ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಅಮಿತ್ ಶಾ ಭೇಟಿ ವೇಳೆ ಜಾಹೀರಾತಿಗಾಗಿ 89 ಲಕ್ಷ ಖರ್ಚು ಮಾಡಿದ ಸರ್ಕಾರ!

ಪೊಲೀಸ್‌ ಗೃಹ 2025 ಯೋಜನೆಗೆ ಚಾಲನೆ, ಬಹುಮಹಡಿ ಪೊಲೀಸ್‌ ವಸತಿ ಗೃಹಗಳ ಉದ್ಭಾಟನೆ, ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಪಡೆ (ಆರ್‌ಎಎಫ್‌) ಆಡಳಿತ ಕಚೇರಿ ಶಂಕುಸ್ಥಾಪನೆಗಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ರಾಜ್ಯ ಬಿಜೆಪಿ ಸರ್ಕಾರವು ಒಟ್ಟು 89.46 ಲಕ್ಷ ರೂ.ಗಳನ್ನು ಜಾಹೀರಾತಿಗಾಗಿಯೇ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ.

ಇದೇ ಸೆಪ್ಟ೦ಬರ್‌ ತಿ೦ಗಳಲ್ಲಿ ದಾವಣಗೆರೆಯ ಪೊಲೀಸ್‌ ಪಬ್ಲಿಕ್‌ ಸ್ಕೂಲ್‌ ಉದ್ಭಾಟನೆ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಉದ್ಭಾಟನೆಗೆ ಅಮಿತ್‌ ಶಾ ಅವರು ಭೇಟಿ ನೀಡುತ್ತಿದ್ದಾರೆ. ಈ ಬೆನ್ನಲ್ಲೇ 2021ರ ಜನವರಿ 18ರ೦ದು ಅಮಿತ್‌ ಶಾ ರಾಜ್ಯಕ್ಕೆ ಆಗಮಿಸಿದ್ದಾಗ ಜಾಹೀರಾತಿಗಾಗಿ ಖರ್ಚು ಮಾಡಿದ್ದ ವೆಚ್ಚದ ವಿವರವು ಮುನ್ನೆಲೆಗೆ ಬಂದಿದೆ.

2021ರ ಜನವರಿ 18ರ೦ದು ವಿಧಾನಸೌಧದ ಬ್ಯಾಲಕ್ಕೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರ೦ಭದಲ್ಲಿ ಅಮಿತ್‌ ಶಾ ಅವರು ಪೊಲೀಸರ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಉದ್ಭಾಟನೆ, ಶ೦ಕುಸ್ಥಾಪನೆ ನೆರವೇರಿಸಿದ್ದರು. ಈ ಕುರಿತು ಪತ್ರಿಕಾ ಜಾಹೀರಾತನ್ನು ನೇರವಾಗಿ ಏಜೆನ್ಸಿಗಳಿಗೆ ಬಿಡುಗಡೆ ಮಾಡಿತ್ತು ಎ೦ದು ತಿಳಿದು ಬಂದಿದೆ. ಬಹುವರ್ಣದಲ್ಲಿ ಒಳಪುಟಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಶೇ.25ರಷ್ಟು ಹೆಚ್ಚುವರಿ ದರ ಅನ್ವಯವಾಗಿತ್ತು.

ಜಾಹೀರಾತು ಸಂಸ್ಥೆಗಳಿಗೆ ಪಾವತಿಸಿರುವ ಮೊತ್ತದ ವಿವರ
ಎ೦ಸಿಎ ಬೆ೦ಗಳೂರು – 19, 66, 277 ರೂ.
ಆಡಿಟ್‌ ಇ೦ಡಿಯಾ ಬೆ೦ಗಳೂರು- 13, 06, 286 ರೂ.
ಬ್ರಾ೦ ಜ್‌ ಕಮ್ಯುನಿಕೇಷನ್‌ ಬೆ೦ಗಳೂರು 9, 63, 850 ರೂ.
ಶ್ರೇಷ್ಠ ಕಮ್ಯುನಿಕೇಷನ್‌ ಬೆ೦ಗಳೂರು- 6, 50, 890 ರೂ.
ಯಕ್ಷಿ ಕಮ್ಯುನಿಕೇಷನ್‌ ಬೆ೦ಗಳೂರು – 5, 50, 805 ರೂ.
ರೀ೦ಕಾರ್‌ ಅಡ್ಬರ್ಟೈಸಿ೦ಗ್‌ ಬೆ೦ಗಳೂರು – 1, 64, 850 ರೂ.
ರೀ೦ಕಾರ್‌ ಅಡ್ಬರ್ಟೈಸಿ೦ಗ್‌ ಬೆ೦ಗಳೂರು – 1, 64, 850 ರೂ.
ಫೋರ್‌ ವಿ೦ಡ್ಸ್‌ ಮಾಸ್‌ ಕಮ್ಯುನಿಕೇಷನ್ಸ್‌ -5, 34,114 ರೂ.
ಆವಂತಿ ಅಡ್ಚರ್ಟೈಸಿ೦ಗ್‌ ಬೆ೦ಗಳೂರು – 5,98,182 ರೂ.
ಸ್ಟಾನ್‌ ಕಮ್ಯುನಿಕೇಷನ್‌ ಬೆ೦ಗಳೂರು – 5,34,773 ರೂ.

ಆಕಾರ್‌ ಅಡ್ಡರ್ಟೈಸಿ೦ಗ್‌ ಬೆ೦ಗಳೂರು – 13, 07,773 ರೂ.
ರಾಜ್ಯ ಬಿಜೆಪಿ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬಕ್ಕೆ ಪತ್ರಿಕೆಗಳ ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರೂ.ಗಳನ್ನು ವೆಚ್ಚ ಮಾಡಿದ್ದನ್ನು ಸ್ಮರಿಸಬಹುದು.

ಅತಿಥಿ ಉಪನ್ಯಾಸಕರಿಗೆ ಗೌರವ ಸ೦ಭಾವನೆ, ಆಟೋ ಚಾಲಕರು, ತರಕಾರಿ, ಹೂ ಬೆಳೆಗಾರರು, ನೇಕಾರರು, ಸವಿತಾ ಸಮಾಜ, ವಲಸೆ ಕಟ್ಟಡ ಕಾರ್ಮಿಕರು ಸೇರಿದ೦ತೆ ಇನ್ನಿತರರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡದ ಸರ್ಕಾರ ಅಮಿತ್‌ ಶಾ ಕಾರ್ಯಕ್ರಮಗಳ ಜಾಹೀರಾತಿಗೆ 89 ಲಕ್ಷ ರೂ. ಖರ್ಚು ಮಾಡಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ: ಜೆಡಿಎಸ್‌ ಮುಳುಗುತ್ತಿರುವ ಪಕ್ಷ; ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಅರುಣ್‌ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights