ಮಗನ ಚಿಕಿತ್ಸೆಗಾಗಿ ಪ್ರತಿ ತಿಂಗಳು 400 ಕಿ.ಮೀ ಸೈಕಲ್‌ ತುಳಿಯುತ್ತಿದ್ದ ತಂದೆ; ಕೊನೆಗೂ ಸಿಕ್ಕಿತು ಸಹಾಯಾಸ್ತ!

ಥಲಸ್ಸೆಮಿಯಾ ರೋಗಕ್ಕೆ ಒಳಗಾಗಿದ್ದ ತನ್ನ ಮಗನಿಗೆ ರಕ್ತ ವರ್ಗಾವಣೆಗೆ ವ್ಯವಸ್ಥೆ ಮಾಡಲು ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯ ಕೂಲಿ ಕೆಲಸಗಾರ ದಿಲೀಪ್‌ ಯಾದವ್‌ ಅವರು ಬೈಸಿಕಲ್‌ನಲ್ಲಿ ಪ್ರತಿ ತಿಂಗಳು 400 ಕಿ.ಮೀ ಪ್ರಯಾಣ ಮಾಡುತ್ತಿದ್ದರು. ಅವರ ಕಷ್ಟವನ್ನು ಗಮನಿಸಿದ್ದ ಬೆಂಗಳೂರು ಮೂಲದ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್‌, ಆತನ ಐದೂವರೆ ವರ್ಷದ ಮಗ ವಿವೇಕ್‌ಗೆ ಬೆಂಗಳೂರಿನ ಆಸ್ಟರ್‌ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದೆ.

ಥಲಸ್ಸೆಮಿಯಾ ಆನುವಂಶಿಕವಾಗಿ ರಕ್ತದ ಕಾಯಿಲೆಯಾಗಿದ್ದು, ಈ ರೊಗದಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಅಗತ್ಯ ಇರುವುದಕ್ಕಿಂತ ಕಡಿಮೆಯಾಗುತ್ತಿದೆ.

ಯಾದವ್ ಅವರ ಸಂಕಷ್ಟದ ಬಗ್ಗೆ ಮಾಧ್ಯಮ ವರದಿಗಳನ್ನು ಓದಿದ ನಂತರ ಅವರಿಗೆ ಸಹಾಯ ಮಾಡಲು ‘ಮಿಲಾಪ್’ ಸಂಸ್ಥೆ ಮುಂದಾಗಿದೆ. ಆಸ್ಪತ್ರೆಗೆ ತೆರಳಲು ಟ್ಯಾಕ್ಸಿಯನ್ನೂ ಪಡೆಯಲು ಸಾಧ್ಯವಾಗದ ಕಾರಣ ಲಾಕ್‌ಡೌನ್ ನಡುವೆ ಪ್ರತಿ ತಿಂಗಳು ಬೈಸಿಕಲ್‌ನಲ್ಲಿ 400 ಕಿ.ಮೀ ಪ್ರಯಾಣಿಸುದ್ದ ಯಾದವ್‌ ಅವರ ಹೋರಾಟದ ಬಗ್ಗೆ ತಿಳಿದ ನಂತರ, ಮಿಲಾಪ್ ನ ಸಂಸ್ಥಾಪಕ-ನಿರ್ದೇಶಕ ಸಂಜಯ್ ಪಾಂಡೆ ಅವರು ಯಾದವ್ ಅವರನ್ನು ಭೇಟಿಯಾಗಲು ಗೊಡ್ಡಾಗೆ ಪ್ರಯಾಣಿಸಿದ್ದರು.

ಗೊಡ್ಡಾದಲ್ಲಿ ದಿಲೀಪ್‌ ಯಾದವ್‌ ಅವರನ್ನು ಭೇಟಿ ಮಾಡಿದ ಸಂಜಯ್‌ ಪಾಂಡೆ ಅವರು, ಯಾದವ್ ಅವರ ಮಗನಿಗೆ ಉಚಿತವಾಗಿ ಚಿಕಿತ್ಸೆ ಕೊಡಿಸಲು ಸಹಾಯ ಮಾಡಬೇಕು ಎಂದು ನಾವು ನಿರ್ಧರಿಸಿದ್ದೇವೆ. ಯಾದವ್ ಅವರ ಮಗನ ವೈದ್ಯಕೀಯ ಪರೀಕ್ಷೆಯ ನಂತರ, ಆತನ ಮೂಳೆ ಮಜ್ಜೆಯ ಕಸಿಗೆ ಒಟ್ಟು 18-20 ಲಕ್ಷ ರೂ. ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಅದನ್ನು ಮಿಲಾಪ್ ಸಂಸ್ಥೆ ಸಂಪೂರ್ಣವಾಗಿ ಭರಿಸಲಿದೆ”ಎಂದು ಹೇಳಿದ್ದಾರೆ.

ಯಾದವ್ ಅವರ ಕುಟುಂಬದ ನಾಲ್ಕು ಮಕ್ಕಳು ಸೇರಿದಂತೆ ಆರು ಸದಸ್ಯರಿಗೂ ವಿಮಾನ ಟಿಕೆಟ್‌ಗಳನ್ನು ಕಳುಹಿಸಲಾಗಿದೆ. ಇದರಿಂದ ಅವರು ಬೆಂಗಳೂರಿಗೆ ಬರಲು ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮೊಟ್ಟೆಯಲ್ಲಿ ಬಂಡಾರ ಕದ್ದ ಸಚಿವೆ; ಶಶಿಕಲಾ ಜೊಲ್ಲೆ ಮನೆ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights