‘ನನಗಿನ್ನೂ ವಿಚ್ಛೇದನ ನೀಡಿಲ್ಲ’ : ನಟಿ ಪ್ರಿಯಾಮಣಿ ದಾಂಪತ್ಯದಲ್ಲಿ ಪತಿಯ ಮೊದಲ ಪತ್ನಿ ಎಂಟ್ರಿ!
ಮದುವೆಯಾಗಿ ನಾಲ್ಕು ವರ್ಷ ಕಳೆದಿಲ್ಲ ಅದಾಗಲೇ ನಟಿ ಪ್ರಯಾಮಣಿ ದಾಂಪತ್ಯ ಜೀವನದಲ್ಲಿ ಕರಿ ನೆರಳು ಬಿದ್ದಿದೆ.
2017ರಲ್ಲಿ ಮದುವೆಯಾದ ಬಹುಭಾಷಾ ನಟಿ ಪ್ರಿಯಾಮಣಿಯ ಪತಿ ಮುಸ್ತಾಫಾ ರಾಜ್ ಅವರ ಪತ್ನಿ ತಮ್ಮಿಬ್ಬರ ಮಧ್ಯೆ ವಿಚ್ಛೇದನವಾಗಿಲ್ಲ ಎನ್ನುವ ಆರೋಪ ಮಾಡಿದ್ದಾರೆ.
ಹೌದು… 2013ರಲ್ಲಿ ಆಯೆಷಾ ರಿಂದ ದೂರವಾದ ಮುಸ್ತಾಫಾ ಪ್ರಿಯಾಮಣಿಯನ್ನು ಮದುವೆಯಾಗಿದ್ದರು. ಮುಸ್ತಾಫಾ ಹಾಗೂ ಆಯೆಷಾ ಅವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪ್ರತೀ ಬಾರಿ ಮಕ್ಕಳಿಗೆ ಬೇಕಾಗುವ ಖರ್ಚನ್ನು ತಾವು ನೀಡುತ್ತಿರುವುದಾಗಿ ಮುಸ್ತಾಫಾ ಹೇಳಿಕೊಂಡಿದ್ದಾರೆ. ಹೆಚ್ಚು ಹಣಕ್ಕಾಗಿ ಆಯೆಷಾ ಈ ರೀತಿ ಆರೋಪ ಮಾಡುತ್ತಿದ್ದಾರೆಂದು ಹೇಳುತ್ತಿದ್ದಾರೆ.
ಇಷ್ಟು ದಿನ ಸುಮ್ಮನ್ನಿದ್ದ ಪತ್ನಿ ಆಯೆಷಾ ಈಗ ಯಾಕೆ ಈ ಆರೋಪ ಮಾಡುತ್ತಿದ್ದಾರೆನ್ನುವ ಪ್ರಶ್ನೆಗೆ ಮುಸ್ತಫಾ ಪ್ರತಿಕ್ರಿಯಿಸಿ ಆಯೆಷಾ ಗೆ ಹಣದ ಆಸೆ ಹೆಚ್ಚಾಗಿದೆ. ಹೀಗಾಗಿ ನಮ್ಮಿಬ್ಬರ ಮಧ್ಯೆ ಪ್ರವೇಶ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮದುವೆಯಾದಗಿನಿಂದಲೂ ಸಂತೋಷವಾಗಿರುವ ಪ್ರಿಯಾಮಣಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.