ಮತ್ತು ವರ್ಕ್ ಫ್ರಮ್ ಹೋಮ್‌ನಿಂದಾಗಿ ಹಲವು ಉದ್ಯೋಗಿಗಳ ದಿನಚರಿಗಳು ಬದಲಾಗಿವೆ. ಇಂತಹ ಬದಲಾದ ಕೆಲಸದ ಸ್ಟೈಲ್‌ನಿಂದಾಗಿ ಉದ್ಯೋಗಿಗಳು ತಮ್ಮ ಫಿಟ್ನೆಸ್‌ ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದ್ದು, ಉದ್ಯೋಗಿಗಳು ತಮ್ಮ ಫಿಟ್‌ನೆಸ್‌ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಪ್ರೋತ್ಸಾಹಿಸಲು ಭಾರತೀಯ ಯುನಿಕಾರ್ನ್ ಝೀರೋದಾ ಬ್ರೋಕಿಂಗ್ ಲಿಮಿಟೆಡ್ ವಿಶಿಷ್ಟ ಯೋಜನೆಯನ್ನು ಆರಂಭಿಸಿದೆ.

ಅದರಂತೆ, ತಮ್ಮ ಫಿಟ್ನೆಸ್‌ಅನ್ನು ಕಾಯ್ದುಕೊಳ್ಳುವ ಉದ್ಯೋಗಿಗಳಿಗೆ ”Get Healthy’ ಕಾರ್ಯಕ್ರಮವನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ಬೋನಸ್ ಆಗಿ ಒಂದು ತಿಂಗಳ ವೇತನ ಮತ್ತು 10 ಲಕ್ಷ ರೂ.ಗಳ ಲಕ್ಕಿ ಡ್ರಾ ಬಹುಮಾನ ನೀಡುವುದಾಗಿ ಸಂಸ್ಥೆಯ ಸ್ಥಾಪಕ ಮತ್ತು ಸಿಇಒ ನಿಥಿನ್ ಕಾಮತ್ ತಿಳಿಸಿದ್ದಾರೆ.

ಲಾಕ್ ಡೌನ್ ಸಮಮಯದಲ್ಲಿ ತಮ್ಮ ಉದ್ಯೋಗಿಗಳ ದೈಹಿಕ ಚಟುವಟಿಕೆಯ ಕೊರತೆ, ಕೆಲಸ-ಜೀವನದ ಅಸಮತೋಲನ, ಕೆಟ್ಟ ಆಹಾರ ಮತ್ತು ಹೆಚ್ಚಿನವುಗಳಿಂದಾಗಿ ಅನಾರೋಗ್ಯ ಕಾಡುತ್ತದೆ. ಆರೋಗ್ಯಕರವಾಗಿರಲು ತಂಡವನ್ನು ಪ್ರೋತ್ಸಾಹಿಸುವ ಮಾರ್ಗವನ್ನು ನಾವು ಯೋಚಿಸಿದ್ದೇವೆ. ಯೋಜನೆಯಿಂದ ಉತ್ತಮ ಫಲಿತಾಂಶ ಕಂಡುಬರುತ್ತಿದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ನಮ್ಮ ಸಂಸ್ಥೆಯ ಕ್ರಮವು ಉದ್ಯೋಗಿಗಳಿಗೆ ಸ್ಪೂರ್ತಿಯನ್ನು ನೀಡುತ್ತದೆ. ಅಲ್ಲದೆ, ಇತರರನ್ನು ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಒತ್ತಾಯಿಸುತ್ತವೆ. ಉದ್ಯೋಗಿಗಳು ಆರೋಗ್ಯಕರವಾಗಿರುವುದು ವೃತ್ತಿಪರ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂಬುದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ನಮ್ಮ ಗೆಟ್ ಹೆಲ್ತಿ (get healthy) ಕಾರ್ಯಕ್ರಮವು ಇನ್ನುಮುಂದೆ ನಿರಂತರವಾಗಿ ನಡೆಯುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಇದನ್ನೂ ಓದಿ: ಎರಡು ಪ್ರತ್ಯೇಕ ಘಟನೆಗಳಲ್ಲಿ ಮುಸ್ಲಿಂ ಯುವಕರ ಮೇಲೆ ಹಲ್ಲೆ; ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights