Fact Check: ಶಿವ ಲಿಂಗಕ್ಕೆ ಹಾಲಿನ ಅಭಿಷೇಕ ಮಾಡುವುದನ್ನು ನಿಲ್ಲಿಸಿ ಎಂದು ಅಮೀರ್ ಖಾನ್ ಹೇಳಿಲ್ಲ

ಶಿವಲಿಂಗಕ್ಕೆ ಹಸಿವಾಗುದಿಲ್ಲಾ ಆದರೆ ಅದಕ್ಕೆ ಹಾಲು ಸುರಿಯುವುದನ್ನು ನಿಲ್ಲಿಸಬೇಕು ಎಂಬ ಹೇಳಿಕೆಯನ್ನು ಅಮೀರ್ ಖಾನ್ ನೀಡಿದ್ದಾರೆ ಎಂದು ಹೇಳಲಾಗಿದ್ದು ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ಪಾಲಯ್ ರೋಹತ್ಗಿ “ಸತ್ತವರಿಗೆ ಚಳಿಯಾಗುವುದಿಲ್ಲಾ ಮುಸ್ಲಿಂ ಗೋರಿಗಳ ಮೇಲೆ ಚಾದರ್ ಹಾಕುವುದನ್ನು ನಿಲ್ಲಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ ಎಂಬ ಪೋಸ್ಟ್ ಗಳು ಎಲ್ಲಡೆ ವೈರಲ್ ಆಗುತ್ತಿದ್ದು ಇದು ನಿಜವೆ ಎಂದು ಮುಂದೆ ನೋಡೋಣ.

ಈ ಸುದ್ದಿಯ ಆರ್ಕೈವ್ಡ್ ಆವೃತ್ತಿಯನ್ನು ಇಲ್ಲಿ ಕಾಣಬಹುದು ಹಿಂದೂ ಆಚಾರಗಳಿಗೆ ವಿರುದ್ಧ ಅಮೀರ್ ಖಾನ್ ಮಾಡಿದ ಕಾಮೆಂಟ್‌ಗಳಿಗೆ ಉತ್ತರವಾಗಿ ಪಾಯಲ್ ರೋಹತ್ಗಿ ಮುಸ್ಲಿಂ ಆಚಾರಗಳಿಗೆ ವಿರುದ್ಧವಾಗಿ ಮಾಡಿದ ಪ್ರತಿಕ್ರಿಯೆಗಳು.

 

ಹಿಂದುಗಳು ಶಿವ ಲಿಂಗಗಳ ಮೇಲೆ ಹಾಲನ್ನು ಹಾಕಬಾರದು ಎಂದು ಅಮೀರ್ ಖಾನ್, ಸತ್ತವರಿಗೆ ಚಳಿ ಇರುವುದಿಲ್ಲ ಆದ್ದರಿಂದ ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಕಪ್ಪಡ ಏಕೆ ಹಾಕಬೇಕೆಂದು ಪಾಯಲ್ ರೋಹತ್ಗಿ ಬಹಿರಂಗ ಪ್ರಕಟಣೆ ಎಂದಿಗೂ ಮಾಡಿಲ್ಲ. ಮುಸ್ಲಿಂ ಆಚಾರಕ್ಕೆ ವಿರುದ್ಧವಾಗಿ ಮಾಡಿದ ಈ ಕಾಮೆಂಟ್‌ಗಳನ್ನು ಒಬ್ಬ ಮಹಿಳೆ ಮಾಡಿದ್ದಾರೆ. ಆದರೆ ಈ ಪೋಸ್ಟ್ನಲ್ಲಿ ಮಾಡುತ್ತಿರುವ ಪ್ರತಿಪಾದನೆ ತಪ್ಪು. ಪೋಸ್ಟ್‌ನಲ್ಲಿ ಪ್ರತಿಪಾದನೆ ಮಾಡುತ್ತಿರುವ ಬಾಲಿವುಡ್ ನಟ ಅಮೀರ್ ಖಾನ್, ಹಿಂದೂಗಳು ಶಿವಲಿಂಗಗಳಿಗೆ ಹಾಲು ಸುರಿಯುವುದು ಪೋಲು ಎಂದು ಕರೆಯುತ್ತಾರೆ, ಹಿಂದೂ ಧರ್ಮದ ಆಚಾರಗಳಿಗೆ ವಿರುದ್ಧವಾದ ಈ ಹೇಳಿಕೆಯನ್ನು ಅಮೀರ್ ಖಾನ್ ಎಂದಿಗೂ ಮಾಡಿಲ್ಲ ಎಂದು ತಿಳಿದುಬಂದಿದೆ.

ಒಂದು ವೇಳ ಅಮೀರ್ ಖಾನ್ ನಿಜವಾಗಿಯೂ ಅಂತಹ ಪ್ರತಿಕ್ರಿಯೆಯನ್ನು ಮಾಡಿದ್ದರೆ, ದೇಶದ ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಈ ಬಗ್ಗೆ ಪರಿಶೀಲಿಸಿ ರಿಪೋರ್ಟ್ ಮಾಡುತ್ತಿದ್ದವು. ಆದರೆ, ಈ ಹೇಳಿಕೆಯನ್ನು ಒಂದು ಸುದ್ದಿ ಸಂಸ್ಥೆ ರಿಪೋರ್ಟ್ ಮಾಡಿರುವ ಆಧಾರಗಳು ನಮಗೆ ದೊರೆತಿವೆ. 2015 ರಲ್ಲಿ ಆಮೀರ್ ಖಾನ್ ನಡೆಸಿಕೊಡುತ್ತಿದ್ದ  ಸತ್ಯಮವೇ ಜಯತೇ ಕಾರ್ಯಕ್ರಮದಲ್ಲಿ ಮಾತನಾಡುವಾಗ ದೇವರಿಗೆ ಹಾಲು ನೀಡುವ ಬದಲು ಬಡ ಮಕ್ಕಳಿಗೆ ನೀಡಿದರೆ ಉಪಯೋಗವಾಗುತ್ತದೆ ಎಂದು ಹೇಳಿದ್ದರು. ಈ ವಿಡಿಯೋ ವನ್ನು ನಾವು ಇಲ್ಲಿ ನೋಡಬಹುದು ಪೋಸ್ಟ್ಲನಿ ಇಲ್ಲಿ, ಇಲ್ಲಿ ಅದನ್ನು ತಿರುಚಿ ಹಾಕಿರುವ ಪೋಸ್ಟ್ ಅನ್ನು ಕಾಣಬಹುದು.

ಆದರೆ   ಹಾಗೆಯೇ, ಬಿಗ್ ಬಾಸ್ ಮಾಜಿ ಸ್ಪರ್ಧಿ ಪಾಯಲ್ ರೋಹತ್ಗಿ, ಆಮೀರ್ ಖಾನ್  ನೀಡಿದ್ದಾರೆ ಎನ್ನಲಾದ ಹಿಂದೂ ಆಚಾರಗಳಿಗೆ ಸಂಬಂಧಿಸಿದ ಹೇಳಿಕೆಗೆ, ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಕಪಡಾದ ಕುರಿತು ಪ್ರತಿಕ್ರಿಯಿಸಿದ್ದಾರೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಪಾಯಲ್ ರೋಹತ್ಗಿ ನಿಜವಾಗಿಯೂ ಅಂತಹ ಪ್ರತಿಕ್ರಿಯೆಗಳನ್ನು ಮಾಡಿದ್ದರೆ, ಎಲ್ಲಾ ಪ್ರಮುಖ ಸುದ್ದಿ ಸಂಸ್ಥೆಗಳು ಈ ದೇಶದಲ್ಲಿ ಸುದ್ದಿ ಪ್ರಕಟಿಸಿ ವರದಿ ಮಾಡುತ್ತವೆ. ಆದರೆ, ಈ ವಿಷಯದ ಬಗ್ಗೆ ಯಾವ ಸುದ್ದಿಯೂ ಬಂದಿಲ್ಲಾ. ಆದರೆ ಒಬ್ಬ ಮಹಿಳೆ ಇಂತಹದೊಂದು ಪ್ರತಿಕ್ರಿಯೆ ನೀಡಿರುವ ವಿಡಿಯೋ ಕೆಲವು ಕಡೆ ಹರಿದಾಡುತ್ತಿದ್ದು ಅಮೀರ್ ಖಾನ್ ಹೇಳಿಕೆಗೆ ಪ್ರತಿಕ್ರಿಯೆ ಎಂಬಂತೆ ಈ ವೀಡಿಯೋವನ್ನು ಹಂಚಿಕೊಂಳ್ಳಲಾಗಿದೆ, ಮುಸ್ಲಿಂ ಸಮುದಾಯದಲ್ಲಿ ಇರುವಂತಹ ಆಚಾರಗಳನ್ನು ಟೀಕಿಸುತ್ತಾ ಕಮೆಂಟ್ ಮಾಡಿದ್ದಾರೆ. ಆ ವಿಡಿಯೋ ದಲ್ಲಿರುವ ಮಹಿಳೆ ಪಾಯಲ್ ರೋಹತ್ಗಿ ಎಂಬುದು ದೃಡಪಟ್ಟಿರುವುದಿಲ್ಲಾ.ಪಾಯಲ್ ರೋಹತ್ಗಿ ಅನೇಕ ಬಾರಿ ಅಮೀರ್ ಖಾನ್ ಅವರನ್ನು ಟೀಕಿಸುತ್ತಾ ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ವೀಡಿಯೊಗಳನ್ನು ಅಪ್ಲೋಡ್ ಮಾಡಿದ್ದಾರೆ. ಆ ವೀಡಿಯೊ ವನ್ನು ಇಲ್ಲಿ, ಇಲ್ಲಿ ಕಾಣಬಹುದು. ಅಲ್ಲದೆ, ಪಾಯಲ್ ರೋಹತ್ಗಿ ಹಲವು ಬಾರಿ ಮುಸ್ಲಿಂ ಆಚಾರಗಳನ್ನು ಟೀಕಿಸುತ್ತಾ ಕಾಮೆಂಟ್ಗಳನ್ನು ಮಾಡಿ ಸುದ್ದಿ ಆಗಿದ್ದಾರೆ. ಆದರೆ, ಪೋಸ್ಟ್‌ನಲ್ಲಿ ತಿಳಿಸುತ್ತಿರುವಂತೆ ಮುಸ್ಲಿಂರು ಸಮಾಧಿಗಳ ಮೇಲೆ ಚಾದರ್ ಕಪಡ ಬಗ್ಗೆ ಪಾಯಲ್ ರೋಹತ್ಗಿ ಅನ್ನುವುದಕ್ಕೆ ನಮಗೆ ಆಧಾರಗಳು ದೊರೆತಿಲ್ಲಾ.

ಅಮೀರ್ ಖಾನ್ ‘ಪೀಕೆ’ ಚಿತ್ರದಲ್ಲಿ ಶಿವಲಿಂಗದ ಮೇಲೆ ಹಾಲು ಹಾಕಿದರೆ ಬಡ ಮಕ್ಕಳ ಹಸಿವು ಪೂರೈಸಲು ಸಾಧ್ಯವಾಯಿತೆ. ಎಂಬ ವಿಚಾರದ ಬಗ್ಗೆ ಮಾತನಾಡಿದ್ದರು, ಇದನ್ನು ಗುರಿಯಾಗಿಸಿಕೊಂಡು ಒಬ್ಬ ಮಹಿಳೆ ಹೇಗಾದರೂ ಮಾಡಿ ಮುಸ್ಲಿಮರು ಕೂಡ ಸಮಧಿಗಳ ಮೇಲೆ ಚಾದರ್ ಕಪಡ ಹಾಕುವುದನ್ನು ನಿಲ್ಲಿಸಿ  ಬಡ ಜನರಿಗೆ ಚಳಿ ಇಲ್ಲವಾಗುವುದನ್ನು ನೋಡಬೇಕೆಂದು ಒಬ್ಬ ಹಿಂದೂ ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಮಾಡಿದೆ. ಈ ಹೇಳಿಕೆಗಳನ್ನು ಮಾಡಿದ ಹಿಂದೂ ಮಹಿಳೆ ಯಾರೆಂಬುದು ತಿಳಿಯುತ್ತಿಲ್ಲ. ಆದರೆ, ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆ ಪಾಯಲ್ ರೋಹತ್ಗಿ ಎಂಬ ಯಾವ ಸ್ಪಷ್ಟತೆಯೂ ಇಲ್ಲಾ..

ಕೊನೆಗೆ, ಶಿವಲಿಂಗಕ್ಕೆ ಹಾಲು ಹಾಕಬಾರದೆಂದು ಅಮೀರ್ ಖಾನ್ ಆಗಲಿ, ಮುಸ್ಲಿಮರು ಸಮಾಧಿಗಳ ಮೇಲೆ ಚಾದರ್ ಬಟ್ಟೆಯನ್ನು ಹೊದಿಸಬಾರದೆಂದು ಪಾಯಲ್ ರೋಹತ್ಗಿ ಆಗಲಿ ಎಲ್ಲಿಯೂ ಹೇಳಿಲ್ಲ ಎಂಬುದು ಸ್ಪಷ್ಟ.

ಕೃಪೆ: ಫ್ಯಾಕ್ಟ್ಲಿ

****

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights