ಕೊಳದಲ್ಲಿ ಈಜುತ್ತಿದ್ದ ವಿಶ್ವದ ಅತ್ಯಂತ ವಿಷಪೂರಿತ ಹಾವು ಕಂಡು ಕುಟುಂಬಸ್ಥರು ಶಾಕ್..!

ವಿಶ್ವದ ಅತ್ಯಂತ ವಿಷಪೂರಿತ ಕಂದು ಬಣ್ಣದ ಹಾವು ಆಸ್ಟ್ರೇಲಿಯಾದ ಮರಿನೋ ಉಪನಗರದಲ್ಲಿ ಬಿಸಿಲಿನ ಬೇಗೆಯಿಂದ ತಣ್ಣಗಾಗಲು ಈಜಾಡುತ್ತಿರುವ ದೃಶ್ಯ ಕಂಡುಬಂದಿದೆ. ದೃಶ್ಯ ಕಂಡು ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಸ್ನೇಕ್ ಕ್ಯಾಚರ್ಸ್ ಅಡಿಲೇಡ್ ಅಂದರೆ ವೃತ್ತಿಪರವಾಗಿ ತರಬೇತಿ ಪಡೆದ ಹಾವು ಹಿಡಿಯುವವರ ಗುಂಪು, ಮಂಗಳವಾರ ಮಧ್ಯಾಹ್ನ ಕುಟುಂಬವೊಂದರ ಕೊಳದ ಓವರ್‌ಫ್ಲೋ ಚಾನಲ್‌ನಲ್ಲಿ ಹಾವು ಈಜುವ ವೀಡಿಯೊವನ್ನು ಹಂಚಿಕೊಂಡಿದೆ. ಮರಿನೋದಲ್ಲಿ ಹೆಚ್ಚಾಗಿರುವ ಬಿಸಿಲಿನ ಬೇಗೆ ತಣಿಸಲು ಕಂದು ಬಣ್ಣದ ಹಾವು ತಣ್ಣಗಾಗಲು ಉತ್ತಮವಾದ ಸ್ಥಳವನ್ನು ಕಂಡುಕೊಂಡಿದ್ದು, ಕೊಳದ ಉಕ್ಕಿ ಹರಿಯುವ ಚಾನಲ್‌ನಲ್ಲಿ ಈಜುತ್ತಿರುವ ದೃಶ್ಯ ಸದ್ಯ ವೈರಲ್ ಆಗಿದೆ.

ವೀಡಿಯೋ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದ್ದು, ಕಾಮೆಂಟ್ಗಳ ವಿಭಾಗದಲ್ಲಿ ಒಬ್ಬ ವ್ಯಕ್ತಿ, “ಸುಂದರ ಈಜುಗಾರ” ಎಂದು ಹೊಗಳಿದ್ದಾರೆ. ಪೂರ್ವ ಕಂದು ಹಾವು ಸಾಮಾನ್ಯವಾಗಿ ಸಾಮಾನ್ಯ ಕಂದು ಹಾವು ಎಂದು ಕರೆಯಲ್ಪಡುತ್ತದೆ. ಇದು ಹೆಚ್ಚು ವಿಷಪೂರಿತ ಹಾವು. ಈ ಪ್ರಭೇದವು ಪೂರ್ವ ಆಸ್ಟ್ರೇಲಿಯಾದಾದ್ಯಂತ ವ್ಯಾಪಕವಾಗಿ ಕಂಡುಬರುತ್ತದೆ. ದೇಶದಲ್ಲಿ ಹೆಚ್ಚಿನ ಜನ ಇಂತಹ ಹಾವು ಕಡಿತಕ್ಕೆ ಸಾವನ್ನಪ್ಪಿದ್ದಾರೆ.

ಆಸ್ಟ್ರೇಲಿಯನ್ ಮ್ಯೂಸಿಯಂ ಪ್ರಕಾರ, ಈ ಪ್ರಭೇದದ ಹಾವು ಇತರ ಯಾವುದೇ ರೀತಿಯ ಹಾವುಗಳಿಗಿಂತ ಹೆಚ್ಚಾಗಿ ಎದುರಾಗುತ್ತದೆ. ಇದರ ವಿಷದ ಶಕ್ತಿ ಪಾರ್ಶ್ವವಾಯು ಮತ್ತು ಅನಿಯಂತ್ರಿತ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights