ಫ್ಯಾಕ್ಟ್‌ಚೆಕ್: ಬಲಪಂಥೀಯರಿಗೆ ತಿರುಗೇಟು ನೀಡಲು ದೀಪಿಕಾ ಪಡುಕೋಣೆ ಕೇಸರಿ ಶೂ ಧರಿಸಿದ್ದು ನಿಜವೇ?

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಅಭಿಯನದ ಪಠಾಣ್ ಬಾಲಿವುಡ್ ಚಿತ್ರ ವಿವಾದ ಸುಳಿಯಲ್ಲಿ ಸಿಲುಕಿದೆ. ಬಲಪಂಥೀಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತಪಡಿಸಿವೆ. ಬೇಶರಮ್‌ ರಂಗ್‌ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಹಿಂದು ಸಂಘಟನೆಗಳು, ಗುಜರಾತ್‌ನಲ್ಲಿ ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದಿವೆ.

ಬಲಪಂಥೀಯ ಸಂಘಟನೆಗಳಾದ ವಿಶ್ವಹಿಂದು ಪರಿಷತ್‌ ಹಾಗೂ ಬಜರಂಗದಳ ಕಾರ್ಯಕರ್ತರು ಅಹಮದಾಬಾದ್‌ನ ವಸ್ತ್ರಪುರದಲ್ಲಿರುವ ಮಾಲ್‌ವೊಂದರಲ್ಲಿ ಬುಧವಾರ ಗಲಾಟೆ ನಡೆದ್ದಾರೆ. ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ, ಪಠಾಣ್‌ ಚಿತ್ರದಲ್ಲಿ ನಟರಿರುವ ಪೋಸ್ಟರ್‌ ಮತ್ತು ಕಟೌಟ್‌ಗಳನ್ನು ಹರಿದು ಹಾಕುತ್ತಿರುವ ವಿಡಿಯೋವೊಂದನ್ನು ವಿಎಚ್‌ಪಿ ಹಂಡಿಕೊಂಡಿದೆ. ಈ ಎಲ್ಲಾ ಬೇಲವಣಿಗೆಗಳ ನಡುವೆ ದೀಪಿಕಾ ಪಡುಕೋಣೆಯವರ ಮತ್ತೊಂದು ಫೋಟೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. 

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನೀಲಿ ಮತ್ತು ಬಿಳಿ ಗೆರೆಗಳ ಕೋ-ಆರ್ಡ್ ಪ್ಯಾಂಟ್‌ಸೂಟ್ ಮತ್ತು ಕೇಸರಿ ಬೂಟುಗಳನ್ನು ಧರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜನವರಿ 25 ರಂದು ಬಿಡುಗಡೆಯಾಗಲಿರುವ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾನ್’ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಅಪಹಾಸ್ಯ ಮಾಡಲು ನಟಿ ಕೇಸರಿ ಬೂಟುಗಳನ್ನು ಧರಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ? ದೀಪಿಕಾ ಪಡುಕೋಣೆ ಪಠಾಣ್ ಚಿತ್ರವನ್ನು ಬಾಯ್ಕಾಟ್‌ ಮಾಡಿದ ಬಲಪಂಥೀಯ ಸಂಘಟನೆಯವರಿಗೆ ಟಾಂಗ್ ನೀಡಲು ಹೀಗೆ ಮಾಡಿದ್ದಾರೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ದೀಪಿಕಾ ಪಡುಕೋಣೆ ನೀಲಿ ಮತ್ತು ಬಿಳಿ ಸ್ಟ್ರೈಪ್ಸ್‌ ಹೊಂದಿರುವ ಸೂಟ್ ಜೊತೆಗೆ ಕೇಸರಿ ಬಣ್ಣದ ಹೀಲ್ಸ್ ಧರಿಸಿರುವ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಇದನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ,17 ಮೇ 2019 ರಂದು ಪ್ರಕಟವಾದ ವೋಗ್‌ನಲ್ಲಿನ ಲೇಖನದ ಪ್ರಕಾರ, ಇದು 2019 ರಲ್ಲಿ ನಡೆದ 72 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪಡುಕೋಣೆ ಅವರು ಈ ರೀತಿಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Cannes 2019: 'Boss Lady' Deepika Padukone exudes power in pinstripe plunging neckline suit

ಪಡುಕೋಣೆ ಅವರ ಸ್ಟೈಲಿಸ್ಟ್ ಶಲೀನಾ ನಥಾನಿ ಅವರು 2019 ರಲ್ಲಿ Instagram ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು ಮತ್ತು #cannes2019 ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದ್ದರು.

 

View this post on Instagram

 

A post shared by Shaleena Nathani (@shaleenanathani)

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೋ 2019 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕ್ಯಾನೆಸ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಡುಕೋಣೆ ಭಾಗವಹಿಸಿದಾಗ ಲೋವೆ ವಿನ್ಯಾಸಗೊಳಿಸಿದ ಪಿನ್‌ಸ್ಟ್ರೈಪ್ ಪ್ಲಂಗಿಂಗ್ ನೆಕ್‌ಲೈನ್ ಸೂಟ್ ಮತ್ತು ಕೇಸರಿ ಬಣ್ಣದ ಶೂ ಧರಿಸಿದಾಗ ಸೆರೆಯಾದ 3 ಹಳೆಯ  ಫೋಟೋ ಎಂಬುದು ಸ್ಪಷ್ಟವಾಗಿದೆ.

ಆದ್ದರಿಂದ, ‘ಪಠಾಣ್’ ಚಿತ್ರವನ್ನು ಬಾಯ್ಕಾಟ್ ಮಾಡಿದ ಬಲಪಂಥೀಯರನ್ನು ಅಪಹಾಸ್ಯ ಮಾಡಲು ದೀಪಿಕಾ ಪಡುಕೋಣೆ ಈ ರೀತಿ ಕೇಸರಿ ಬೂಟುಗಳನ್ನು ಧರಿಸಿದ್ದಾರೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ಪಠಾಣ್ ಚಿತ್ರದ ವಿವಾದದ ಹಿನ್ನಲೆಯಲ್ಲಿ ಈ ಫೋಸ್ಟ್‌ಅನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ನ್ಯೂಸ್‌ ಮೀಟರ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬೇರಿಲ್ಲದೆ ನೇತಾಡುವ ಮರ ಅಸ್ತಿತ್ವದಲ್ಲಿದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights