ಅಮೆರಿಕಾ ಫಲಿತಾಂಶದ ನಂತರ ಮತ ಚಲಾಯಿಸಿ ಎಂದ ಟ್ರಂಪ್‌ ಪುತ್ರ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್‌

ಡೊನಾಲ್ಡ್ ಟ್ರಂಪ್ ಅವರ ಪುತ್ರ ಎರಿಕ್ ಟ್ರಂಪ್ ಅವರು 2020ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅಪಹಾಸ್ಯದ ಟ್ರೋಲ್‌ಗೆ ಒಳಲಾಗಿದ್ದಾರೆ.

ಚುನಾವಣೆ ನಡೆದು ಒಂದು ವಾರ ಕಳೆದ ನಂತರ (ಮಂಗಳವಾರ) ಟ್ವೀಟ್‌ ಮಾಡಿರುವ ಟ್ರಂಪ್‌ ಪುತ್ರ, ಅಮರಿಕಾದ ಮಿನ್ನೇಸೋಟ ಪ್ರದೇಶದ ಜನರನ್ನು “ಹೊರಬಂದು ಮತ ಚಲಾಯಿಸಿ” ಎಂದು ಒತ್ತಾಯಿಸಿದರು. ಅಲ್ಲದೆ, ತಮ್ಮ ಟ್ವೀಟ್‌ ಅನ್ನು ಕೆಲವೇ ನಿಮಿಷಗಳಲ್ಲಿ ಅಳಿಸಲಾಗಿದೆ,

ಆದರೆ, ಕ್ಷಣಾರ್ಧದಲ್ಲಿಯೇ ಎರಿಕ್‌ ಟ್ರಂಪ್‌ ಅವರ ಟ್ವೀಟ್‌ನ ಸ್ರೀನ್‌ ಶಾಟ್‌ಅನ್ನು ತೆಗೆದುಕೊಂಡಿದ್ದ ಸಮಾಜಿಕ ಜಾಲತಾಣಿಗರು ವೈರಲ್‌ ಮಾಡಿದ್ದು, ನಾನಾ ರೀತಿಯಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ.

https://twitter.com/RexChapman/status/1326192029131485186?s=20

ಚುನಾವಣಾ ದಿನದಂದು, ಎರಿಕ್ ಟ್ರಂಪ್ ಇದೇ ರೀತಿಯ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು, ಜನರು ಮತ ಚಲಾಯಿಸುವಂತೆ ಒತ್ತಾಯಿಸಿದರು. ಅದೇ ರೀತಿಯಲ್ಲಿ ಮಿನ್ನೇಸೋಟದ ಜನರನ್ನು ಮತಚಲಾಯಿಸುವಂತೆ ಒತ್ತಾಯಿಸಿ ಪೋಸ್ಟ್‌ ಹಾಕಿದ್ದಾರೆ. ಬಹುಶಃ ಟ್ವೀಟ್‌ ಮಾಡುವ ವೇಳಪಟ್ಟಿಯಲ್ಲಾಗಿರುವ ಯಡವಟ್ಟಿನಿಂದ ಆ ಟ್ವೀಟ್‌ ಒಂದು ವಾರದ ನಂರತ ಟ್ವೀಟ್‌ ಆಗಿರಲು ಕಾರಣವಾಗಿರಬಹುದು ಎಂದು ಹೇಳಲಾಗಿದೆ.

https://twitter.com/BizarreLazar/status/1326372589258764288?s=20

ಎರಿಕ್‌ ಟ್ರಂಪ್‌ಅವರ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಅನ್ನು ಟ್ರೋಲ್‌ ಮಾಡಿರುವ ನೆಟ್ಟಿಗರು, ಟ್ರಂಪ್‌ ಸೋಲನುಭವಿಸಿರುವ ಹಿನ್ನೆಲೆಯಲ್ಲಿ ಅಪಹಾಸ್ಯ ಮಾಡಿ ನಕ್ಕಿದ್ದಾರೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರತಿಸ್ಪರ್ಧಿ ಡೆಮೋಕ್ರಾಟ್ ಗೆದ್ದಿರುವ ಚುನಾವಣೆಯನ್ನು “ಅಮೆರಿಕಾದ ಜನರ ಮೇಲಿನ ವಂಚನೆ” ಎಂದು ಕರೆದಿದ್ದಾರೆ ಮತ್ತು ತಮ್ಮ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಚುನಾವಣಾ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿರುವುದು ಅವರಿಗೆ “ಮುಜುಗರ” ಎಂದು ಕರೆದಿದ್ದಾರೆ.


ಇದನ್ನೂ ಓದಿ: Bihar: ಸರಳ ಬಹುಮತ ಪಡೆದ NDA; 5ನೇ ಬಾರಿಯೂ ನಿತೀಶ್‌ ಮುಖ್ಯಮಂತ್ರಿ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights