ದೇಶದಲ್ಲೇ ವೇಗದ ತೀರ್ಪು: ಒಂದೇ ದಿನದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡಿದ ಕೋರ್ಟ್‌!

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್‌, ಒಂದೇ ದಿನದಲ್ಲಿ ವಿಚಾರಣೆಯನ್ನು ಮುಗಿಸಿದ್ದು, ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಆರೋಪಿಯ ವಿರುದ್ದ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿ ಜಿಲ್ಲೆಯ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಶಶಿಕಾಂತ ರೈ ಅವರು ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ 50,000 ರೂಪಾಯಿ ದಂಡ ವಿಧಿಸಿದ್ದು, ಸಂತ್ರಸ್ತೆಗೆ 7 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಈ ತೀರ್ಪನ್ನು ದೇಶದ POCSO(ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯವು ಅತ್ಯಂತ ವೇಗವಾಗಿ ನೀಡಿದ ತೀರ್ಪು ಎಂದು ಪರಿಗಣಿಸಲಾಗಿದೆ.

ವಾದಗಳು ಮತ್ತು ಪ್ರತಿವಾದಗಳನ್ನು ದಾಖಲಿಸುವ ಮೂಲಕ ನ್ಯಾಯಾಲಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಟ್ರ್ಯಾಕ್ ಮಾಡಿ ಆರೋಪಿಗೆ ಶಿಕ್ಷೆ ವಿಧಿಸಿ, ಕೇವಲ ಒಂದೇ ದಿನದಲ್ಲಿ ತೀರ್ಪು ಪ್ರಕಟಿಸಿದೆ.

ಅರಾರಿಯಾದಲ್ಲಿ ನಡೆದ ಪ್ರಕರಣ ದೇಶದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಅತ್ಯಂತ ತ್ವರಿತ ವಿಚಾರಣೆಯಾಗಿದೆ. ಇದು ಮಧ್ಯಪ್ರದೇಶದ ದಾತಿಯಾ ಜಿಲ್ಲೆಯ ನ್ಯಾಯಾಲಯದ ದಾಖಲೆಯನ್ನು(ಮೂರು ದಿನಗಳಲ್ಲಿ) ಹಿಂದಿಕ್ಕಿದೆ ಎಂದು ಪೋಸ್ಕೋ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಮಲಾಲ್ ಯಾದವ್ ಹೇಳಿದ್ದಾರೆ.

ಅಪರಾಧಿಯು ಜುಲೈ 22 ರಂದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ, ಘಟನೆ ನಡೆದ ಮರುದಿನವೇ ಎಫ್‌ಐಆರ್ ದಾಖಲಿಸಲಾಗಿತ್ತು. ಅಕ್ಟೋಬರ್ 4 ರಂದೇ ತೀರ್ಪು ನೀಡಲಾಗಿತ್ತು. ಆದರೆ, ಪ್ರಕರಣಕ್ಕೆ ಸಂಬಂಧಿಸಿದ ಆರ್ಡರ್ ಶೀಟ್ ನವೆಂಬರ್ 26 ರಂದು ಲಭ್ಯವಾಗಿದೆ.

ಇದಕ್ಕೂ ಮೊದಲು, ಮಧ್ಯಪ್ರದೆಶದ ದತಿಯಾ ಜಿಲ್ಲೆಯ ಪೋಕ್ಸೋ ನ್ಯಾಯಾಲಯವು 8 ಆಗಸ್ಟ್ 2018 ರಂದು ಮೂರು ದಿನಗಳ ವಿಚಾರಣೆಯ ನಂತರ ತೀರ್ಪು ನೀಡಿತ್ತು.

ಇದನ್ನೂ ಓದಿ: ಪುನೀತ್‌ ಸಂಸ್ಥೆಗೆ ದೇಣಿಗೆ ನೀಡಲು ಆಯೋಜಿಸಿದ್ದ ಕಾರ್ಯಕ್ರಮ ರದ್ದುಗೊಳಿಸಿದ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights