ಫ್ಯಾಕ್ಟ್‌ಚೆಕ್: ದರೋಡೆ ಮತ್ತು ಕೊಲೆಯ ಪ್ರಕರಣವನ್ನು ಮುಸ್ಲಿಮರಿಂದ ಹಿಂದೂಗಳ ಹತ್ಯೆ ಎಂದು ತಪ್ಪಾಗಿ ಹಂಚಿಕೆ

ದೆಹಲಿಯ ಸಂಗಮ್ ವಿಹಾರ್‌ನಲ್ಲಿ ನಡೆದ ಘಟನೆಯಲ್ಲಿ ಇಬ್ಬರು ಯುವಕರ ಮೇಲೆ ಐವರು ದುಷ್ಕರ್ಮಿಗಳು ಕ್ರೂರವಾಗಿ ಹಲ್ಲೆ ನಡೆಸಿದ ವಿಡಿಯೊವೊಂದು ವೈರಲ್ ಆಗಿದ್ದು, ಸುಮಾರು 2:20 ನಿಮಿಷಗಳ ಅವಧಿಯ ಸಿಸಿಟಿವಿ ಫೂಟೇಜ್‌ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಮುಸ್ಲಿಮರ ದಾಳಿಗೆ ಬಲಿಯಾದವರು ಹಿಂದೂ ಯುವಕರು ಎಂಬ ಪ್ರತಿಪಾದನೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಮಾಡಲಾಗಿರುವ ಆರೋಪವು ಗಂಭೀರವಾಗಿದ್ದು CC TV ದೃಶ್ಯಾವಳಿಗಳಲ್ಲಿ ಸೆರೆಯಾಗಿರುವ ಘಟನೆಯ ಸತ್ಯಾಸತ್ಯೆತೆಗಳನ್ನು ಪರಿಶೀಲಿಸೋಣ.

https://twitter.com/Principalrashtr/status/1519008728632393728?ref_src=twsrc%5Etfw%7Ctwcamp%5Etweetembed%7Ctwterm%5E1519008728632393728%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-robbery-murder-video-from-delhi-shared-with-misleading-communal-spin%2F

https://twitter.com/sunilbo87500863/status/1518420818413637632?ref_src=twsrc%5Etfw%7Ctwcamp%5Etweetembed%7Ctwterm%5E1518420818413637632%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-robbery-murder-video-from-delhi-shared-with-misleading-communal-spin%2F

ಹಲವರು ತಮ್ಮ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳಲ್ಲಿ ವಿಡಿಯೊವನ್ನು ಪೋಸ್ಟ್‌ ಮಾಡಿದ್ದಾರೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others


ಫ್ಯಾಕ್ಟ್‌ಚೆಕ್:

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ, ಇಬ್ಬರು ವ್ಯಕ್ತಿಗಳು  ಒಂದು ಕಿರಿದಾದ ರಸ್ತೆಯಲ್ಲಿ  ಹೋಗುತ್ತಿರುವ ವೇಳೆ, ಐದು ಜನರ ಗುಂಪೊಂದು ಅವರನ್ನು ಹಿಂಬಾಲಿಸಿ ಹೋಗುತ್ತದೆ. ಇದ್ದಕ್ಕಿದ್ದ ಹಾಗೆ ಅವರ ನಡುವೆ ಜಗಳ ಪ್ರಾರಂಭವಾಗುತ್ತದೆ ನಂತರ, 5 ಜನರ ಗುಂಪಿನಲ್ಲಿದ್ದ ಒಬ್ಬನು ಎದುರಿಗಿರುವ  ವ್ಯಕ್ತಿಯನ್ನು ಒದ್ದು ಕಲ್ಲಿನಿಂದ ಹೊಡೆಯಲು ಪ್ರಾರಂಭಿಸುತ್ತಾನೆ. ಇನ್ನುಳಿದ ನಾಲ್ವರು ಕೂಡ ಇನ್ನೊಬ್ಬ ಮತ್ತೊಬ್ಬ ವ್ಯಕ್ತಿಯನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಅಂತಿಮವಾಗಿ ಆ 5ಜನರ ಗುಂಪು ಇಬ್ಬರ ಮೇಲೆ ದಾಳಿ ನಡೆಸಿ ದೇಹಗಳನ್ನು ಚರಂಡಿಗೆ ಎಸೆಯುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ವ್ಯಕ್ತಿಯೊಬ್ಬ ಚರಂಡಿಯಿಂದ ಮೇಲೇಳುಲು ಪ್ರಯತ್ನಿಸುವುದು ವಿಡಿಯೊದಲ್ಲಿ ಕಾಣುತ್ತದೆ.

ಘಟನೆಯ ವಿಡಿಯೊ ಸುಳಿವಿನ ನೆರವಿನ ಮೂಲಕ ಗೂಗಲ್  ಕೀ ವರ್ಡ್ ಸರ್ಚ್ ಮಾಡಲಾಗಿದ್ದು ವೈರಲ್ ಆಗಿರುವ ಈ ಘಟನೆಯು ಡಿಸೆಂಬರ್ 2021 ರಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತ್ತು ಘಟನೆ ಕುರಿತು ಹಲವು ವರದಿಗಳು ಪ್ರಕಟವಾಗಿರುವುದು ಕಂಡುಬಂದಿದೆ.

Twitter ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ CCTV ಫೂಟೇಜ್‌ಗಳನ್ನು  ಮೊಬೈಲ್  ಬಳಸಿಕೊಂಡು ಸ್ಕ್ರೀನ್‌ನಿಂದ ರೆಕಾರ್ಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವೀಡಿಯೊವನ್ನು ಮಾನಿಟರ್‌ನಲ್ಲಿ ಸಿಸಿಟಿವಿ ಮೂಲಕ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ವ್ಯಕ್ತಿಯ ಪೂರ್ಣ ಹೆಸರು ನಿತಿನ್ ಶುಕ್ಲಾ ಎಂದು ಸ್ಕ್ರೀನ್‌ನ ಒಂದು ಮೂಲೆಯಲ್ಲಿ ಕಾಣುತ್ತದೆ.

ನಿತಿನ್ ಶುಕ್ಲಾ ಹೆಸರನ್ನು ಸುಳಿವಿನಂತೆ ತೆಗೆದುಕೊಂಡು, ನಾವು ಈ ಬಳಕೆದಾರರ YouTube ಚಾನಲ್ ಅನ್ನು ಪರಿಶೀಲಿಸಿದಾಗ ಡಿಸೆಂಬರ್ 25, 2021 ರಂದು ಮಾಡಲಾದ ಲೈವ್ ಸ್ಟ್ರೀಮ್‌ನಲ್ಲಿ ಈ ವೈರಲ್ ಬಿಟ್ ಕಂಡುಬಂದಿದೆ. ದಾಳಿ ನಡೆಯುತ್ತಿರುವ ವೈರಲ್ ಬಿಟ್ ಅನ್ನು  1:08:14 ಅವಧಿಯಲ್ಲಿ ಕಾಣಬಹುದು.

ಎನ್‌ಡಿಟಿವಿ ಪ್ರಕಾರ, ಡಿಸೆಂಬರ್ 20 ರ ರಾತ್ರಿ ಸಂಗಮ್ ವಿಹಾರ್‌ನಲ್ಲಿ ಘಟನೆ ಈ ನಡೆದಿದ್ದು, ಹಲ್ಲೆಗೊಳಗಾದ ಇಬ್ಬರು ವ್ಯಕ್ತಿಗಳನ್ನು ಪಂಕಜ್ ಮತ್ತು ಜತಿನ್ ಎಂದು ಗುರುತಿಸಲಾಗಿದೆ. ಬೆಳಗಿನ ಜಾವ 2 ಗಂಟೆಗೆ ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ಚುವರಿ ಡಿಸಿಪಿ (ದಕ್ಷಿಣ) ಹರ್ಷವರ್ಧನ್, ಇದೊಂದು ದರೋಡೆ ಮತ್ತು ಕೊಲೆ ಪ್ರಕರಣವಾಗಿದ್ದು, ಆರೋಪಿ ರಂಜನ್ ಅಲಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದರು. ಇನ್ನುಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆದಿದೆ ಎಂದು ತಿಳಿಸಿದ್ದಾರೆ. ಪೊಲೀಸರು ನೀಡಿರುವ ವಿಡಿಯೋ ಹೇಳಿಕೆ ಟ್ವಿಟರ್ ನಲ್ಲಿ ನೋಡಬಹುದು.

ಆಲ್ಟ್ ನ್ಯೂಸ್ ಘಟನೆಯನ್ನು ಫ್ಯಾಕ್ಟ್‌ಚೆಕ್ ಮಾಡುವ ಸಲುವಾಗಿ ಸಂಗಮ್ ವಿಹಾರ್‌ನ SHO  ಅವರನ್ನು ಸಂಪರ್ಕಿದಾಗ, ” ಪ್ರಕರಣವು 5-6 ತಿಂಗಳ ಹಳೆಯದು ಮತ್ತು ಪೊಲೀಸರು ಆ ಸಮಯದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು.  ಇದೊಂದು ದರೋಡೆ ಮತ್ತು ಕೊಲೆ ಕೇಸ್ ಆಗಿದ್ದು, ಯಾವುದೇ ಕೋಮು ದ್ವೇಷದ ಹಿನ್ನಲೆ ಇಲ್ಲ ಎಂದು ಪುನರುಚ್ಚರಿಸಿದರು. ಆರೋಪಿಗಳು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯದವರಾಗಿದ್ದಾರೆ ಎಂದು ತಿಳಿಸಿದ್ದರು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ದೆಹಲಿ ಪೊಲೀಸರು ಡಿಸೆಂಬರ್ 24 ರಂದು ಎಎನ್‌ಐಗೆ ನೀಡಿದ ಹೇಳಿಕೆಯು ಅದನ್ನು ಖಚಿತಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾರೆ, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ದರೋಡೆ ಮತ್ತು ಕೊಲೆಯ ಐದು ತಿಂಗಳ ಹಿಂದಿನ ಘಟನೆಯನ್ನು ಕೋಮು ದ್ವೇಷದ ಹಿನ್ನಲೆಯೊಂದಿಗೆ  ಹಂಚಿಕೊಳ್ಳಲಾಗಿದೆ, ವಾಸ್ತವವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಎರಡು ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ಇದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಧೃಡಪಡಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ದ್ವೇಷದ ಕಾರಣಕ್ಕೆ ಹಿಂದೂ ಯುವಕನನ್ನು ಮುಸ್ಲಿಮರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಪ್ಪು ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.  ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: POST CARD ಪ್ರತಿಪಾದಿಸಿದಂತೆ PSI ಪರೀಕ್ಷೆ ಅಕ್ರಮದಲ್ಲಿ ಆರೋಪಿ ದಿವ್ಯಾ ಜೊತೆ ಡಿಕೆಶಿ ನಂಟಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights