ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಗಣತಂತ್ರ ಪ್ರತಿಭಟನಾ ಪರೇಡ್; ಗಡಿಯಲ್ಲಿ ರೈತರ ಶಕ್ತಿ ಪ್ರದರ್ಶನ!

ಇಂದು ರೈತರ ಹೋರಾಟ ಮೂರನೇ ತಿಂಗಳಿಗೆ ಕಾಲಿಟ್ಟಿದೆ. ಅಲ್ಲದೆ, ದೇಶಾದ್ಯಂತ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ರೈತರು ಜನಗಣರಾಜ್ಯೋತ್ಸವ ಆಚರಿಸುತ್ತಿದ್ದಾರೆ. ದೇಶಾದ್ಯಂತ ರೈತರು ಟ್ರಾಕ್ಟರ್‌ ಪರೇಡ್‌ ನಡೆಸುತ್ತಿದ್ದಾರೆ.

ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಪ್ರತಿಭಟನಾ ನಿರತ ರೈತರು ಸಿಂಘು, ಟಿಕ್ರಿ, ಘಾಜಿಪುರ್ ಗಡಿಯ ಮೂಲಕ ಟ್ರ್ಯಾಕ್ಟರ್ ಪರೇಡ್‌ ಆರಂಭಿಸುತ್ತಿದ್ದಾರೆ.  ರೈತರ ಪ್ರತಿಭಟನಾ ಪರೇಡ್‌ ಗಣರಾಜ್ಯೋತ್ಸವ ಆಚರಣೆ ನಡೆಯುವ ಪ್ರದೇಶಕ್ಕೂ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರತಿಭಟನಾ ಪಥಸಂಚಲನ ನಡೆಯಲಿದೆ.

ಟ್ರಾಕ್ಟರ್‌ ಪರೇಡ್‌ಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನಗಳಿಂದ ಅತಿ ಹೆಚ್ಚು ಟ್ರಾಕ್ಟರ್‌ಗಳು ಪಾಲ್ಗೊಂಡಿದ್ದು, ದೇಶದ ವಿವಿಧ ರಾಜ್ಯಗಳಿಂದ ಸಾವಿರಾರು ಟ್ರಾಕ್ಟರ್‌ಗಳು ಧಾವಿಸಿವೆ.

ಈಗಾಗಲೇ ಸಿಂಘು ಗಡಿಯಲ್ಲಿದ್ದ ರೈತರು ಪರೇಡ್‌ ಹೊರಟಿದ್ದು, ಎಲ್ಲಾ ಗಡಿ ಭಾಗಗಳಿಂದಲೂ ರೈತರು ಪರೇಡ್‌ ಹೊರಡಲಿದ್ದಾರೆ. ಗಣರಾಜ್ಯೋತ್ಸವ ಪರೇಡ್ ಮುಗಿದ ಕೆಲವೇ ಕ್ಷಣಗಳಲ್ಲಿ ರೈತರ ಟ್ರಾಕ್ಟರ್ ಪರೇಡ್ ದೆಹಲಿ ತಲುಪಲಿದೆ.

ಪ್ರತಿಭಟನಾ ರೈತರು ಶಾಂತಿಯುತವಾಗಿ ಟ್ರಾಕ್ಟರ್ ಪರೇಡ್‌ ನಡೆಸಲಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ. ಅಲ್ಲದೆ, ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹಸುರು ಹೋಗಿ ಕೆಂಪಾಗುವವರೆಗೆ ಕಾಯಬಾರದು ಬನ್ನಿ..! ರೈತರ ಐತಿಹಾಸಿಕ ಹೋರಾಟಕ್ಕೆ ಕಾರಣಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಇತಿಹಾಸದಲ್ಲಿ ಮೊದಲ ಬಾರಿಗೆ ರೈತರ ಗಣತಂತ್ರ ಪ್ರತಿಭಟನಾ ಪರೇಡ್; ಗಡಿಯಲ್ಲಿ ರೈತರ ಶಕ್ತಿ ಪ್ರದರ್ಶನ!

  • January 27, 2021 at 10:11 am
    Permalink

    janara hotte tumbisuva raitar horat satatavagi nadeyuttiruvalu YARRU BAGGUTTILLA yIDU OLLEYA BELAVANIGEYENU ALLA! ADARE RAITARU KOOLIGALAGI DUDIYABEKADEETENDU RATARU PARITAPISUTTIDDARE!

    Reply

Leave a Reply

Your email address will not be published.

Verified by MonsterInsights