ಕೊರೊನಾ ಲಸಿಕೆ ಡೋಸ್‌ಗಳ ಅಂತರ ಹೆಚ್ಚಿಸಲು ತಜ್ಞರು ಹೇಳಿಲ್ಲ; ಸುಳ್ಳು ಹೇಳಿದೆ ಕೇಂದ್ರ ಸರ್ಕಾರ!

ಕೊರೊನಾ ವಿರುದ್ದ ನೀಡಲಾಗುತ್ತಿರುವ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ವಿಜ್ಞಾನಿಗಳು ಹೇಳಿಲ್ಲ. ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಮೂವರು ವಿಜ್ಞಾನಿಗಳು ಹೇಳಿದ್ದಾರೆ.

ಭಾರತದಲ್ಲಿ ನೀಡಲಾಗುತ್ತಿರುವ ಅಸ್ಟ್ರಾಜೆನಿಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ದ್ವಿಗುಣಗೊಳಿಸಲು ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ. ಅದರಂತೆ ಡೋಸ್‌ಗಳ ನಡುವಿನ ಅಂತರವನ್ನು 6-8 ವಾರಗಳಿಗೆ ಬದಲು 12-16 ವಾರಗಳಿಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಘೋಷಿಸಿತ್ತು.

ದೇಶದಲ್ಲಿ ಕೊರೊನಾ ಲಸಿಕೆಯ ಉತ್ಪನ್ನವು ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಲಸಿಕೆಯನ್ನು ಪೂರೈಕೆ ಮಾಡಲು ವಿಫಲವಾದ ಕೇಂದ್ರ ಸರ್ಕಾರ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿ ಮೇ 13ರಂದು ನಿರ್ಧಾರ ಪ್ರಕಟಿಸಿತ್ತು. ಇದಕ್ಕೆ ತಾಂತ್ರಿಕ ಸಲಹಾ ಸಮಿತಿಯ ವಿಜ್ಞಾನಿಗಳ ಒಪ್ಪಿಗೆಯೂ ಇದೆ ಎಂದು ಸಚಿವಾಲಯ ಹೇಳಿತ್ತು.

ಡೋಸ್ ನಡುವಣ ಅಂತರ ಹೆಚ್ಚಿಸುವ ಶಿಫಾರಸು ಮಾಡಲು ಸಾಕಷ್ಟು ದತ್ತಾಂಶಗಳು ಸಲಹಾ ಸಮಿತಿಯ ಬಳಿ ಇರಲಿಲ್ಲ ಎಂದು ಲಸಿಕಾಕರಣದ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ (ಎನ್‌ಟಿಎಜಿಐ) 14 ಸದಸ್ಯರ ಪೈಕಿ ಮೂವರು ವಿಜ್ಞಾನಿಗಳು ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸಲಹೆ ನೀಡಿರುವ 8-12 ವಾರಗಳ ಅವಧಿಯನ್ನು ಸಲಹಾ ಸಮಿತಿ ಪರಿಗಣಿಸಬಹುದು. ಆದರೆ, 12 ವಾರಗಳಿಗೂ ಹೆಚ್ಚಿನ ಅಂತರ ನಿಗದಿಪಡಿಸುವುದರಿಂದ ಆಗಬಹುದಾದ ಪರಿಣಾಮಗಳಿಗೆ ಸಂಬಂಧಿಸಿದಂತೆ ಸಮಿತಿಯ ಬಳಿ ಯಾವುದೇ ದತ್ತಾಂಶಗಳಿಲ್ಲ ಎಂ.ಡಿ.ಗುಪ್ಟೆ ಹೇಳಿದ್ದಾರೆ.

‘8-12 ವಾರಗಳ ಅಂತರ ಒಪ್ಪಬಹುದು. ಆದರೆ ಸರ್ಕಾರವು 12-16 ವಾರಗಳ ಅವಧಿ ನಿಗದಿಪಡಿಸಿದೆ. ಇದರಿಂದ ಒಳಿತಾಗಲೂಬಹುದು ಆಗದೆಯೂ ಇರಬಹುದು. ನಮ್ಮಲ್ಲಿ ಆ ಬಗ್ಗೆ ಮಾಹಿತಿ ಇಲ್ಲ’ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಚೆಸ್‌ ಚಾಂಪಿಯನ್‌ ವಿಶ್ವನಾಥ್‌ ಆನಂದ್‌ಗೆ ಮೋಸ ಮಾಡಿದ್ರಾ ನಟ ಸುದೀಪ್‌? ಚೆಸ್‌ ಕೋಚ್‌ ಹೇಳಿದ್ದೇನು?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights