ಫಸ್ಟ್ ನೈಟ್ ರಾತ್ರಿಯೇ ಕಂಠಪೂರ್ತಿ ಕುಡಿದು ಬಂದ ಗಂಡ : ಒಂದೇ ತಿಂಗಳಲ್ಲಿ ಮುರಿದು ಬಿತ್ತು ಮದುವೆ!

ಕಳೆದ ಅಕ್ಟೊಂಬರ್ 29 ಭರತ್ ಎಂಬಾತನ ಜೊತೆ ಮದುವೆಯಾಗಿದ್ದ ಮಹಿಳೆಯ ದಾಂಪತ್ಯ ಜೀವನ ನವೆಂಬರ್ 29 ಕ್ಕೆ ಮುರಿದು ಬಿದ್ದಿದೆ.

ಫಸ್ಟ್ ನೈಟ್ ರಾತ್ರಿಯೇ ಕಂಠಪೂರ್ತಿ ಕುಡಿದು ಬಂದ ಪತಿಯನ್ನು ಕಂಡು ಪತ್ನಿ ಶಾಕ್ ಆದ ಘಟನೆ  ಬೆಂಗಳೂರಿನ ಅಣ್ಣಸಂದ್ರಪಾಳ್ಯದಲ್ಲಿ ನಡೆದಿದೆ. ಇದೇ ಶಾಕ್ ನಲ್ಲಿದ್ದ ಪತ್ನಿಗೆ ಸಮಾಧಾನ ಮಾಡಿದ ಗಂಡನ ಮನೆಯವರು ಸಮಾಧಾನ ಮಾಡಿ ಎರಡನೇ ಬಾರಿಗೆ ಫಸ್ಟ್ ನೈಟ್ ಫಿಕ್ಸ್ ಮಾಡಲಾಗಿತ್ತು. ಸೆಕೆಂಡ್ ನೈಟ್ ಕೂಡ ಪತಿ ಕಂಠಪೂರ್ತಿ ಕುಡಿದು ಪತ್ನಿ ಜೊತೆಗೆ ಕಿರಿಕ್ ಮಾಡಿಕೊಂಡಿದ್ದಾನೆ. ಮಾತ್ರವಲ್ಲ ಹಲ್ಲೆ ಮಾಡಿದ್ದಾನೆ.

ಅಕ್ಟೊಂಬರ್ 29ರಂದು ಭರತ್ ಎಂಬಾತನ ಜೊತೆಗೆ ಮದುವೆ ಮಾಡಲಾಗಿತ್ತು. ಆದರೆ ಮದುವೆಗೂ ಮುನ್ನ ಈತನಿಗೆ ಮದುವೆಯಾಗಿತ್ತು. ಜೊತೆಗೆ ಕುಡಿಯುವ ವಿಚಾರ ಕೂಡ ಗೊತ್ತಿರಲಿಲ್ಲ. ಮಾಟ ಮಂತ್ರ ಮಾಡಿಸಲಾಗಿತ್ತು ಎಂದು ನೊಂದ ಮಹಿಳೆ ಆರೋಪಿಸಿದ್ದಾಳೆ. ಪತಿ , ಅತ್ತೆ , ಮಾವನ ಮೇಲೆ ಹೆಚ್. ಎ.ಎಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಪತ್ನಿಗೆ ಹಿಂಸೆ ಕೊಟ್ಟು ದೈಹಿಕವಾಗಿ ಹಲ್ಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಈತನೊಬ್ಬ ಫ್ರಾಡ್ ಎಂದು ದೂರಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights