ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದ ಕೆಟ್ಟುನಿಂತ ಹಡಗು; 06 ದಿನಗಳ ಬಳಿಕ ಮತ್ತೆ ಸಂಚಾರ!

ಈಜಿಪ್ಟ್‌ನ ಸುಯೆಜ್‌ ಕಾಲುವೆಯಲ್ಲಿ ಕೆಟ್ಟುನಿಂತಿದ್ದ ಬೃಹತ್‌ ಹಡಗು ಏಷ್ಯಾ ರಾಷ್ಟ್ರಗಳ ಷೇರುಪೇಟೆಯ ಮೇಲೆ ಪರಿಣಾಮ ಬೀರಿತ್ತು. ಇದೀಗ ಆ ಹಡಗು ಸಂಚರಿಸಲು ಸಡಿಲತೆಯನ್ನು ಪಡೆದುಕೊಂಡಿದೆ.

22,000 ಕಂಟೈನರ್‌ಗಳನ್ನು ಹೊತ್ತು ಬಂದಿದ್ದ ಎವರ್‌ಗ್ರೀನ್‌ ಕಂಪನಿಯ ಎವರ್‌ ಗಿವೆನ್ (400 ಮೀ ಉದ್ದ)‌ ಬೃಹತ್ ಕಂಟೇನರ್‌ ಹಡಗು ಸುಯೆಜ್‌ ಕಾಲುವೆಯಲ್ಲಿ ಅಡ್ಡಲಾಗಿ ನಿಂತುಹೋಗಿತ್ತು. ಇದರಿಂದಾಗಿ ಆ ಕಾಲುವೆಯಲ್ಲಿ ಹಲವಾರು ಹಗಡುಗಳ ಸಂಚಾರವೇ ಸ್ಥಗಿತಗೊಂಡಿತ್ತು. ಇದೀಗ ತಜ್ವರು ಮತ್ತು ಸಿಬ್ಬಂದಿಗಳ ಸತತ ಕಾರ್ಯಾಚರಣೆಯಿಂದಾಗಿ ಹಡಗು ಚಲಿಸಲು ಆರಂಭಿಸಿದೆ ಎಂದು ತಿಳಿದು ಬಂದಿದೆ.

ಮೆಡಿಟರೇನಿಯನ್ ಸಮುದ್ರದಿಂದ ಕೆಂಪು ಸಮುದ್ರದ ಕಡೆಗೆ ಬರುತ್ತಿದ್ದ ಎವರ್‌ ಗಿವೆನ್ ಹಡಗು, ಸುಯೆಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಕೆಟ್ಟು ನಿಂತಿತು. ಹಡಗಿನ ಚಲನೆ ನಿಂತುಹೋದ ಪರಿಣಾಮ ಹಡಗಿನ ನಿಯಂತ್ರಣ ಕಷ್ಟವಾಗಿತ್ತು. ಈ ವೇಳೆ ಬೀಸಿದ ಬಿರುಗಾಳಿಯಿಂದಾಗಿ ಹಡಗಿನ ಮುಂಭಾಗ ದಕ್ಷಿಣದ ಕಡೆಗೆ, ಹಿಂಭಾಗ ಉತ್ತರದ ಕಡೆಗೆ ತೇಲಿದ್ದರಿಂದಾಗಿ ಕಾಲುವೆಗೆ ಅಡ್ಡಲಾಗಿ ನಿಂತಿತ್ತು. ಕಾಲುವೆಯ ಎರಡೂ ಬದಿಯಲ್ಲಿದ್ದ ಮರಳುಗಳಿಗೆ ಒತ್ತಿಕೊಂಡಿದ್ದ ಹಡಲು ಅಲುಗಾಡಲೂ ಸಾಧ್ಯವಾಗ ಸ್ಥಿತಿ ನಿರ್ಮಾಣವಾಗಿತ್ತು.

ಇದರಿಂದಾಗಿ, ಅದೇ ಕಾಲುವೆಯಲ್ಲಿ ಎರಡೂ ಬದಿಯಿಂದ ಸಂಚರಿಸುತ್ತಿದ್ದ, ಮಧ್ಯಪ್ರಾಚ್ಯ ದೇಶಗಳಿಂದ ವಿಶ್ವದ ವಿವಿಧೆಡೆಗೆ ಸಾಗುತ್ತಿದ್ದ ಸುಮಾರು 200ಕ್ಕೂ ಹೆಚ್ಚು ತೈಲವಾಹಕ ಹಡಗುಗಳು ಕಾಲುವೆಯಲ್ಲಿಯೇ ನಿಂತಿದ್ದವು. ಪರಿಣಾಮ, ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದುಏಷ್ಯಾ ರಾಷ್ಟ್ರಗಳ ವಹಿವಾಟಿಗೆ ಒಡೆತವನ್ನೂ ನೀಡಿತ್ತು.

ಇದೀಗ, ಹಡಗಿಗೆ ಒತ್ತುಕೊಂಡಿದ್ದ ಮರಳು ಮತ್ತು ಮಣ್ಣನ್ನು ತೆಗೆಯಾಗಿದ್ದು, ಸುಮಾರು 10ಕ್ಕೂ ಹೆಚ್ಚು ಟಗ್‌ಬೋಟ್‌ಗಳ ಸಹಕಾರದಿಂದ ಹಡಗಿನ ಪಥ ಬದಲಿಸಲಾಗಿದೆ. ಈಗಾಗಿ ಅಡ್ಡಲಾಗಿ ನಿಂತಿದ್ದ ಹಲವು ಸಂಚಾರ ಆರಂಭಿಸಿದೆ. ಉಳಿದ ಹಡಗುಗಳೂ ಈಗ ತಮ್ಮ ಪ್ರಯಾಣವನ್ನು ಪ್ರಾರಂಭಿಸಿವೆ ಎಂದು ಇಂಚ್‌ ಕೇಪ್‌ ಶಿಪ್ಪಿಂಗ್‌ ಸರ್ವೀಸಸ್‌ ತಿಳಿಸಿರುವುದಾಗಿ ರಾಯ್‌ಟರ್ಸ್‌ ವರದಿ ಮಾಡಿದೆ.

ಇದನ್ನೂ ಓದಿ: ವಿಶ್ವದಲ್ಲಿ ಎಷ್ಟು ಹೆಕ್ಟೆರ್ ಅರಣ್ಯವಿದೆ ಗೊತ್ತಾ..? ಅತಿ ದೊಡ್ಡ 5 ಅರಣ್ಯಗಳ ಪಟ್ಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights