ಬಿಜೆಪಿ-ಜೆಡಿಎಸ್ ಹಾಲಿ ಮಾಜಿ ಶಾಸಕರ ನಡುವೆ ಫೈಟ್; ತುರುವೇಕೆರೆಯಲ್ಲಿ ನಿಷೇಧಾಜ್ಞೆ ಜಾರಿ!

ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದ ಹಾಲಿ ಮಾತ್ತು ಮಾಜಿ ಶಾಸಕರುಗಳ ನಡುವೆ ಫೈಟ್‌ ಶುರುವಾಗಿದ್ದು, ಜಿಲ್ಲಾಡಳಿತ ತುರುವೇಕೆರೆಯಲ್ಲಿ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಿದೆ.

ತುರುವೇಕೆರೆಯ ಗುಡ್ಡೇನಹಳ್ಳಿ ಬಳಿ ಒತ್ತುವರಿ ಜಮೀನೊಂದರಲ್ಲಿ ಬೆಳೆದಿದ್ದ ತೆಂಗಿನ ಸಸಿಗಳನ್ನ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ತೆರವುಗೊಳಿಸಿದ್ದು, ಹಾಲಿ ಮಾಜಿ ಶಾಸಕರ ಕಚ್ಚಾಟಕ್ಕೆ ಕಾರಣವಾಗಿದ್ದು, ಕಚ್ಚಾಟ ತೀವ್ರ ಸ್ವೂಪ ಪಡೆದುಕೊಂಡಿದೆ. ಹೀಗಾಗಿ  ಸೋಮವಾರ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ತೊಡಕಾಗಿದೆ ಎಂದು ಜೆಡಿಎಸ್‌ ನಾಯಕರಿಗೆ ತೊಡಕಾಗಿದೆ.

ತೆಂಗಿನ ಸಸಿಗಳನ್ನು ಬೆಳೆದಿದ್ದ ಜೆಡಿಎಸ್‌ ಕಾರ್ಯಕರ್ತನಿಗೆ ಸೇರಿದ್ದ ತೋಟವು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ತೋಟವೆಂದು ಆರೋಪಿಸಲಾಗಿದ್ದು, ಬಿಜೆಪಿ ಶಾಸಕ ಮಸಾಲಾ ಜಯರಾಮ್ ಅವರು ತೋಟವನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ತೋಟವನ್ನು ತೆರವುಗೊಳಿಸಿದ್ದಾರೆ ಎಂದು ಎಂದು ಜೆಡಿಎಸ್‌ ಮಾಜಿ ಶಾಸಕ ಎಂಟಿ ಕೃಷ್ಣಪ್ಪ ಆರೋಪಿಸಿದ್ದಾರೆ.

ಆರೋಪ ಪ್ರತ್ಯಾರೋಪಗಳು ಗರಿಗೆದರಿದ್ದು, ಅದು ತೀವ್ರತೆ ಪಡೆದುಕೊಂಡಿದೆ. ಜೆಡಿಎಸ್‌ ಮುಖಂಡರು ಬಿಜೆಪಿ ಶಾಸಕರ ಕೊಲೆಗಡುಕ ಎಂದು ಬ್ಯಾನರ್‌ ಹಾಕಿದ್ದು, ಪೊಲೀಸರು ಕೊಲೆಗಡುಕ ಎಂಬ ಪದವನ್ನು ತೆಗೆದು ಬ್ಯಾನರ್ ಹಾಗೆ ಉಳಿಸಿದ್ದರು. ಇದು, ಜೆಡಿಎಸ್ ಮತ್ತು ಬಿಜೆಪಿ ನಡುವೆ ದ್ವೇಷಕ್ಕೆಕಾರಣವಾಗಿದೆ.

ಬಿಜೆಪಿಯವರ ಧೋರಣೆ ಖಂಡಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ಮಾಡಲು ಜೆಡಿಎಸ್ ಸಿದ್ದತೆ ನಡೆಸಿದ್ದು, ಜೆಡಿಎಸ್ ಪ್ರತಿಭಟನೆ ಮಾಡಿದರೆ ನಾವೂ ಅದೇ ದಿನ ಪ್ರತಿಭಟನೆ ಮಾಡುತ್ತೆವೆ ಎಂದು ಬಿಜೆಪಿ ಮುಖಂಡರು ಹೇಳಿದ್ದು, ಎರಡು ಪಕ್ಷಗಳ ನಡುವೆ ಘರ್ಷಣೆ ನಡೆಯಬಹುದು ಎಂಬ ಅಂದಾಜಿನ ಮೇಲೆ ಜಿಲ್ಲಾಡಳಿತವು ಸೋಮವಾರ 144‌ ಸೆಕ್ಷನ್ ಜಾರಿ ಗೊಳಿಸಿ ಆದೇಶ ಹೊರಡಿಸಿದೆ.


ಇದನ್ನೂ ಓದಿ: ರಾಜ್ಯಗಳ ಆರ್ಥಿಕತೆಗೆ ಮೋದಿ ಸರ್ಕಾರ ‘ಕೊಳ್ಳಿ’ ಇಟ್ಟಿದೆ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights