ಹಿರಿಯ ನಟ ದೊಡ್ಡಣ್ಣನ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ- ದೊಡ್ಡಣ್ಣನಿಂದಲೇ ಸ್ಪಷ್ಟನೆ..!

ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ ದೊಡ್ಡಣ್ಣ ಬಗ್ಗೆ ಹಬ್ಬಿದ್ದ ಸುಳ್ಳು ಸುದ್ದಿ ಹಿನ್ನೆಲೆಯಲ್ಲಿ ಖುದ್ದು ನಟ ದೊಡ್ಡಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.

ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಅವರ ಆರೋಗ್ಯ ಹದಗೆಟ್ಟಿದೆ, ವಿಧಿವಶರಾಗಿದ್ದಾರೆ’ ಅಂತೆಲ್ಲ ಸುದ್ದಿ ವೈರಲ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ನಟ ದೊಡ್ಡಣ್ಣ ಸ್ಪಷ್ಟನೆ ನೀಡಿದ್ದಾರೆ.

ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ನನ್ನ ಫೋಟೋ ಹಾಕಿ ರಿಪ್ ಎಂದು ಹಾಕಿದ್ದಾರೆ. ಹೀಗಾಗಿ ನನಗೆ ನೂರಾರು ಕರೆಗಳು ಬರುತ್ತಿವೆ. ನಾನು ಮನೆಯಲ್ಲೇ ಇದ್ದೇನೆ, ಆರೋಗ್ಯವಾಗಿದ್ದೇನೆ, ಆರಾಮಾಗಿದ್ದೇನೆ.

ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ವಿಡಿಯೊ ಮೂಲಕ ನಟ ದೊಡ್ಡಣ್ಣ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights