ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆಯ ಮೇಲೆ ಇಡಿ ದಾಳಿ; ಸರ್ಕಾರವನ್ನು ವಿಮರ್ಶಿಸಿದ್ದಕ್ಕೆ ಪತ್ರಕರ್ತರಿಗೆ ಕಿರುಕುಳ ಎಂದ ನೆಟ್ಟಿಗರು!

ದೆಹಲಿ ಮೂಲದ ಸ್ವತಂತ್ರ ನ್ಯೂಸ್‌ ವೆಬ್‌ ಪೋರ್ಟಲ್ ನ್ಯೂಸ್‌ಕ್ಲಿಕ್‌.ಇನ್‌ನ ಸಿಬ್ಬಂದಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರ ನಿವಾಸಗಳ ಮೇಲೆ ಮಂಗಳವಾರ ಬೆಳಿಗ್ಗೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ.

ನ್ಯೂಸ್‌ಕ್ಲಿಕ್‌.ಇನ್‌ ವೆಬ್‌ಸೈಟ್‌ನ ಮಾಲೀಕ ಪ್ರಬೀರ್‌ ಪುರ್‌ಕಯಸ್ಥ ಮತ್ತು ಸಂಪಾದಕ ಪ್ರಂಜಲ್‌ ಅವರ ನಿವಾಸ ಹಾಗೂ ದೆಹಲಿಯ ಸೈದುಲಾಜಾಬ್‌ನಲ್ಲಿರುವ ಸಂಸ್ಥೆಯ ಕಚೇರಿಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ನ್ಯೂಸ್ಕ್ಲಿಕ್ ಮೇಲಿನ ದಾಳಿಗಳು ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿವೆ. ವಿದೇಶದಲ್ಲಿ “ಸಂಶಯಾಸ್ಪದ ಕಂಪನಿಗಳಿಂದ” ಸಂಸ್ಥೆಗೆ ಹಣವನ್ನು ಸಂದಾಯವಾಗಿದೆ ಎಂಬ ಅರೋಪದ ಮೇಲೆ ಇಟಿ ಪರಿಶೀಲನೆ ನಡೆಸುತ್ತಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ನ್ಯೂಸ್‌ಕ್ಲಿಕ್‌ ಯೂಟ್ಯೂಬ್ ಕಾರ್ಯಕ್ರಮಗಳನ್ನು ನಡೆಸುವ ಆಂಕರ್ ಅಭಿಸರ್ ಶರ್ಮಾ ಕೂಡ ಟ್ವಿಟರ್‌ನಲ್ಲಿ ನ್ಯೂಸ್‌ಕ್ಲಿಕ್‌ ಸಂಸ್ಥೆಯ ಮೇಲಿನ ದಾಳಿಯನ್ನು ಖಚಿತಪಡಿಸಿದ್ದಾರೆ.

ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ತಂತ್ರಗಳು, ಜನವಿರೋಧಿ ನೀತಿಗಳು ಹಾಗೂ ದುರಾಡಳಿತದ ಬಗ್ಗೆ ಸುದ್ದಿಗಳನ್ನು ವರದಿ ಮಾಡುತ್ತಿದ್ದ ಕಾರಣದಿಂದಾಗಿ ನ್ಯೂಸ್‌ಕ್ಲಿಕ್‌ ಪತ್ರಕರ್ತರಿಗೆ ಕಿರುಕುಳ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ರೀತಿಯಲ್ಲಿ ಇಡಿ ದಾಳಿ ನಡೆಸಿದೆ ಎಂದು ಕೆಲವು ಪತ್ರಕರ್ತರು ಸೋಷಿಯಲ್‌ ಮೀಡಿಯಾದಲ್ಲಿ ಆರೋಪಿಸಿದ್ದಾರೆ.

ದೇಶದ್ರೋಹ ಪ್ರಕರಣಗಳು, ಯುಎಪಿಎ, 153, 505, ಇತ್ಯಾದಿಗಳಂತಹ ಎಫ್‌ಐಆರ್‌ಗಳು, ಕ್ಷುಲ್ಲಕ ಮಾನನಷ್ಟ ಮೊಕದ್ದಮೆಗಳು ಮತ್ತು ಈಗ ಇಡಿ ದಾಳಿಗಳ ಮೂಲಕ ಭಾರತದ ಸ್ವತಂತ್ರ ಮಾಧ್ಯಮವನ್ನು ಸರ್ಕಾರ ನಿಯಂತ್ರಿಸಲು ಯತ್ನಿಸುತ್ತಿದೆ. ಇಂತಹ ದಾಳಿಗೆ ಈಗ ನ್ಯೂಸ್‌ಕ್ಲಿಕ್‌ ಗುರಿಯಾಗಿದೆ ಎಂದು ಸಿದ್ದಾರ್ಥ್‌ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಮಾಧ್ಯಮಗಳ ಮೇಲೆ ಮೋದಿ ಸರ್ಕಾರದ ದಾಳಿ ಮುಂದುವರೆದಿದೆ. ಸರ್ಕಾರದ ನೀತಿಗಳ ಬಗ್ಗೆ ವಿಮರ್ಶಾತ್ಮಕ ವರದಿ ಮಾಡುವುದರಲ್ಲಿ  ನ್ಯೂಸ್‌ಕ್ಲಿಕ್ ಕೂಡ ಒಂದು. ದೆಹಲಿಯಲ್ಲಿ ನ್ಯೂಸ್ಕ್ಲಿಕ್ ಕಚೇರಿ, ಮಾಲೀಕ ಪ್ರಬೀರ್ ಪುರ್ಕಯಸ್ಥ ಮತ್ತು ಸಂಪಾದಕ ಪ್ರಾಂಜಲ್ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿ, ಪತ್ರಕರ್ತರಿಗೆ ಕಿರುಕುಳ ನೀಡಲು ಸರ್ಕಾರ ಮುಂದಾಗಿದೆ ಎಂದು ಮೊಹಮದ್‌ ಅಲಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮ-ಗಾಸಿಪ್: ಟ್ರಂಪ್-ಮೋದಿಯಂತಹ ಜನರು ಪ್ರಚಾರ ಪಡೆದುಕೊಂಡಿದ್ದು ಹೇಗೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights