ನೀಟ್ ಫಲಿತಾಂಶ ಪ್ರಕಟಣೆಯಲ್ಲಿ ದೋಷ: 06 ಅಂಕ ಗಳಿಸಿದ್ದೇನೆಂದು ವಿದ್ಯಾರ್ಥಿನಿ ಆತ್ಮಹತ್ಯೆ

ಕಂಪ್ಯೂಟರ್‌ ದೋಷ ಅಥವಾ ಫಲಿತಾಂಶ ತಪ್ಪು ಪ್ರಕರಣೆಯಿಂದಾಗಿ ಅತ್ಯಂತ ಕಡಿಮೆ ಅಂಕ ಗಳಿಸಿದ್ದ ರಾಷ್ಟ್ರೀಯ ಅರ್ಹತೆ-ಪ್ರವೇಶ ಪರೀಕ್ಷೆ (ನೀಟ್) ಬರೆದಿದ್ದ ವಿದ್ಯಾರ್ಥಿನಿಯೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ಒಳಗಾದ ವಿಧಿ ಸೂರ್ಯವಂಶಿ ತನ್ನ ನೀಟ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿದಾಗ, ಆಕೆಯ ಹೆಸರಿನ ಮುಂದೆ ಆರು ಅಂಕಗಳು ಇರುವುದನ್ನು ನೋಡಿದ್ದಾರೆ. ಅತ್ಯಂತ ಕಳಪೆ ಅಂಕಗಳನ್ನು ಗಳಿಸಿದ್ದೇನೆ ಎಂದು ಖಿನ್ನತೆಗೆ ಒಳಗಾದ ಯುವತಿ, ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಖಿನ್ನತೆಗೆ ಒಳಗಾಗಿದ್ದ ಯುವತಿಯನ್ನು ಸಂತೈಸಲು ಆಕೆಯ ಮನೆಯವರು ಮತ್ತೊಮ್ಮೆ ಫಲಿತಾಂಶವನ್ನು ಓಎಂಆರ್‌ ಶೀಟ್‌ನಲ್ಲಿ ಪರಿಶೀಲಿಸಿದಾಗ, ಆಕೆ 590 ಅಂಕಗಳನ್ನು ಗಳಿಸಿರುವುದು ತಿಳಿದಿದೆ. ಯುವತಿ 590 ಅಂಕಗಳನ್ನು ಗಳಿಸಿದ್ದಾಳೆ ಎಂದು ವಿಧಿ ಸೂರ್ಯವಂಶಿಯನ್ನು ಉರಿದುಂಬಿಸಲು ಪೋಷಕರು ಯತ್ನಿಸಿದರೂ ಯುತಿಕೆ ಅವರ ಮಾತಿಗೆ ಕಿವಿಗೊಡದೆ ಸಾವಿಗೆ ಶರಣಾಗಿದ್ದಾಳೆ.

NEET Results: MP Student Dies by Suicide After Getting 6 Marks, OMR Sheet Actually Shows 590! | India.com

ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಸಂತ್ರಸ್ತೆಯ ಶವವನ್ನು ಶವಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ದುರಂತ ಕಥೆಯು ವ್ಯವಸ್ಥೆಯೊಳಗಿನ ಲೋಪಕ್ಕೆ ಕನ್ನಡಿ ಹಿಡಿದಿದ್ದು, ಇಂತಹ ನೂರಾರು ಸಂಗತಿಗಳು ತಾಂತಿಕ್ರ ಲೋಪದೋಷಗಳಿಂದ ಸಂಭವಿಸುತ್ತಿವೆ. ಇಂತಹ ಘಟನೆಗಳು ಸಂಬಂಧಪಟ್ಟ ಪ್ರತಿಯೊಬ್ಬರನ್ನು ಕಾಡುವಂತದ್ದಾಗಿದ್ದರೂ, ಯಾರೂ ಈ ಬಗ್ಗೆ ಎಚ್ಚೆತ್ತುಕೊಳ್ಳದೇ ಇರುವುದು ಇಂತಹ ಘಟನೆಗಳ ಮರುಕಳಿಸುವಿಕೆಗೆ ಕಾರಣವಾಗಿದೆ.

ಈ ಹಿಂದೆ, ಇದೇ ನೀಟ್‌ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷೆಗೆ ಮತ್ತು ಕೊರೊನಾಗೆ ಹೆದರಿದ ನಾಲ್ಕು ಮಂದಿ ವಿದ್ಯಾರ್ಥಿಗಳು ತಮಿಳುನಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪರೀಕ್ಷೆಯ ಫಲಿತಾಂಶಗಳು ಕೆಲವೊಮ್ಮೆ ವಿದ್ಯಾರ್ಥಿಗಳಲ್ಲಿ ದೊಡ್ಡ ನಿರಾಶೆಗೆ ಕಾರಣವಾಗುತ್ತದೆ.  ಅದು ಆತ್ಮಹತ್ಯೆಯಂತಹ ತೀವ್ರ ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಅವರು ತಮ್ಮ ಫಲಿತಾಂಶಗಳಲ್ಲಿ ತೃಪ್ತಿದಾಯಕವಾಗಿಲ್ಲದಿದ್ದರೆ ಅಥವಾ ಸಾಮಾಜಿಕ ಒತ್ತಡಕ್ಕೆ ಹೆದರುತ್ತಿದ್ದರೆ ಮತ್ತು ತಮ್ಮ ಪೋಷಕರನ್ನು ನಿರಾಸೆಗೊಳಿಸಿದ್ದಾರೆ ಎಂಬ ಭಾವನೆ ಇದ್ದಲ್ಲಿ ಇಂತಹ ಘಟನೆಗಳು ಎದುರಾಗುತ್ತವೆ.

ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಭರವಸೆಗಳನ್ನು ತುಂಬುವ ಅಗತ್ಯ ಕ್ರಮಗಳನ್ನು ಶಿಕ್ಷಣ ವ್ಯವಸ್ಥೆ ಕೈಗೊಳ್ಳಬೇಕು.


ಇದನ್ನೂ ಓದಿ: ತಮಿಳುನಾಡಿನ ನಾಲ್ಕು ನೀಟ್ ಆಕಾಂಕ್ಷಿಗಳು ಪರೀಕ್ಷೆಗೂ ಮೊದಲೇ ಆತ್ಮಹತ್ಯೆ…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights